More

    ಡೆತ್​ರೇಟ್​ ಜುಗಲ್​ಬಂದಿ

    ಜಯತೀರ್ಥ ಪಾಟೀಲ ಕಲಬುರಗಿ
    ಕರೊನಾ ರಣಕೇಕೆಯಲ್ಲೂ ತೊಗರಿ ಕಣಜ ಕಲಬುರಗಿ ರಾಜಧಾನಿ ಬೆಂಗಳೂರಿಗೆ ಸವಾಲೊಡ್ಡುತ್ತಿದೆ. ಕರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರನ್ನೇ ಹಿಂದಿಕ್ಕುವ ಬಹುತೇಕ ಲಕ್ಷಣ ಗೋಚರಿಸುತ್ತಿದೆ.
    ಒಂದು ಕೋಟಿಗೂ ಅಧಿಕ ಜನಸಂಖ್ಯೆಯ ಬೆಂಗಳೂರಿನಲ್ಲಿ ಎಂಟು ಸಾವು ಸಂಭವಿಸಿದ್ದರೆ, ಸುಮಾರು 30 ಲಕ್ಷ ಜನಸಂಖ್ಯೆಯ ಕಲಬುರಗಿ ಜಿಲ್ಲೆಯಲ್ಲಿ ಏಳು ಜನ ಕರೊನಾಕ್ಕೆ ಬಲಿಯಾಗಿದ್ದಾರೆ.
    ಸಾವಿನ ವಿಷಯದಲ್ಲಿ ರಾಜ್ಯದ ರಾಜಧಾನಿ ಜತೆ ಪ್ರಬಲ ಪೈಪೋಟಿ ನೀಡುತ್ತಿರುವ ಜಿಲ್ಲೆಯಲ್ಲಿ ಕರೊನಾ ಕಂಟ್ರೋಲ್ಗೆ ಬರುತ್ತಿಲ್ಲ ಎಂಬುದಕ್ಕೆ ಈವರೆಗಿನ ಏಳು ಪ್ರಕರಣಗಳೇ ಸಾಕ್ಷಿ. ಶತಾಯ-ಗತಾಯ ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಮೃತರ ಸಂಖ್ಯೆ ಏರಿಕೆ ಕಾಣುತ್ತಿರುವುದು ಬೆಚ್ಚಿ ಬೀಳುವಂತೆ ಮಾಡಿದೆ.
    ದೇಶದಲ್ಲೇ ಕರೊನಾಕ್ಕೆ ಮೊದಲ ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಅಂದಿನಿಂದಲೇ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಒಂದು ಹಂತದಲ್ಲಿ ಸೋಂಕು ನಿಯಂತ್ರಣಕ್ಕೆ ಬರತೊಡಗಿತ್ತು. ಈ ಮಧ್ಯೆ ತಬ್ಲಿಘಿಗಳ ಎಂಟ್ರಿಯಿಂದಾಗಿ ವೈರಸ್ ಹರಡುವಿಕೆ ದಿಕ್ಕು ಬದಲಿಸಿತು. ಇದು ಆಡಳಿತಕ್ಕೆ ತಲೆಬಿಸಿ ತಂದಿದೆ.
    ಟ್ರಾಫಿಕ್ ಜಾಮ್
    ಕರೊನಾದಿಂದಾಗಿ ಜಿಲ್ಲೆಯಲ್ಲಿ ಏಳು ಸಾವು ಸಂಭವಿಸಿದರೂ ಕಲಬುರಗಿ ಮಂದಿ ಎಚ್ಚೆತ್ತುಕೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಲಾಕ್ಡೌನ್ 3.0 ಟೈಟ್ ಇದ್ದಾಗಲೇ ಜನ ಓಡಾಡಿಕೊಂಡಿದ್ದರು. ಇದೀಗ ಕೊಂಚ ಸಡಿಲಿಕೆ ನೀಡಿದ ಬಳಿಕ ಮನೆ ಮಂದಿಯಲ್ಲ ರೋಡ್ಗೆ ಇಳಿದಿದ್ದಾರೆ. ಟ್ರಾಫಿಕ್ ಜಾಮ್ ಆಗುವಷ್ಟು ವಾಹನಗಳು ಸಂಚರಿಸುತ್ತಿರುವುದು ಅಪಾಯಕಾರಿ ಎನಿಸಿದೆ.
    ಲಾಕ್ಡೌನ್ 4.0 ಹಂತದಲ್ಲಿ ಮತ್ತಷ್ಟು ಸಡಿಲಿಕೆಗೆ ಸರ್ಕಾರ ಮುಂದಾಗಿದೆ. ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ಶುರು ಮಾಡಲಿವೆ. ಗಗನಮುಖಿ ಕಟ್ಟಡ ಕಾಮಗಾರಿ ಶುರುವಾಲಿದೆ. ಎಂಎಸ್ಐಎಲ್, ವೈನ್ಶಾಪ್ಗಳು ಈಗಲೇ ಓಪನ್ ಆಗಿವೆ. ಪಾರ್ಸಲ್ ಕೊಡಲು ಬಾರ್, ಕ್ಲಬ್ಗಳು ಸಹ ಆರಂಭವಾಗಿವೆ. ಕೃಷಿ ಚಟುವಟಿಕೆ ಎಂದಿನಂತೆ ಸಾಗಿದೆ. ವಿದೇಶ, ಹೊರರಾಜ್ಯ, ಹೊರ ಜಿಲ್ಲೆಗಳಲ್ಲಿನ ಜನ, ವಲಸೆ ಕಾರ್ಮಿಕರು ಬರಲು ಅನುಮತಿ ನೀಡಲಾಗಿದ್ದು, ಸಾವಿರಾರು ಜನ ವಾಪಸಾಗಿದ್ದು, ಇನ್ನೂ ಅನೇಕರು ಬರುವ ನಿರೀಕ್ಷೆಯಲ್ಲಿದ್ದಾರೆ.
    ಜಿಲ್ಲೆಯಲ್ಲಿ 83 ಪಾಸಿಟಿನ್ ಪ್ರಕರಣ ವರದಿಯಾಗಿವೆ. ಈ ಪೈಕಿ ಏಳು ಸಾವು, 46 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. ಪಾಸಿಟಿವ್ ಜತೆಗೆ ಗುಣಮುಖರಾಗುತ್ತಿರುವ ಪ್ರಮಾಣದಲ್ಲೂ ಹೆಚ್ಚಳ ಕಾಣುತ್ತಿರುವುದು ಸಮಾಧಾನದ ಸಂಗತಿ. ಆದರೆ ಸೋಂಕು ನಿಯಂತ್ರಣಕ್ಕೆ ಜನ ಸಹಕರಿಸಬೇಕು. ಮನೆಯಿಂದ ಆಚೆ ಬರಬಾರದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ದಿಟ್ಟ ನಿಧರ್ಾರ ಕೈಗೊಳ್ಳುವ ಮೂಲಕ ಲಾಕ್ಡೌನ್ ಅವಧಿ ವಿಸ್ತರಿಸಿ ಇನ್ನಷ್ಟು ಬಿಗಿಗೊಳಿಸುವ ಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ಅಂಬೋಣ.

    ವಿಶ್ವವನ್ನೇ ಕಾಡುತ್ತಿರುವ ಕರೊನಾ ದಿನೇದಿನೆ ಹೆಚ್ಚುತ್ತಲೇ ಇದೆ. ಸಾವುಗಳೂ ಸಂಭವಿಸುತ್ತ ಸಾಗಿವೆ. ಇದು ನಿಯಂತ್ರಣಕ್ಕೆ ಬರಬೇಕಾದರೆ ಜನ ಮನೆಯಿಂದ ಹೊರಬರಬಾರದು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಜತೆಗೆ ಜಿಲ್ಲಾಡಳಿತ ಲಾಕ್ಡೌನ್ ಅವಧಿ ಜೂನ್ 1ರವರೆಗೆ ವಿಸ್ತರಿಸುವ ಅಗತ್ಯವಿದೆ. ಜನರೂ ಸಕರ್ಾರದ ನಿಯಮ ಪಾಲಿಸುವ ಮೂಲಕ ಮಹಾಮಾರಿ ಹೊಡೆದೋಡಿಸಬೇಕಿದೆ.
    | ಜಗದ್ಗುರು ಶ್ರೀ ಡಾ.ಸಾರಂಗಧರ ಸ್ವಾಮೀಜಿ
    ಸಾರಂಗಧರ ಮಠ ಶ್ರೀಶೈಲ

    ಕಲಬುರಗಿಯಲ್ಲಿ ಕರೊನಾ ಸಾವುಗಳಲ್ಲಿ ಏರಿಕೆಯಾಗುತ್ತಿದೆ. ಪಾಸಿಟಿವ್ ಪ್ರಕರಣಗಳೂ ಹೆಚ್ಚುತ್ತಿವೆ. ಆದರೂ ಜನ ಓಡಾಡುವುದನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಲಾಕ್ಡೌನ್ ಅವಧಿ ವಿಸ್ತರಿಸುವ ಅನಿವಾರ್ಯತೆ ಇದೆ. ಆ ಮೂಲಕ ಕರೊನಾ ನಿಯಂತ್ರಣಕ್ಕೆ ತರಬಹುದಾಗಿದೆ.
    | ಶರಣು ಪಪ್ಪಾ
    ಎಚ್ಕೆಸಿಸಿಐ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts