More

    ಡಿ.2ರಂದು ನಾರು ಮೌಲ್ಯವರ್ಧನೆ ವಿಚಾರ ಸಂಕಿರಣ

    ಚಿತ್ರದುರ್ಗ:ಬೆಂಗಳೂರಿನ ಸೊಸೈಟಿ ಫಾರ್ ಇನ್ನೋವೇಷನ್ ಆ್ಯಂಡ್ ಡೆವಲಪ್ಮೆಂಟ್ ಸಂಸ್ಥೆ ಚಳ್ಳಕೆರೆ ತಾಲೂಕು ಕುದಾಪುರ ಭಾರತೀಯ ವಿ ್ಞಾನ ಸಂಸ್ಥೆಯಲ್ಲಿ ಡಿ.2ರಂದು ಕುದಾಪುರದಲ್ಲಿ, ಬಾಳೆ, ಕತ್ತಾಳೆ, ಅಡಕೆ ಹಾಗೂ ಕುರಿ ಉಣ್ಣೆಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಮಾರುಕಟ್ಟೆ ಕುರಿತು ಒಂದು ದಿನ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಿದೆ.
    ಅಂದು ಬೆಳಗ್ಗೆ 10.30ಕ್ಕೆ ಸೊಸೈಟಿ ಫಾರ್ ಇನ್ನೋವೇಷನ್ ಆ್ಯಂಡ್ ಡೆವಲಪ್ಮೆಂಟ್ ಸೀಡ್ ವಿಭಾಗದ ಮುಖ್ಯಸ್ಥ ಡಾ.ಅಮಿತವ ಪರ್ಮಾಣಿಕ್ ಕಾರ‌್ಯಕ್ರಮ ಉದ್ಘಾಟಿಸುವರು. ಭಾರತೀಯ ವಿಜ್ಞಾನ ಸಂಸ್ಥೆ ಸಂಚಾಲಕ ಪ್ರೊ.ಡಿ.ಎನ್.ರಾವ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾ ಕೈ ಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್,ಸೊಸೈಟಿ ಅಧ್ಯಕ್ಷ ಪ್ರೊ.ಬಿ.ಗುರುಮೂರ್ತಿ ಅಧ್ಯಕ್ಷತೆ ವಹಿಸುವರು.
    ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕಿ ಡಾ.ಕೆ.ಜೆ.ಸಣ್ಣಪಾಪಮ್ಮ,ಬೆಳಗಾವಿಯ ಉನ್ನತಿ ಕರಕುಶಲದ ನಿರ್ವಾಹಕ ದಸ್ತಗೀರಸಾಬ್ ಜಮಾದಾರ ಸಂ ಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಗಣೇಶ್‌ತೋಳಾರ್(7349695100), ಕೋ ಟೇಶ್ ಕೋರವರ(9663364234)ಅವರನ್ನು ಸಂಪರ್ಕಿಸಬಹುದೆಂದು ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಪ್ರತಾಪ್‌ಮೂರ್ತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts