More

    ಡಿಸೆಂಬರ್ ಅಂತ್ಯಕ್ಕೆ ಪ್ರತಿ ಮನೆಗೆ ಶುದ್ಧ ನೀರು

    ಸೇಡಂ (ಕಲಬುರಗಿ): ಕೇಂದ್ರ ಸರ್ಕಾರವು ದೇಶದ ಪ್ರತಿ ಮನೆಗೆ ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

    ಮದಕಲ್ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಪ್ರತಿ ಮನೆಗೆ ಗಂಗೆ ಯೋಜನೆ, 15 ಲಕ್ಷ ರೂ. ವೆಚ್ಚದ ಶುದ್ಧ ಕುಡಿವ ನೀರಿನ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಮನೆ ಮನೆಗೆ ಶುದ್ಧ ನೀರು ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯಕ್ಕೆ ಕ್ಷೇತ್ರದ ಪ್ರತಿ ಕುಟುಂಬಕ್ಕೂ ನಲ್ಲಿ ಮೂಲಕ ಶುದ್ಧ ನೀರು ಸಿಗಲಿದೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ಸ್, ಸದಸ್ಯೆ ಲಕ್ಷ್ಮೀ ಶಾಮರಾವ, ಪ್ರಮುಖರಾದ ನಾಗಪ್ಪ ಕೊಳ್ಳಿ, ಪಾಪಯ್ಯ ಗೌಡ್ಸ್, ತಿರುಪತಿ ಶಹಬಾದಕರ್, ಚಂದ್ರಶೇಖರರಡ್ಡಿ, ಅಂಜಯ್ಯ ಗೌಡ್ಸ್, ದೇವಯ್ಯ ಗೌಡ್ಸ್, ನಾರಾಯಣರಡ್ಡಿ ಬನ್ನೂರ, ರಾಘವೇಂದ್ರರಡ್ಡಿ, ಅಂಜಿಲಪ್ಪ ಯರಪುಲ್, ಶಾಮಲು, ಶಿವರಾಜ ಪೂಜಾರಿ, ರಮೇಶ ಏರಿ, ವೆಂಕಟೇಶ ಪಾಟೀಲ್(ವೆಂಕಿ), ಓಂಪ್ರಕಾಶ ಪಾಟೀಲ್, ಶ್ರೀಕಾಂತ ಶಹಬಾಕದರ್, ಪ್ರಶಾಂತ ಅಂಬುರೆ, ಇನಾಯತ್ ರುದ್ನೂರ, ರೇವಣಸಿದ್ದ ಬಿರಾದಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts