More

    ಡಿಸಿ ಸಿ.ಸತ್ಯಭಾಮಾ ವರ್ಗಾವಣೆ ಮಾಡದಂತೆ ದಲಿತ ಮುಖಂಡರ ಮನವಿ

    ಹಾಸನ: ದಕ್ಷ, ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರನ್ನು ಕನಿಷ್ಠ ನಾಲ್ಕು ವರ್ಷ ಹಾಸನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿಜೋಸೇಫ್ ಮನವಿ ಮಾಡಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಆದರೆ ಅವರು ಜಿಲ್ಲೆಯಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ಅವರನ್ನ ವರ್ಗಾವಣೆ ಮಾಡಬಾರದು ಎಂದು ಚುನಾವಣಾ ಆಯೋಗಕ್ಕೆ ದಲಿತ ಹಾಗೂ ಅಧಿವಾಸಿ ಬುಡಕಟ್ಟುಗಳ ಸಂಘಟನೆಗಳ ಮೂಲಕ ಮನವಿ ಮಾಡುತ್ತಾದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜಿಲ್ಲೆಗೆ ಬಂದ 8 ತಿಂಗಳಿನಿಂದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಜಿಲ್ಲೆಯ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಡಿಸಿಯನ್ನು ಸರಕಾರವು 4 ವರ್ಷಗಳ ಅವಧಿವರೆಗೂ ವರ್ಗವಣೆ ಮಾಡದೇ ಅವರನ್ನೆ ಮುಂದುವರೆಸಿದರೇ ದಲಿತರ ಮತ್ತು ಅಧಿವಾಸಿ ಬುಡಕಟ್ಟು ಸಮುದಾಯದವರ ಭೂಮಿ ಸಮಸ್ಯೆಗಳು, ಸ್ಮಶಾಣದ ಭೂ ಸಮಸ್ಯೆಗಳು, ವಸತಿ ಸಮಸ್ಯೆಗಳು ಸೇರಿದಂತೆ ಈ ಸಮುದಾಯದಲ್ಲಿ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಅಧಿವಾಸಿ ಬಿರ್ಸಾ ಮುಂಡಾ ಯುವ ಸೇನೆ ರಾಜ್ಯ ಸಂಚಾಲಕ ನವೀನ್ ಸದಾ, ಜಿಲ್ಲಾ ಕಾರ್ಯದರ್ಶಿ ಹರೀಶ್ ಹುಳುವಾರೆ, ಜಿಲ್ಲಾ ಹಕ್ಕಿಪಿಕ್ಕಿ ಮೂಲ ನುಡಕಟ್ಟು ಅಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಸತ್ಯರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts