More

    ಡಿಸಿಸಿ ಬ್ಯಾಂಕ್ ಚುಕ್ಕಾಣಿಗೆ ಕಸರತ್ತು

    ಬಾಬುರಾವ ಯಡ್ರಾಮಿ ಕಲಬುರಗಿ
    ಹಿಂದೆಂದಿಗಿಂತ ಜಿದ್ದಾಜಿದ್ದಿಯಾಗಿ ಚುನಾವಣೆ ಕಂಡಿರುವ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿಯಲು ಸಂಖ್ಯಾಬಲ ಇಲ್ಲದಿದ್ದರೂ ತೆರೆಮರೆಯಲ್ಲಿ ಆಡಳಿತರೂಢ ಬಿಜೆಪಿ ಇನ್ನಿಲ್ಲದ ಕಸರತ್ತು ಶುರುವಿಟ್ಟಿದೆ. ಸದ್ಯಕ್ಕೆ ವಿಜೇತ ನಿರ್ದೇಶಕರ ಸಂಖ್ಯೆ ಗಮನಿಸಿದರೆ ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿದೆ.
    ನ.29ರಂದು ರಾಜಕೀಯ ಕಡುವಾಸನೆಯಲ್ಲೇ ನಡೆದಿದ್ದ ಚುನಾವಣೆಯಲ್ಲಿ 13 ನಿರ್ದೇಶಕರ ಪೈಕಿ 9 ಬೆಂಬಲಿತರು ಗೆದ್ದಿದ್ದರಿಂದ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತ ಕೇವಲ ನಾಲ್ವರು ಜಯ ಗಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಬ್ಯಾಂಕ್ ಗದ್ದುಗೆ ಏರುವುದು ಪಕ್ಕಾ ಎನಿಸಿದೆ.
    ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ 11ರಂದು ನಡೆಸಲು ಚುನಾವಣಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತ ರಾಮಚಂದ್ರ ಗಡದ ಘೋಷಣೆ ಮಾಡುತ್ತಲೇ ಚಟುವಟಿಕೆ ಗರಿಗೆದರಿವೆ. ಕಾಂಗ್ರೆಸ್ ಬಹುಮತ ಹೊಂದಿದ್ದರಿಂದ ನಿರುಮ್ಮಳವಾಗಿದೆ. ಆದರೆ ಬಿಜೆಪಿ ನಾಯಕರು ಹೇಗಾದರೂ ಸರಿ, ತನ್ನ ತೆಕ್ಕೆಗೆ ಬ್ಯಾಂಕ್ ತೆಗೆದುಕೊಳ್ಳಬೇಕು ಎಂದು ಹವಣಿಸುತ್ತಿದ್ದಾರೆ. ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಲು ತಂತ್ರ ರೂಪಿಸುತ್ತಿದ್ದಾರೆ.
    ಐದು ವರ್ಷದ ಅವಧಿಗೆ 13 ಚುನಾಯಿತ ನಿರ್ದೇಶಕರು ಸೇರಿ ಸರ್ಕಾರದ ನಾಮನಿರ್ದೇಶನಗೊಳ್ಳುವ ಒಬ್ಬ ನಿದರ್ೇಶಕರು ಮತ್ತು ಸಹಕಾರ ನಿಬಂಧಕರು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿರುವ ಇಬ್ಬರು ಅಧಿಕಾರಿಗಳ ಮತ ಸೇರಿ ಒಟ್ಟು 16 ಮತಗಳು ಆಗಲಿವೆ. ಬಹುಮತಕ್ಕೆ 9 ನಿರ್ದೇಶಕರ ಬೆಂಬಲ ಬೇಕು. ಕಾಂಗ್ರೆಸ್ ಬೆಂಬಲಿತರು 9 ಜನರಿದ್ದಾರೆ. ಬಿಜೆಪಿ ಸಂಖ್ಯಾಬಲ 7 ಆಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಇನ್ನಿಬ್ಬರ ಬೆಂಬಲ ಬೇಕೇಬೇಕು. ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿರುವುದು ಕುತೂಹಲ ಕೆರಳಿಸಿದೆ. ಸಹಕಾರ ಕ್ಷೇತ್ರದಲ್ಲೂ ಆಪರೇಷನ್ ಕಮಲದ ಕರಿಛಾಯೆ ಗೋಚರಿಸುತ್ತಿದೆ.
    ಡಿಸಿಸಿ ಬ್ಯಾಂಕಿನ ರಿಂಗ್ ಮಾಸ್ಟರ್ ಎಂದೇ ಖ್ಯಾತರಾಗಿರುವ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಹೆಣೆದ ತಂತ್ರಗಾರಿಕೆ ಮತ್ತು ಶ್ರಮದ ಫಲವಾಗಿ ಕಾಂಗ್ರೆಸ್ಗೆ ಬಹುಮತ ಲಭಿಸಿದೆ. ಅದನ್ನು ಉಳಿಸಿಕೊಂಡು ತಮ್ಮವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಮಾಸ್ಟರ್ ಪಾ್ಲೃನ್ ಸಹ ರೂಪಿಸಿದ್ದಾರೆ.
    ಕಾಂಗ್ರೆಸ್ನಲ್ಲಿ ಸೋಮಶೇಖರ ಗೋನಾಯಕ, ಅಶೋಕ ಸಾವಳೇಶ್ವರ, ಗೌತಮ ಪಾಟೀಲ್, ಗುರುನಾಥ ರಡ್ಡಿ, ಮಲ್ಲಿಕಾಜರ್ುನ ರೆಡ್ಡಿ ಸೇರಿ 9 ನಿದರ್ೇಶಕರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಚಾಲ್ತಿಯಲ್ಲಿವೆ. ತಮ್ಮದೇ ಆದ ಲೆವಲ್ನಲ್ಲಿ ಓಲೈಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಏನೆಲ್ಲ ಬೆಳವಣಿಗೆಗಳು ಆದರೂ 10ರಂದು ತಡರಾತ್ರಿ ಹೊತ್ತಿಗೆ ನಡೆಯುವ ಸಭೆಯಲ್ಲೇ ಅಂತಿಮ ನಿಧರ್ಾರ ಆಗಲಿದೆ.

    ಅಪೆಕ್ಸ್ ಬ್ಯಾಂಕಿಗೆ ಮಾನಕರ್ ಪ್ರಯತ್ನ
    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಬಂಧಿ, ಅಫಜಲಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಮಾನಕರ್ ಅವರು ಯಾದಗಿರಿ-ಕಲಬುರಗಿ ಡಿಸಿಸಿ ಬ್ಯಾಂಕ್ ನಿದರ್ೇಶಕರಾಗಿ ಆಯ್ಕೆಯಾಗಿದ್ದಾರೆ. ಮಾನಕರ್ ಪುತ್ರಿ ಬಿ.ವೈ.ವಿಜಯೇಂದ್ರ ಪತ್ನಿ. ಅಂತಲೇ ಕಲಬುರಗಿ ಜಿಲ್ಲೆಯಿಂದ ಅಪೆಕ್ಸ್ ಬ್ಯಾಂಕ್ ನಿದರ್ೇಶಕರಾಗಬೇಕು ಎಂಬ ಒಲವು ಹೊಂದಿ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಬಹುಮತವಿಲ್ಲದ ಬಿಜೆಪಿ ಆಪರೇಷನ್ ಕಮಲ ಕೈಬಿಟ್ಟು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಬ್ಯಾಂಕಿನ ಹಿತದೃಷ್ಟಿಯಿಂದ ಉಪಾಧ್ಯಕ್ಷ ಸ್ಥಾನ ನೀಡುವಂತಹ ಪ್ರಸ್ತಾಪವನ್ನು ಸಹ ಮುಂದಿಟ್ಟಿದೆ ಎಂಬ ಚಚರ್ೆ ಶುರುವಾಗಿದೆ.

    ಯಾದಗಿರಿ-ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ 11ರಂದು ಚುನಾವಣೆ ನಡೆಸಲು ದಿನಾಂಕ ಗೊತ್ತುಪಡಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ.
    | ರಾಮಚಂದ್ರ ಗಡದ
    ಸಹಾಯಕ ಆಯುಕ್ತ ಮತ್ತು ಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿ

    ಡಿಸಿಸಿ ಬ್ಯಾಂಕಿನಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿದರ್ೇಶಕರು ಗೆಲುವು ಸಾಧಿಸಿದ್ದರಿಂದ ಪಕ್ಷ ಸ್ಪಷ್ಟ ಬಹುಮತ ಹೊಂದಿದೆ. ಪಕ್ಷದ ನಾಯಕರ ಜತೆ ಚಚರ್ಿಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಇದುವರೆಗೆ ಯಾರ ಹೆಸರು ಅಂತಿಮಗೊಂಡಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯಥರ್ಿಯನ್ನು ಕಣಕ್ಕಿಳಿಸಲಾಗುವುದು.
    | ಶರಣಬಸಪ್ಪ ದರ್ಶನಾಪುರ
    ಶಹಾಪುರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts