More

    ಡಿಜಿಟಲ್ ವಾಲ್ ಪೋಸ್ಟರ್ ಅಭಿಯಾನಕ್ಕೆ ಚಾಲನೆ

    ಪಿರಿಯಾಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಂಬಾಕು ಮಂಡಳಿ ಸದಸ್ಯ ಜಿ.ಸಿ.ವಿಕ್ರಂ ರಾಜ್ ತಿಳಿಸಿದರು.

    ಬಿಜೆಪಿ ಜಾರಿಗೆ ತಂದಿರುವ ಡಿಜಿಟಲ್ ವಾಲ್ ಪೋಸ್ಟರ್ ಅಭಿಯಾನಕ್ಕೆ ಕಂಪಲಾಪುರ ಮಹಾ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ನೂರಕ್ಕೂ ಹೆಚ್ಚು ಕಲ್ಯಾಣ ಪರ ಯಶಸ್ವಿ ಯೋಜನೆಗಳನ್ನು ಜಾರಿಗೆ ತಂದಿವೆ. ವಿವಿಧ ವರ್ಗದ ಫಲಾನುಭವಿಗಳು ಈ ಯೋಜನೆಯನ್ನು ಪಡೆದಿದ್ದು ಈ ಬಗ್ಗೆ ಮತದಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ 23 ಯೋಜನೆಗಳ ಬಗ್ಗೆ ಡಿಜಿಟಲ್ ವಾಲ್ ಪೋಸ್ಟರ್‌ಗಳನ್ನು ಅಂಟಿಸಿ ಪ್ರಚುರ ಪಡಿಸಲಾಗುತ್ತಿದೆ ಎಂದರು.

    ಕಂಪಲಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts