More

    ಡಿಗ್ಗಿ ಆರೋಗ್ಯ ಕೇಂದ್ರದ ವೈದ್ಯರಿಗಿಲ್ಲ ವಸತಿ ವ್ಯವಸ್ಥೆ

    ಜೊಯಿಡಾ: ಡಿಗ್ಗಿ ಆರೋಗ್ಯ ಕೇಂದ್ರಕ್ಕೆ ವೈದ್ಯರು ನೇಮಕವಾಗಿದ್ದಾರೆ. ಆದರೆ, ಅವರಿಗೆ ಉಳಿಯುವ ವ್ಯವಸ್ಥೆ ಇಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಸುಜಾತಾ ಉಕ್ಕಲಿ ತಿಳಿಸಿದರು.

    ಬುಧವಾರ ಜರುಗಿದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಈಗ ಬಂದಿರುವ ವೈದ್ಯರು ಆಸ್ಪತ್ರೆಯಲ್ಲಿಯೇ ವಸತಿ ಇದ್ದು ಸೇವೆ ಒದಗಿಸಲು ತಯಾರಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಕುಡಿಯುವ ನೀರು, ವಿದ್ಯುತ್​ನ ವ್ಯವಸ್ಥೆ ಇಲ್ಲ. ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸದಸ್ಯ ಸಂಜಯ ಹಣಬರ ಗ್ರಾಮ ಪಂಚಾಯಿತಿಯಿಂದ ಎರಡು ದಿನದೊಳಗೆ ನೀರಿನ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಎಚ್ಚರಿಸಿದರು.

    ಪಶು ವೈದ್ಯಾಧಿಕಾರಿ ಡಾ. ರವೀಂದ್ರ ಹುಜರತ್ತಿ ಮಾತನಾಡಿ, ಲಂಪಿ ಸ್ಕಿನ್ ಕಾಯಿಲೆ ಇದು ಒಂದರಿಂದ ಮತ್ತೊಂದಕ್ಕೆ ಹರಡುವ ಕಾಯಿಲೆಯಾಗಿದ್ದು, ಕಾಯಿಲೆ ಬಂದ ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ತಾಲೂಕು ಪಂಚಾಯಿತಿ ಉಪಾಧ್ಯಕ್ಷ ವಿಜಯ ಪಂಡಿತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶರದ್ಚಂದ್ರ ಗುರ್ಜರ, ಬಲವಂತ ದೇಸಾಯಿ, ಸುರೇಶ ಬಂಗಾರಿ, ಅರ್ಜಿತಾ ಮೀರಾಶಿ, ಅಲ್ಕಂಜಾ ಮಂಥೇರೋ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ವ್ಯವಸ್ಥಾಪಕ ಜಿ.ವಿ. ಭಟ್ಟ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts