More

    ಡಾ.ಅಂಬೇಡ್ಕರ್ ಬ್ರಾಹ್ಮಣರ ವಿರೋಧಿ ಅಲ್ಲ

    ಬೆಳಗಾವಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬ್ರಾಹ್ಮಣ ವಿರೋಧಿ ಅಲ್ಲ; ಬ್ರಾಹ್ಮಣ್ಯದ ವಿರೋಧಿ. ದಲಿತ ಹಾಗೂ ಅಸ್ಪಶ್ಯತೆ ಸಮಾಜದಿಂದ ಪ್ರತ್ಯೇಕವಾಗಿ ಉಳಿಯಬೇಕು ಎಂದು ಎಲ್ಲಿಯೂ ಹೇಳಿಲ್ಲ. ನಮ್ಮನ್ನೂ ಸಹ ಹಿಂದು ಸಮಾಜದಲ್ಲಿ ಬಹು ಮುಖ್ಯವಾಗಿಯೇ ಪರಿಗಣಿಸಬೇಕು ಎಂಬುದು ಅವರ ನಿಲುವಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ಹೇಳಿದರು. ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಅನುಭವ ಮಂಟಪದಲ್ಲಿ ಧಾರವಾಡ ರಂಗಾಯಣದಿಂದ ಭಾನುವಾರ ಆಯೋಜಿಸಿದ್ದ ‘ಸರ್ವರಿಗೂ ಸಂವಿಧಾನ’ ನಾಟಕದ ಸಿದ್ಧತೆ ಹಾಗೂ ತಯಾರಿ ಕಾರ್ಯಕ್ರಮದಲ್ಲಿ ‘ಡಾ.ಬಾಬಾಸಾಹೇಬ ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

    ಧಾರವಾಡ ರಂಗಾಯಣವು 7 ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿದೆ. ಮೂದಲ ಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ರಂಗ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ. ‘ಸರ್ವರಿಗೂ ಸಂವಿಧಾನ’ ನಾಟಕ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರು. ‘ಭಾರತ ಸಂವಿಧಾನ ಸಿದ್ಧತೆಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪಾತ್ರ’ ಕುರಿತು ಡಾ.ಅಂಬೇಡ್ಕರ್ ಪ್ರತಿಷ್ಠಾನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾಜಿ ಉಪಾಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಉಪನ್ಯಾಸ ನೀಡಿದರು. ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಉಪಸ್ಥಿತರಿದ್ದರು. ಫಕೀರಪ್ಪ ಮಾದನಭಾವಿ ನಿರೂಪಿಸಿದರು. ಯಮನಪ್ಪ ಜಾಲಗಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts