More

    ಡಯಲ್ 100: ಸೈಬರ್​ ಕಳ್ಳರ ಚಾಕೋಲೇಟ್ ಕಥೆ…

    ರಮೇಶ್ ಅರವಿಂದ್ ಫ್ಯಾಮಿಲಿ ಚಿತ್ರಗಳನ್ನು ಮಾಡಿದ್ದರು. ಥ್ರಿಲ್ಲರ್ ಚಿತ್ರಗಳಲ್ಲೂ ನಟಿಸಿದ್ದರು. ಈಗ ಅವೆರಡೂ ಜಾನರ್​ಗಳನ್ನು ಒಟ್ಟಿಗೆ ಸೇರಿಸಿ ಒಂದು ಚಿತ್ರ ಮಾಡಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ರಮೇಶ್ ಅಭಿನಯದ ಮತ್ತು ನಿರ್ದೇಶನದ ‘100’, ಅದೇ ಜಾನರ್​ಗೆ ಸೇರಿದ ಒಂದು ಚಿತ್ರ. ಸೈಬರ್ ಕ್ರೖೆಮ್ ಕುರಿತಾದ ಈ ಚಿತ್ರದಲ್ಲಿ ರಮೇಶ್, ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

    ಸೈಬರ್ ಕ್ರೖೆಮ್ ಎಂದರೆ ಬರೀ ಹಣಕಾಸಿನ ಮೋಸವಷ್ಟೇ ಅಲ್ಲ ಎನ್ನುವ ರಮೇಶ್, ‘ಅದು ಭಾವನೆಗಳಿಗೂ ಸಂಬಂಧಪಟ್ಟ ವಿಷಯ. ಭಾವನಾತ್ಮಕ ಬ್ಲಾಕ್​ವೆುೕಲ್​ಗಳು ಹೆಚ್ಚುತ್ತಿವೆ. ಆ ಕೆಲಸ ಯಾರು ಮಾಡುತ್ತಿದ್ದಾರೆ ಎಂದು ಪತ್ತೆಹಚ್ಚುವುದು ಕಷ್ಟ. ಈ ಅನಾಮಿಕ ಮುಖದ ವಿರುದ್ಧ ಒಬ್ಬ ಪೊಲೀಸ್ ಅಧಿಕಾರಿ ಹೇಗೆ ಹೋರಾಡುತ್ತಾನೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ.

    ‘ಒಂದು ಕಾಲಕ್ಕೆ ಅಪರಿಚಿತರಿಂದ ಚಾಕೋಲೇಟ್ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿದ್ದರು. ಈಗ ಅಪರಿಚಿತರು ಚಾಕೋಲೇಟ್ ತೆಗೆದುಕೊಂಡು ಮನೆಯೊಳಗೇ ಬಂದುಬಿಟ್ಟಿದ್ದಾರೆ. ಮನೆಯಲ್ಲಿ ನಾಲ್ಕು ಜನರಿದ್ದರೆ, ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಮೊಬೈಲ್ ಇದೆ. ಅದರ ಮೂಲಕ ಮನೆಯೊಳಗೆ ಬರುತ್ತಿರುವ ಅನಾಮಿಕರು, ಬ್ರೖೆನ್​ವಾಶ್ ಮಾಡುತ್ತಿದ್ದಾರೆ. ನಮ್ಮ ಯೋಚನೆಗಳನ್ನೇ ಬದಲಾಯಿಸುತ್ತಿದ್ದಾರೆ. ಇದರಿಂದ ಹೇಗೆ ಒಂದು ಕುಟುಂಬಕ್ಕೆ ಸಮಸ್ಯೆ ಎದುರಾಗುತ್ತದೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ ರಮೇಶ್.

    ಜಾಲತಾಣವೇ ಕೈಯಲ್ಲಿರುವ ಬಾಂಬ್: ಸೋಷಿಯಲ್ ಮೀಡಿಯಾ ಎಂಬುದು ಒಂದು ವರ, ಅದನ್ನು ಶಾಪವನ್ನಾಗಿ ಮಾಡಬೇಡಿ ಎನ್ನುವ ರಮೇಶ್, ‘ಪತ್ರಿಕೋದ್ಯಮಕ್ಕೆ ನೊಬಲ್ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತರೊಬ್ಬರು, ಸೋಷಿಯಲ್ ಮೀಡಿಯಾವನ್ನು ಆಟಂ ಬಾಂಬ್ ಎಂದು ವ್ಯಾಖ್ಯಾನಿಸಿದ್ದಾರೆ. ಅದನ್ನು ಚೆನ್ನಾಗಿ ಬಳಸಿಕೊಂಡರೆ ಸರಿ, ಇಲ್ಲವಾದರೆ ಅದರಿಂದ ಸಾಕಷ್ಟು ಅಪಾಯ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಎನ್ನುವುದು ಒಂದು ವರ. ಅದನ್ನು ಶಾಪವನ್ನಾಗಿ ಮಾಡದಿರುವುದು ನಮಗೇ ಬಿಟ್ಟಿದ್ದು’ ಎಂಬುದು ರಮೇಶ್ ಅಭಿಪ್ರಾಯ.

    ಪೈರಸಿಯೂ ಕಳ್ಳತನವೇ!: ಎಲ್ಲದಕ್ಕೂ ಕಳ್ಳತನವೇ ಬೇಸ್ ಎನ್ನುವ ಅವರು, ‘ನಮ್ಮದಲ್ಲದಿರುವುದು ಮತ್ತು ಇನ್ನೊಬ್ಬರ ವಸ್ತುವಿಗೆ ಆಸೆಪಟ್ಟು ಅದನ್ನು ಪಡೆಯುವುದಕ್ಕೆ ಪ್ರಯತ್ನಿಸುವುದೇನೇ ಇದ್ದರೂ ಅದು ಕಳ್ಳತನವೇ. ಅದು ಆಸ್ತಿ ಹೊಡೆಯುವುದಿರಲಿ, ಪೈರಸಿ ಮಾಡುವುದಿರಲಿ ಎಲ್ಲವೂ ಕಳ್ಳತನಗಳೇ. ಅದಕ್ಕೆ ಪೂರಕವಾಗಿ ಸೈಬರ್ ಸೇರಿಕೊಂಡಿದೆ ಅಷ್ಟೇ. ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೖೆಮ್ ಹೆಚ್ಚಾಗುತ್ತಿದೆ. ಪೊಲೀಸರು ಸಹ ಸೈಬರ್ ಕ್ರೖೆಮ್ ತಡೆಗಟ್ಟುವಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ’ ಎನ್ನುತ್ತಾರೆ ರಮೇಶ್.

    ಸೈಬರ್ ಕ್ರೖೆಮ್ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಚಿತ್ರಗಳು ಬಂದಿಲ್ಲ. ‘100’, ತಮಿಳಿನ ‘ತಿರುಟ್ಟುಪಯಲೆ 2’ ಚಿತ್ರದಿಂದ ಸ್ಪೂರ್ತಿ ಪಡೆದು ಈ ಚಿತ್ರ ಮಾಡಲಾಗಿದೆ. ‘ಇದು ರಿಮೇಕ್ ಅಲ್ಲ. ಮೂಲ ಚಿತ್ರದಲ್ಲಿ ರಚಿತಾ ರಾಮ್ ಅವರ ಪಾತ್ರವೇ ಇರಲಿಲ್ಲ. ಕ್ಲೈಮ್ಯಾಕ್ಸ್ ಸಹ ಬದಲಾಯಿಸಿಕೊಂಡಿದ್ದೇವೆ. ಹಾಗಾಗಿ, ಆ ಕಥೆಯನ್ನು ಮರುಸೃಷ್ಟಿ ಮಾಡಿದ್ದೇವೆ. ಇನ್ನು ಒಂದು ನೈಜ ಘಟನೆಯನ್ನೂ ಅಳವಡಿಸಿಕೊಂಡಿದ್ದೇವೆ. ಆ ಸನ್ನಿವೇಶವನ್ನು ನೋಡಿದರೆ ನಿಮಗೇ ಅದ್ಯಾವುದೆಂದು ಗೊತ್ತಾಗುತ್ತದೆ’ ಎಂದು ಮಾತು ಮುಗಿಸುತ್ತಾರೆ.

    ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ; ಪಕ್ಕದ ರಸ್ತೆಗೆ ಹಾರಿ ಇನ್ನೊಂದು ಕಾರಿನ ಮೇಲೆ ಬಿದ್ದ ಕಾರು, ಮೂವರು ಸ್ಥಳದಲ್ಲೇ ಸಾವು

    ಗೃಹ ಸಚಿವ ಹುಚ್ಚ, ನಿಮ್ಹಾನ್ಸ್​ಗೆ ಸೇರಿಸ್ಬೇಕೆಂದ ಡಿ.ಕೆ.ಶಿವಕುಮಾರ್​; ಡಿಕೆಶಿಯನ್ನು ನಿಮ್ಹಾನ್ಸ್​ಗೆ ಸೇರಿಸಿದ್ರೂ ಪ್ರಯೋಜನವಿಲ್ಲ ಎಂದ ಆರಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts