More

    ಡಬಲ್ ಇಂಜಿನ್ ಸರ್ಕಾರ ಕೆಟ್ಟು ನಿಂತಿದೆ

    ಕೊಪ್ಪ: ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಕೆಟ್ಟು ನಿಂತಿದೆ. ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಛೇಡಿಸಿದರು.

    ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ ವಿರೋಧಿ, ಕಾರ್ವಿುಕ ವಿರೋಧಿ ನೀತಿ ಅನುಸರಿಸಿವೆ ಎಂದು ಆರೋಪಿಸಿ ಜೆಡಿಎಸ್ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಭಟನಾ ಸಭೆಯಲ್ಲಿ ಮಾತನಾಡಿದರು. ರಾಜ್ಯ, ಕೇಂದ್ರ ಸರ್ಕಾರಗಳು ಜನಪರವಾಗಿಲ್ಲ. ಅಧಿಕಾರಕ್ಕಾಗಿ ಧರ್ಮ, ಜಾತಿ ರಾಜಕಾರಣ ಮಾಡುತ್ತಿವೆ. ರಾಜ್ಯ ಸರ್ಕಾರ ಶೇ.40 ಕಮಿಷನ್ ದಂಧೆಯಲ್ಲಿ ಮುಳುಗಿದೆ. ರೈತರಿಗೆ, ಕಾರ್ವಿುಕರಿಗೆ ಅನ್ಯಾಯ ಮಾಡುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಕಸ್ತೂರಿ ರಂಗನ್ ವರದಿ ಜಾರಿ ಒಂದು ವರ್ಷಕ್ಕೆ ಮುಂದಕ್ಕೆ ಹಾಕಿದ್ದಾರೇ ಹೊರತು ಇದರಲ್ಲಿ ಮಲೆನಾಡ ಜನರಿಗೆ ನ್ಯಾಯ ನೀಡಬೇಕೆಂಬ ಕಳಕಳಿ ಹೊಂದಿಲ್ಲ ಎಂದು ಆರೋಪಿಸಿದರು.

    ಹಿಂದು ಸಮಾಜೋತ್ಸವ, ಕೇಸರಿ ಬಣ್ಣ, ಬಾವುಟ ಯಾವುದೂ ಒಂದು ಪಕ್ಷದ ಸ್ಪತ್ತಲ್ಲ. ಅದು ಹಿಂದುಗಳದ್ದು. ಇಲ್ಲಿ ಹಿಂದುಗಳು ಯಾವುದೋ ಒಂದು ಪಕ್ಷಕ್ಕೆ ಕೇಸರಿಯನ್ನು ಗುತ್ತಿಗೆ ನೀಡಿಲ್ಲ. ಯುವಜನರು ಇದನ್ನು ಅರಿತುಕೊಳ್ಳಬೇಕು ಎಂದು ತಿಳಿಹೇಳಿದರು.

    ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಸೂರ್ಯ, ಚಂದ್ರರಷ್ಟೇ ಸತ್ಯ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಕ್ಷೇತ್ರದ ಮೂರೂ ತಾಲೂಕುಗಳಲ್ಲಿ ಕೈಗಾರಿಕೆ ಪ್ರದೇಶವನ್ನು ಗುರುತಿಸಿ ಕಾರ್ಖಾನೆ ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಗಾರ್ವೆಂಟ್ಸ್​ಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

    ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕಣಿವೆ ಮಾತನಾಡಿ, ಬಿಜೆಪಿ ಹಿಂದುತ್ವದ ಹೆಸರಿನಲ್ಲಿ, ಕಾಂಗ್ರೆಸ್ ಮುಸ್ಲಿಮರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಆದರೆ ಜೆಡಿಎಸ್ ಎಲ್ಲ ಧರ್ಮದವರ ಶ್ರೇಯಸ್ಸು ಬಯಸುತ್ತದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts