More

    ಟ್ಯಾಗೋರ್ ಕಡಲ ತೀರದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ

    ಕಾರವಾರ: ಫೆ. 6ರಿಂದ 9ರವರೆಗೆ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಆಯೋಜಿಸಿರುವ ಕರುನಾಡ ಕರಾವಳಿ ಉತ್ಸವದ ಭಾಗವಾಗಿ ಟ್ಯಾಗೋರ್ ಕಡಲ ತೀರದಲ್ಲಿ ಭಾನುವಾರ ಏರ್ಪಡಿಸಿದ್ದ ಡಾಗ್ ಶೋ ಗಮನ ಸೆಳೆಯಿತು.

    ಲ್ಯಾಬ್ರಡಾರ್, ಜರ್ಮನ್​ಶಫರ್ಡ್, ಡಾಬರ್​ವುನ್, ಮುಧೋಳ, ರಾಟ್​ವೀಲರ್, ಮಾಲ್ಟಿಸ್, ಡಾಲ್ಮೀಶನ್, ಗ್ರೇಟ್ ಡೇನ್, ಪಗ್, ಗೋಲ್ಡನ್ ರಿಟ್ರೀವಲ್ ಸೇರಿ ವಿವಿಧ ತಳಿಗಳ 30ಕ್ಕೂ ಅಧಿಕ ನಾಯಿಗಳು ಪ್ರದರ್ಶನಕ್ಕೆ ಬಂದಿದ್ದವು. ನೂರಾರು ಜನ ನಾಯಿಗಳನ್ನು ನೋಡಿ ಖುಷಿಪಟ್ಟರು. ಅವುಗಳ ಜತೆ ಫೋಟೋ ತೆಗೆಸಿಕೊಂಡರು. ಮಾಜಿ ಶಾಸಕ ಸತೀಶ ಸೈಲ್ ಪಾರಿವಾಳ ಹಾರಿಬಿಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಆಯೋಜಕರಾದ ಎನ್. ದತ್ತಾ ಹಾಗೂ ಇತರರು ಇದ್ದರು.

    ಡಾ. ಅನ್ವಿತ್ ನಾಯಕ ಅವರ ಟಿಬೇಟಿಯನ್ ಮಸ್ತಿಫ್ ತಳಿಯ ನಾಯಿ ಮೊದಲ ಬಹುಮಾನದೊಂದಿಗೆ 3500 ರೂ. ನಗದು ಪಡೆಯಿತು. ತನೀಶ್ ಮೂದಲಿಯಾರ್ ಅವರ ಗ್ರೇಟ್ ಡೆನ್ ತಳಿಯ ನಾಯಿ ಎರಡನೇ ಬಹುಮಾನದೊಂದಿಗೆ 2500 ರೂ. ನಗದು ಪಡೆದುಕೊಂಡಿತು. ಡಾ. ಅನ್ವಿತ್ ಅವರ ಫ್ರೆಂಚ್ ಬುಲ್ ಡಾಗ್ ಮೂರನೇ ಬಹುಮಾನದೊಂದಿಗೆ 1500 ರೂ.ನಗದು ಪಡೆದುಕೊಂಡಿತು.

    ಗಾಳಿಪಟ ಉತ್ಸವ: ಶನಿವಾರ ಟ್ಯಾಗೋರ್ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಸ್ಪರ್ಧಾಳುಗಳು ಆಗಮಿಸಿದ್ದರು. ಉದ್ಯಮಿ ರಾಜೇಶ ಕಾಮತ್ ಚಾಲನೆ ನೀಡಿದರು. ಟೀಮ್ ಮಂಗಳೂರಿನ ದಿನೇಶ ಹೊಳ್ಳ ತಂಡ ಗಾಳಿಪಟ ಹಾರಿಸಿತು. ಯಲ್ಲಾಪುರದ ಆಮುಗಂ ಗೌಡರ್​ವೊದಲ, ಜೆ.ಎಂ. ಪಾಡುಯಾಯ್ಯನ್, ಕಾರವಾರದ ದಿಲೀಪ ಗುನಗಿ ಮೂರನೇ ಸ್ಥಾನ ಪಡೆದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಉದ್ಯಮಿ ಕೃಷ್ಣ ಕೇಳಸ್ಕರ್, ಸಮಿತಿಯ ಅಧ್ಯಕ್ಷ ಎನ್.ದತ್ತಾ, ಸಂತೋಷ ನಾಯ್ಕ, ಆನಂದು ಮಡಿವಾಳ, ಮನೋಜ ಗುನಗಿ, ದೀಪಕ, ವಿನಯ ಕೋಲ್ವೆಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts