More

    ಟೈಲರ್​ಗಳಿಗೆ ಆರ್ಥಿಕ ನೆರವು ನೀಡಿ

    ರಟ್ಟಿಹಳ್ಳಿ: ಲಾಕ್​ಡೌನ್ ಹಿನ್ನೆಲೆಯಲ್ಲಿ 2 ತಿಂಗಳಿಂದ ತಾಲೂಕಿನ ಎಲ್ಲ ವೃತ್ತಿಪರ ದರ್ಜಿ (ಟೈಲರ್​ಗಳ) ಅಂಗಡಿಗಳನ್ನು ಮುಚ್ಚಲಾಗಿದ್ದು, ಈ ವೃತ್ತಿ ನಂಬಿಕೊಂಡ ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ಸಹಾಯಧನ ನೀಡಬೇಕು ಎಂದು ರಟ್ಟಿಹಳ್ಳಿ ತಾಲೂಕು ರ್ದಜಿಗಳ ಸಂಘದ ವತಿಯಿಂದ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ಪರಶುರಾಮ ಚೌಹಾಣ ಮಾತನಾಡಿ, ತಾಲೂಕಿನಲ್ಲಿ ಅಂದಾಜು 100 ದರ್ಜಿ ವೃತ್ತಿಪರರಿದ್ದಾರೆ. ಅವರ ಕುಟುಂಬಗಳು ಇದೇ ವೃತ್ತಿ ಅವಲಂಬಿಸಿದ್ದಾರೆ. ಕಳೆದ 2 ತಿಂಗಳಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲ ಟೈಲರ್​ಗಳು ತಮ್ಮ ಅಂಗಡಿ ಮುಚ್ಚಿ ಯಾವುದೇ ಉದ್ಯೋಗ ಇಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ, ಜೂನ್​ನಲ್ಲಿ ಮದುವೆ, ಹಾಗೂ ಇತರೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದವು. ಆದರೆ, ಕರೊನಾ ವೈರಸ್ ಭೀತಿಯಿಂದಾಗಿ ಇವೆಲ್ಲ ಸಮಾರಂಭ ರದ್ದಾಗಿವೆ. ಇದರಿಂದ ಆದಾಯ ಇಲ್ಲದಂತಾಗಿದೆ. ಹಲವು ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುತ್ತಿವೆ. ಸರ್ಕಾರ ಟೈಲರ್​ಗಳ ಪರಿಸ್ಥಿತಿ ಗಮನಿಸಿ ಸೂಕ್ತ ನೆರವು ನೀಡಬೇಕು ಎಂದು ಮನವಿ ಮಾಡಿದರು. ಪಾಂಡುರಂಗ ಒಂಟೀಕಾರ, ಮಾಲತೇಶ ಮಹೇಂದ್ರಕರ, ರಾಜು ನಾಮದೇವ, ಪರಶುರಾಮ ಹೇಂದ್ರೆ, ವಿಠೋಬರಾವ್ ನಾಮದೇವ, ಲಕ್ಷ್ಮೀಕಾಂತ ನವಲೆ, ಗುರಸಿದ್ದಪ್ಪ ಕುಂಬಾರ, ವಸಂತ ಬಿಳಚಿ, ಅಜ್ಜೇಯ ಜಾಧವ್, ಎಚ್.ಪಿ. ನಾಮದೇವ, ಲಕ್ಷ್ಮಣ ಜಾಧವ್, ಮುಸ್ತಾಕ ಅಹ್ಮದ್ ಶೇಖ್, ಹಜರತ್​ಅಲಿ ಇಂಗಳಗೊಂದಿ, ಎನ್. ದಯಾನಂದ, ಮಾಸೂರಿನ ಹನುಮಂತಪ್ಪ ಸುರವನ್ನಿ, ಶಫೀವುಲ್ಲಾ ಕಡೂರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts