More

    ಟಿಎಪಿಸಿಎಂಎಸ್‌ನಿಂದ ರೈತ ಭವನ ನಿರ್ಮಾಣ

    ಹುಣಸೂರು: ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ವತಿಯಿಂದ 1.10 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ರೈತ ಭವನ ನಿರ್ಮಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ತಿಳಿಸಿದರು.


    ನಗರದ ಪರಸಯ್ಯನ ಛತ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ 2021-22ನೇ ಸಾಲಿನ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
    ಸಂಘವು 1500ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದ್ದು, ಸಂತೆಮಾಳ ವ್ಯಾಪ್ತಿಯಲ್ಲಿರುವ ಸಂಘದ ಮಳಿಗೆಗಳು ದುಸ್ಥಿತಿಯಲ್ಲಿದೆ. ಮಳಿಗೆಗಳ ಮರು ನಿರ್ಮಾಣ ಮತ್ತು ಅಲ್ಲಿರುವ ವಿಶಾಲ ಜಾಗದಲ್ಲಿ ರೈತಭವನ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಸಂಘದ ಹಣ ಮತ್ತು ಡಿಸಿಸಿ ಬ್ಯಾಂಕ್, ರಾಜ್ಯ ಫೆಡರೇಷನ್ ಸೇರಿದಂತೆ ವಿವಿಧ ಸಹಕಾರ ಕ್ಷೇತ್ರಗಳ ಮೂಲಕ ಅನುದಾನ ಪಡೆಯಲಾಗುವುದು ಎಂದರು.


    ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎ.ಸಿ.ಕೆಂಪೇಗೌಡ ಮಾತನಾಡಿ, 2021-22ನೇ ಸಾಲಿನಲ್ಲಿ ಸಂಘ ಒಟ್ಟು 14.42 ಲಕ್ಷ ರೂ. ಲಾಭ ಗಳಿಸಿದೆ. ಈ ಲಾಭದಲ್ಲಿ ಶೇ.25ರಷ್ಟು ಹಣವನ್ನು ಆಪದ್ಧನ ನಿಧಿ(3.60 ಲಕ್ಷ.ರೂ.ಗಳು), ಕಟ್ಟಡನಿಧಿ(2.64 ಲಕ್ಷ ರೂ.ಗಳು)ಮರಣ ನಿಧಿ (1.18 ಲಕ್ಷ ರೂ.ಗಳು)ಗೆ ಮೀಸಲಿಡಲಾಗಿದೆ. ಸಂಘದ ವತಿಯಿಂದ ಸಗಟು ದರದಲ್ಲಿ ರಸಗೊಬ್ಬರ ಮಾರಾಟಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.


    ಷೇರುದಾರರ ಡಿವಿಡೆಂಟ್ ನಿಧಿ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಲಿ ಎಂದು ಸದಸ್ಯ ರಾಮೇಗೌಡ ಸಲಹೆ ನೀಡಿದರು. ರೈತರಿಗಾಗಿ ಏನೇನು ಸೌಲಭ್ಯ ಮಾಡಿದ್ದೀರಿ ತಿಳಿಸಿ. ಬಿಲ್ಡಿಂಗ್ ಕಟ್ಟಿ ಬಾಡಿಗೆ ಪಡೆಯುವುದೇ ಸಂಘದ ಉದ್ದೇಶವಾಗಬಾರದು. ರೈತರಿಗೂ ಅನುಕೂಲ ಮಾಡಿಕೊಡಿ ಎಂದು ರಾಮಕೃಷ್ಣೇಗೌಡ ಒತ್ತಾಯಿಸಿದರು.


    ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ನಾಗರಾಜು, ನಿರ್ದೇಶಕರಾದ ಬಸವಲಿಂಗಯ್ಯ, ಗೋವಿಂದೇಗೌಡ, ಶ್ರೀಗೌಡ, ಎಚ್.ಪ್ರೇಮ್‌ಕುಮಾರ್, ಎಚ್.ಎನ್.ಚಂದ್ರಶೇಖರ್, ಜಿ.ಎನ್.ವೆಂಟಕೇಶ್, ಎಚ್.ಆರ್.ಸುಜಾತಾ, ರೇವಣ್ಣ, ರಮೇಶ್, ಎಚ್.ಟಿ.ಬಾಬು, ಡಿಸಿಸಿ ನಿರ್ದೇಶಕ ನಾಗಪ್ರಸಾದ್, ಪ್ರಭಾರ ಕಾರ್ಯದರ್ಶಿ ಎ.ಎಸ್.ಹೇಮಲತಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts