More

    ಜ್ಞಾನ ಯಾರೂ ಕದಿಯದ ಸಂಪತ್ತು

    ಯಾದಗಿರಿ: ಇಂದಿನ ಮಕ್ಕಳು ಭವಿಷ್ಯ ಭಾರತದ ಪ್ರಜೆಗಳು. ಅವರಲ್ಲಿ ಜ್ಞಾನ-ವಿಜ್ಞಾನ, ಸಂಸ್ಕಾರವನ್ನು ಬೆಳೆಸುವ ಗುರುತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ಹೇಳಿದರು.

    ಶನಿವಾರ ನಗರದ ಮಾಣಿಕೇಶ್ವರಿ ಕಾಲೋನಿಯ ಶ್ರೀರಕ್ಷಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಯಲ್ಲಿ ಸಂಸ್ಕೃತಿ-ಸಂಸ್ಕಾರ ಬೆಳೆಸುವ ಕಾರ್ಯ ಶಿಕ್ಷಕರು ಮಾಡಬೇಕು. ಜ್ಞಾನ ಯಾರೂ ಕದಿಯದಿರುವ ಆಸ್ತಿಯಾಗಿದೆ. ಅಂತೆಯೇ ಪಠ್ಯದ ಜತೆಗೆ ಭವಿಷ್ಯದ ಬದುಕಿಗೆ ಬೇಕಾಗುವ ಅವಶ್ಯಕ ಜೀವನ ಮೌಲ್ಯಗಳನ್ನು ಪ್ರಾಥಮಿಕ ಹಂತದಿಂದಲೇ ಕಲಿಸಬೇಕು ಎಂದು ತಿಳಿಸಿದರು.

    ಪತ್ರಕರ್ತ ಪ್ರವೀಣಕುಮಾರ ಮಾತನಾಡಿ, ಶಾಲೆಯ ಮಕ್ಕಳು ಅತ್ಯಂತ ಆಸಕ್ತಿಯಿಂದ ವಿವಿಧ ವಿಷಯಗಳ ಮಾದರಿಯನ್ನು ವಸ್ತು ಪ್ರದರ್ಶನದಲ್ಲಿ ಸಿದ್ದಪಡಿಸಿರುವುದು ಗಮನ ಸೆಳೆಯುವಂತಿದೆ. ಮಕ್ಕಳ ಸೃಜನಶೀಲತೆಯನ್ನು ಗುರುತಿಸಿ ಅವರಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರಲು ಇಂತಹ ವಸ್ತು ಪ್ರದರ್ಶನಗಳು ಸಹಕಾರಿಯಾಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts