More

    ಜ್ಞಾನದ ಸಂಕೇತವೇ ಭಾರತ

    ಕಲಬುರಗಿ: ಭಾರತ ಎಂದರೆ ಜ್ಞಾನದ ಸಂಕೇತ ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿದ ದೇಶ ನಮ್ಮದು ಎಂದು ಡಾ. ಸುರೇಶ ಹೇರೂರ ಅಭಿಪ್ರಾಯ ವ್ಯಕ್ತಪಡಿಸದರು.
    ದತ್ತನಗರದ ಶ್ರೀ ದತ್ತಾತ್ರೇಯ ಮಂದಿರದಲ್ಲಿ ಶಂಕರ ಕಿಂಕರರು ಸಮಿತಿ ಹಾಗೂ ಬಿದ್ದಾಪುರ ಕಾಲನಿಯ ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಸಂಘ ಆಯೋಜಿಸಿದ್ದ ಪುರುಷೋತ್ತಮ ಮಾಸ ಪ್ರವಚನ ಸಮಾರೋಪದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಹಿಂದೂ ಧರ್ಮ ವಿನಾಶ ಹಾದಿ ಹಿಡಿದಾಗ ಶಂಕರರ ಜನನವಾಯಿತು. ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತ್ಥಾರಕರು ಎಂದರು.
    ಭಾರತ ದೇಶದಲ್ಲಿರುವ ಜ್ಞಾನ ಇನ್ನಾವ ದೇಶದಲ್ಲೂ ಸಿಗದು. ವೇದಗಳು ಪ್ರತಿಯೊಬ್ಬರ ಬದುಕಿನ ಮಾರ್ಗದಶರ್ಿಯಾಗಿವೆ. ಭಗವದ್ಗೀತೆ ಮನುಷ್ಯರಿಗೆ ಬದುಕು ರೀತಿ ಕಲಿಸಿಕೊಡುತ್ತದೆ. ರಾಮಾಯಣ, ಮಹಾಭಾರತ ಪ್ರತಿಯೊಬ್ಬರ ಜೀವನ ಹಸನಗೊಳಿಸುತ್ತವೆ. ಇಂಥ ಸಂಪತ್ತು ಪಡೆದಿರುವ ನಾವೇ ಧನ್ಯರು ಎಂದರು.
    ಪಂ.ಮೋಹನ ಭಟ್ ಜೋಶಿ, ನಿವೃತ್ತ ತಹಸೀಲ್ದಾರ್ ಎಂ.ಬಿ. ಶಾಸ್ತ್ರಿ, ಸುಂದರ ಕುಲಕಣರ್ಿ, ವಿದ್ಯಾಸಾಗರ ಕುಲಕಣರ್ಿ, ಅರುಣ ಕುಲಕಣರ್ಿ, ಪ್ರಕಾಶ ಕುಲಕರ್ಣಿ ಸರಡಗಿ, ನಾರಾಯಣ ಕುಲಕಣರ್ಿ ಉಪಸ್ಥಿತರಿದ್ದರು.
    ಮೂರು ದಿನ ಪುರುಷೋತ್ತಮ ಮಾಸದ ಕುರಿತು ಯೋಗೇಶ ಭಟ್ ಜೋಶಿ ಅವರು ಪ್ರವಚನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts