More

    ಜೋಗ- ಕಾರ್ಗಲ್ ಪಪಂ ಸಮಗ್ರ ಅಭಿವೃದ್ಧಿಗೆ 9.50 ಕೋಟಿ ರೂ.: ಶಾಸಕ ಹರತಾಳು ಹಾಲಪ್ಪ

    ಸಾಗರ: ಜೋಗ- ಕಾರ್ಗಲ್ ಪಟ್ಟಣ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಅಂದಾಜು 9.50 ಕೋಟಿ ರೂ. ಅನುದಾನ ಬೇರೆ ಬೇರೆ ಯೋಜನೆಯಡಿ ಬಿಡುಗಡೆಯಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ನಗರಸಭೆ ಆವರಣದಲ್ಲಿ ಭಾನುವಾರ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರ ಜತೆ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಮಾತನಾಡಿ, ನಗರೋತ್ಥಾನದಲ್ಲಿ 4.50 ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾನ 2 ಕೋಟಿ ರೂ., ಕೆಪಿಸಿಯಿಂದ 2.70 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕೆಪಿಸಿಯವರು ಅತಿ ತುರ್ತಾಗಿ ನಿರ್ಮಾಣವಾಗಬೇಕಾಗಿದ್ದ ಬಿದರೂರು ಮತ್ತು ಮಂಡವಳ್ಳಿ ರಸ್ತೆಯನ್ನು ಅವರೇ 2.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಈ ಭಾಗದ ಜನರ ಬಹುಕಾಲದ ರಸ್ತೆ ಬೇಡಿಕೆ ಈಡೇರಿದಂತೆ ಆಗುತ್ತದೆ ಎಂದು ಹೇಳಿದರು.
    ಕಾರ್ಗಲ್ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಯಿಂದ ಪಟ್ಟಣ ಪಂಚಾಯಿತಿ ಪಾವತಿಯಾಗಬೇಕಾಗಿದ್ದ ಕೋಟ್ಯಂತರ ರೂಪಾಯಿ ಅನುದಾನ ಬಾಕಿ ಇದೆ. ಈ ಬಗ್ಗೆ ಹಿಂದೆ ಕೆಪಿಸಿ ಪ್ರಧಾನ ವ್ಯವಸ್ಥಾಪಕರ ಹತ್ತಿರ ಮಾತುಕತೆ ನಡೆಸಲಾಗಿತ್ತು. ಇನ್ನೂ ತೆರಿಗೆ ಹಣ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ನನ್ನ ನೇತೃತ್ವದಲ್ಲಿ ಕಾರ್ಗಲ್ ಪಟ್ಟಣ ಪಂಚಾಯಿತಿ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಣ ನೀಡುವಂತೆ ಮನವಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts