More

    ಜೋಳದ ತೆನೆಗೆ ಕಳ್ಳರ ಕಾಟ

    ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ, ಬಡ್ನಿ, ಬಟ್ಟೂರ, ಹರದಗಟ್ಟಿ ಗ್ರಾಮ ವ್ಯಾಪ್ತಿಯಲ್ಲಿನ ಹಿಂಗಾರಿನ ಜೋಳದ ಬೆಳೆಯನ್ನು ಕಳ್ಳರು ರಾತ್ರೋರಾತ್ರಿ ಕಟಾವು ಮಾಡುತ್ತಿರುವುದು ರೈತರ ನಿದ್ದೆ ಮತ್ತು ನೆಮ್ಮದಿ ಕೆಡಿಸಿದೆ.

    ಪ್ರಸಕ್ತ ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಬಹುತೇಕ ಬೆಳೆ ಹಾನಿಗೀಡಾಗಿವೆ. ಹಿಂಗಾರಿನಲ್ಲಿ ಬೆಳೆದ ಜೋಳ, ಕಡಲೆ, ಗೋದಿ ಬೆಳೆಗಳು ಡಿಸೆಂಬರ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಗೆ ಹಾಳಾಗಿವೆ. ಈ ನಡುವೆ ಅಳಿದುಳಿದ ಜೋಳದ ಬೆಳೆ ಈಗ ತೆನೆಕಟ್ಟಿ ಕೊಯ್ಲಿಗೆ ಬಂದಿದೆ. ಆದರೆ, ಕಳ್ಳರು ರಾತ್ರೋರಾತ್ರಿ ಜೋಳದ ತೆನೆಗಳನ್ನು ಕೊಯ್ದುಕೊಂಡು ಹೋಗುತ್ತಿರುವ ಘಟನೆ ರೈತರನ್ನು ಚಿಂತೆಗೀಡು ಮಾಡಿದೆ.

    ‘ಈ ಕೃತ್ಯವನ್ನು ಯಾರು ಮಾಡುತ್ತಿದ್ದಾರೆ ಎಂಬ ಸಣ್ಣ ಸುಳಿವಿದೆ. ಆದರೆ, ಯಾರಿಗೆ ಹೇಳಿದರೂ ಏನೂ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಿದ್ದೇವೆ. ಇದರಿಂದಾಗಿ ವರ್ಷಪೂರ್ತಿ ತಿನ್ನುವ ಅನ್ನಕ್ಕೂ ಬರ ಬಂದಂತಾಗಿದೆ. ಇರುವ ಎರಡ್ಮೂರು ಎಕರೆ ಜಮೀನಿನಲ್ಲಿನ ಬೆಳೆ ಕೊಯ್ಲಿಗೆ ಬಂದ ವೇಳೆ ಕಳವು ಮಾಡಿದರೆ ನಾವೇನು ಮಾಡಬೇಕು’ ಎಂದು ಬಡ್ನಿ ಗ್ರಾಮದ ದಾನಪ್ಪಗೌಡ ಸಾಲಮನಿ, ನಿಂಗನಗೌಡ ಪಾಟೀಲ, ಶರಣಪ್ಪ ಚಕಾರದ, ರಾಮಣ್ಣ ಅಣ್ಣಿಗೇರಿ, ಬಸನಗೌಡ ಸಾಲಮನಿ ಅವಲತ್ತುಕೊಂಡರು.

    ಜೋಳದ ಬೆಳೆ ಕಳ್ಳತನ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ಈ ಹಿಂದೆ ಕುರಿ, ಮೇಕೆ ಕಳ್ಳರನ್ನು ಹಿಡಿದ ಶೈಲಿಯಲ್ಲಿ ಬೆಳೆ ಕಳ್ಳರನ್ನು ಹಿಡಿಯಲು ಜಾಲ ಬೀಸುತ್ತೇವೆ. | ವಿಕಾಸ ಲಮಾಣಿ ಸಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts