More

    ಜೀವರಾಶಿಗಳಿಗೆ ಜೀವಾಮೃತ ತುಂಗಾಮಾತೆ

    ಲಕ್ಷ್ಮೇಶ್ವರ: ಮಾನವ ಸೇರಿ ಸಕಲ ಜೀವರಾಶಿಗಳಿಗೆ ಜೀವಾಮೃತವಾದ ತುಂಗಾಮಾತೆ ಎಲ್ಲಕ್ಕಿಂತ ಶ್ರೇಷ್ಠ. ಪ್ರತಿಯೊಬ್ಬರೂ ನೀರನ್ನು ಪೂಜ್ಯನೀಯ ಭಾವನೆಯಿಂದ ಕಾಣಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ನದಿಯಲ್ಲಿ ನಿರ್ವಿುಸಲಾಗಿರುವ ಜಾಕ್​ವೆಲ್ ಬಳಿ ಶುಕ್ರವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಉತ್ತಮ ಮಳೆಯಿಂದಾಗಿ ತುಂಗಭದ್ರಾ ನದಿ ತುಂಬಿ ಹರಿಯತ್ತಿದ್ದು, ಎಲ್ಲೆಡೆ ಸಮೃದ್ಧಿಯ ವಾತಾವರಣ ಕಂಡು ಬರುತ್ತಿದೆ. ಕಳೆದ ಅನೇಕ ವರ್ಷಗಳಿಂದ ಲಕ್ಷ್ಮೇಶ್ವರ ಭಾಗದ ಜನರಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹಿಂದಿನ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಇಂಥ ಒಂದು ಯೋಜನೆ ಜಾರಿಯಲ್ಲಿದ್ದು, ಸರಿಯಾದ ನಿರ್ವಹಣೆ ಮಾಡಿದರೆ ಎಲ್ಲೆಡೆ ನೀರು ಪೂರೈಸಬಹುದು. ಈ ನಿಟ್ಟಿನಲ್ಲಿ ಜಾಕ್​ವೆಲ್ ಮತ್ತು ನೀರು ಸಂಸ್ಕರಣಾ ಘಟಕದಲ್ಲಿ ಅವಶ್ಯವಿರುವ ಕೆಲವು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರೊಂದಿಗೆ ರ್ಚಚಿಸಿ ಮಂಜೂರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ಪುರಸಭೆ ಸದಸ್ಯರಾದ ರಾಜಣ್ಣ ಕುಂಬಿ, ಜಯಕ್ಕ ಕಳ್ಳಿ, ಬಸವರಾಜ ಓದುನವರ, ಮಂಜುಳಾ ಗುಂಜಳ, ಎಸ್.ಕೆ. ಹವಾಲ್ದಾರ, ಪೂರ್ಣಿಮಾ ಪಾಟೀಲ, ಯಲ್ಲವ್ವ ದುರ್ಗಣ್ಣವರ, ನೀಲವ್ವ ಮೆಣಸಿನಕಾಯಿ, ಪ್ರವೀಣ ಬಾಳಿಕಾಯಿ, ವಾಣಿ ಹತ್ತಿ, ಕವಿತಾ ಶರಸೂರಿ, ಪೂಜಾ ಖರಾಟೆ, ಪಿಧೋಶ ಆಡೂರ, ರಾಮಪ್ಪ ಗಡದವರ, ನೀಲಪ್ಪ ಹತ್ತಿ, ಗಂಗಾಧರ ಮೆಣಸಿನಕಾಯಿ, ಪ್ರಮೋದ ಖರಾಟೆ, ಗೋವಿಂದ ಶರಸೂರಿ, ಸಿದ್ದಣ್ಣ ದುರ್ಗಣ್ಣವರ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಆರ್.ಎಂ. ಪಾಟೀಲ, ಬಸವರಾಜ ಬಳಗಾನೂರ, ರಾಥೋಡ, ಮಂಜುನಾಥ ಮುದಗಲ್, ಮಂಜುಳಾ ಹೂಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts