More

    ಜೀವದ ಹಂಗು ತೊರೆದು ಜನರ ರಕ್ಷಣೆ

    ಧಾರವಾಡ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಎನ್​ಡಿಆರ್​ಎಫ್​ನ 40ಕ್ಕೂ ಹೆಚ್ಚು ಸಿಬ್ಬಂದಿ ಜಮಾಯಿಸಿದ್ದರು. ಕುಸಿದ ಕಟ್ಟಡದಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಮಿಂಚಿನ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಗಾಯಾಳುಗಳನ್ನು ಹೊರತಂದು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದರು. ಅವಶೇಷಗಳ ಅಡಿ ಸಿಲುಕಿದವರ ಪತ್ತೆಗೆ ಡಾಗ್ ಸ್ಕಾ ್ವ್

    ತಡಕಾಡುತ್ತಿತ್ತು. ಮೇಲ್ಮಡಿಯಲ್ಲಿ ಸಿಲುಕಿದ್ದವರನ್ನು ಹಗ್ಗದ ಮೂಲಕ ಕೆಳಗಿಳಿಸಿದ ಸಿಬ್ಬಂದಿಯ ಮುಖದಲ್ಲಿ ಪ್ರಾಣ ರಕ್ಷಿಸಿದ ಧನ್ಯತಾ ಭಾವವಿತ್ತು.ಇದು ನೈಜ ಎನಿಸಿದರೂ ಅಸಲಿಗೆ ಎನ್​ಡಿಆರ್​ಎಫ್ ತಂಡದಿಂದ ನಡೆದ ಕಟ್ಟಡ ಕುಸಿತ ರಕ್ಷಣಾ ಕಾರ್ಯದ ಕಲ್ಪಿತ ಪ್ರದರ್ಶನ.

    ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪಾಲಿಕೆ ಸಹಯೋಗದೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್​ಡಿಆರ್​ಎಫ್) ತಂಡದಿಂದ ಶುಕ್ರವಾರ ನಡೆದ ಕಲ್ಪಿತ ಪ್ರದರ್ಶನದಲ್ಲಿ ಬೆಂಗಳೂರಿನ ಎನ್​ಡಿಆರ್​ಎಫ್ ತಂಡದ ಸಿಬ್ಬಂದಿ ಜನರಿಂದ ಮೆಚ್ಚುಗೆ ಗಳಿಸಿದರು. ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹೊರತೆಗೆಯುವ ವಿಧಾನ, ಗಾಯಾಳುಗಳನ್ನು ಸುರಕ್ಷಿತವಾಗಿ ಹೊರ ತೆಗೆಯುವುದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ಹಾಗೂ ಶವಗಳನ್ನು ಪತ್ತೆ ಕಾರ್ಯಾಚರಣೆಯ ಕಲ್ಪಿತ ಪ್ರದರ್ಶನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.

    ಈ ವೇಳೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, 2019ರ ಮಾರ್ಚ್​ನಲ್ಲಿ ಸಂಭವಿಸಿದ ಕಟ್ಟಡ ದುರಂತ ಪಾಠ ಕಲಿಸಿದೆ. ಆದ್ದರಿಂದ ಜಿಲ್ಲಾಡಳಿತವು ಅವಳಿನಗರ ಹಾಗೂ ಜಿಲ್ಲೆಯ ಹಳೆಯ, ಶೀತಲ ಕಟ್ಟಡ ಹಾಗೂ ವಾಸ ಯೋಗ್ಯವಲ್ಲದ ಕಟ್ಟಡಗಳನ್ನು ಗುರುತಿಸಿ ಮಾಲೀಕರಿಗೆ ನೋಟಿಸ್ ನೀಡಲು ಪಾಲಿಕೆ ಹಾಗೂ ಗ್ರಾ.ಪಂ.ಗಳಿಗೆ ಸೂಚನೆ ನೀಡಲಿದೆ. ಸಮೀಕ್ಷೆ ನಂತರ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿ, ಕಟ್ಟಡ ಸುರಕ್ಷತೆಯ ಬಗ್ಗೆ ತಜ್ಞರಿಂದ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಎನ್​ಡಿಆರ್​ಎಫ್ 10ನೇ ಬಟಾಲಿಯನ್​ನ ಡೆಪ್ಯುಟಿ ಕಮಾಂಡರ್ ಸುಖೇಂದ್ರ ದತ್ತಾ, ಟೀಂ ಕಂಮಾಡರ್ ಸಂತೋಷಕುಮಾರ ಮತ್ತು ಆರ್.ಪಿ. ಚೌಧರಿ, ಜಾವೀದ ಖಾಜಿ, ಪಿಡಬ್ಲುಡಿ ಇಇ ಎಸ್.ಬಿ. ಚೌಡನ್ನವರ, ಹುಬ್ಬಳ್ಳಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಸತೀಶ ಪಾಟೀಲ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯಕಾರಿ ಮಂಡಳಿಯ ಸದ್ಯಸರು, ಸಾರ್ವಜನಿಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts