More

    ಜೀವಜಲಕ್ಕೆ ಕಾಸಿನ ಕೊರತೆ

    ಕಾರವಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಿಷನ್(ಜೆಜೆಎಂ)ಯೋಜನೆ ಜಾರಿಯಲ್ಲಿರುವ ತೊಡಕುಗಳ ಬಗ್ಗೆ ಬುಧವಾರ ಆಯೋಜಿಸಿದ್ದ ಇಲ್ಲಿನ ಜಿಪಂ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.

    ಉಷಾ ಹೆಗಡೆ ವಿಷಯ ಪ್ರಸ್ತಾಪಿಸಿ, ಗ್ರಾಪಂಗಳ 15 ನೇ ಹಣಕಾಸು ಯೋಜನೆಯ ಶೇ. 15 ರಷ್ಟು ಅನುದಾನವನ್ನು ಜೆಜೆಎಂಗೆ ಮೀಸಲಿಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗಳ ತುರ್ತು ಪರಿಹಾರಕ್ಕೆ ಗ್ರಾಪಂನಲ್ಲಿ ಅನುದಾನವಿಲ್ಲವಾಗುತ್ತದೆ ಎಂದರು.
    ಶಿವಾನಂದ ಹೆಗಡೆ ಕಡತೋಕಾ, ಪ್ರದೀಪ ನಾಯಕ, ಸುಮಂಗಲಾ ನಾಯ್ಕ, ಜಿ.ಎನ್.ಹೆಗಡೆ ಪುಷ್ಪಾ ನಾಯ್ಕ ದನಿಗೂಡಿಸಿ, ಜೆಜೆಎಂ ಸಂಪೂರ್ಣ ಅವೈಜ್ಞಾನಿಕವಾಗಿದೆ. 333 ಗ್ರಾಮಗಳಿಗೆ ನೀರೊದಗಿಸುವ ಯೋಜನೆ ರೂಪಿಸುವಾಗ ಜನಪ್ರತಿನಿಧಿಗಳ ಜತೆ ರ್ಚಚಿಸಿಲ್ಲ. ಈಗಾಗಲೇ ನೀರು ಇರುವ ಗ್ರಾಮಗಳಿಗೇ ಮತ್ತೆ ನಲ್ಲಿ ಸಂಪರ್ಕ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕೆ ಜನರಿಂದ ಶೇ. 10 ರಷ್ಟು ವಂತಿಗೆ ಆಕರಿಸಲಾಗುತ್ತಿದೆ. ಆದರೆ, ಜನ ವಂತಿಗೆ ನೀಡಲು ಸಿದ್ಧರಿಲ್ಲ. ಯೋಜನೆ ಸಂಪೂರ್ಣ ವಿಫಲವಾಗಿ ಅರ್ಧಕ್ಕೇ ನಿಲ್ಲಲಿದೆ. ಮನೆಗಳ ಸರ್ವೆ ಸಹ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸ್ಪಷ್ಟನೆ ನೀಡಿದ ಸಿಇಒ ಪ್ರಿಯಾಂಗಾ, 2050 ರ ಸಂಭಾವ್ಯ ಜನಸಂಖ್ಯೆ, ಮನೆಗಳ ಪ್ರಮಾಣ ಆಧರಿಸಿ ನಾವು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ನೀರಿನ ಮೂಲಗಳು ಇರುವ ಪ್ರದೇಶಗಳನ್ನು ಆಯ್ದು, ನಲ್ಲಿ ಸಂಪರ್ಕ ನೀಡಲಿದ್ದೇವೆ. ಬಾಕಿ ಗ್ರಾಮಗಳಿಗೆ ಎರಡನೇ ಹಂತದಲ್ಲಿ ಮತ್ತೆ ಯೋಜನೆ ರೂಪಿಸಲಿದ್ದೇವೆ ಎಂದರು.

    ಟೋಲ್ ಬಂದ್ ಮಾಡಿ
    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್ ಶುಲ್ಕ ವಸೂಲಿ ಬಗ್ಗೆ ಜಿಪಂನ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಿಯಮ ಮೀರಿ ಟೋಲ್ ವಸೂಲಿ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಶುಲ್ಕ ವಸೂಲಿಯನ್ನು ಬಂದ್ ಮಾಡಬೇಕು ಎಂದು ರತ್ನಾಕರ ನಾಯ್ಕ, ಪ್ರದೀಪ ನಾಯಕ ಆಗ್ರಹಿಸಿದರು. ರಸ್ತೆ ಕಾಮಗಾರಿ ಮುಗಿಯುವವರೆಗೆ ಟೋಲ್ ವಸೂಲಿ ಮಾಡಬಾರದು. ಎಲ್ಲ ಜನಪ್ರತಿನಿಧಿಗಳಿಗೆ ಉಚಿತವಾಗಿ ನೀಡಬೇಕು ಎಂದು ಜಿ.ಎನ್. ಹೆಗಡೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts