More

    ಜೀವಗಳ ಉಳಿವಿಗೆ ರಕ್ತದಾನ ಅವಶ್ಯಕ- ಶಶಿಕಲಾ ಕೃಷ್ಣಮೂರ್ತಿ

    ದಾವಣಗೆರೆ: ಯುವಜನತೆ ರಕ್ತದಾನದ ಮೂಲಕ ತುರ್ತುಚಿಕಿತ್ಸೆ ವೇಳೆ ಜೀವಗಳನ್ನು ಉಳಿಸಲು ಸಹಾಯ ಮಾಡಬೇಕು ಎಂದು ಎಸ್.ಎಸ್ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶಶಿಕಲಾ ಕೃಷ್ಣಮೂರ್ತಿ ತಿಳಿಸಿದರು.
    ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ನಗರದ ಮಾ.ಸ.ಬ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಜ್ಞಾ ರಕ್ತದಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
    ರಕ್ತದಾನವು ಜಾತಿ ಹಾಗೂ ಧರ್ಮ ಮೀರಿದ್ದಾಗಿದೆ. ಸಮಾಜದಲ್ಲಿ ಇಂದು ಬಹುತೇಕ ವಸ್ತುಗಳನ್ನು ಕೃತಕವಾಗಿ ಸೃಷ್ಟಿ ಮಾಡಬಹುದು. ಆದರೆ, ರಕ್ತಕ್ಕೆ ಪರ್ಯಾಯವಿಲ್ಲ. ದೇಹದಲ್ಲಿ ರಕ್ತವು ನಿರಂತರ ಉತ್ಪತ್ತಿಯಾಗುವ ಗುಣ ಹೊಂದಿದ್ದು ಆರೋಗ್ಯವಂತರು ರಕ್ತದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
    ಡಾ.ಜಿ.ಯು. ಕವಿತಾ ಮಾತನಾಡಿ, ರಕ್ತದಾನ ಮಾಡುವುದರಿಂದ ಉತ್ಸಾಹ ಹೆಚ್ಚುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟಬಹುದು ಎಂದು ತಿಳಿಸಿದರಲ್ಲದೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
    ಪ್ರಾಚಾರ್ಯೆ ಪ್ರೊ.ಜಿ.ಸಿ. ನೀಲಾಂಬಿಕಾ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ತಾರಾರಾಣಿ, ಡಾ.ಎ.ಬಿ. ವಿಜಯಕುಮಾರ್, ಡಾ.ಎಂ. ಮಂಜಪ್ಪ, ಪ್ರೊ.ಕೆ.ವೈ. ಈಶ್ವರ್ ಇದ್ದರು. ಪ್ರೊ. ಟಿ. ಆರ್. ರಂಗಸ್ವಾಮಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts