More

    ಜಿಹಾದಿಗಳನ್ನು ಮಟ್ಟಹಾಕಿ

    ಶೃಂಗೇರಿ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಶನಿವಾರ ತಾಲೂಕು ವಿಎಚ್​ಪಿ, ಬಜರಂಗದಳದಿಂದ ತಾಲೂಕು ಬಂದ್ ನಡೆಸಲಾಯಿತು. ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಬ್ಯಾಂಕ್, ಕಚೇರಿಗಳು, ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಿದವು. ಬಂದ್ ವೇಳೆ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶ್ರೀ ಶಂಕರಾಚಾರ್ಯ ವೃತ್ತದಿಂದ ಪ್ರತಿಭಟನೆ ಹೊರಟು ಮುಖ್ಯ ಬೀದಿಯಲ್ಲಿ ಸಾಗಿ ಬಂದರು. ಮೆಸ್ಕಾಂ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಹಾದಿಗಳ ವಿರುದ್ಧ ಘೊಷಣೆ ಕೂಗಿ ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಹಿಂದು ಸಂಘಟನೆಯ ಪ್ರಮುಖ ದಿವೀರ್ ಮಲ್ನಾಡ್ ಮಾತನಾಡಿ, ಹಿಂದುಗಳನ್ನು ಬರ್ಬರವಾಗಿ ಹತ್ಯೆ ಮಾಡುವ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ರಾಜಕಾರಣಿಗಳ ಮನಸ್ಥಿತಿ ಬದಲಾವಣೆ ಆಗಬೇಕು. ಹಿಂದು ಸಂಘಟನೆಗಳು ಒಗ್ಗೂಡಿ ಜಿಹಾದಿಗಳನ್ನು ಮಟ್ಟ ಹಾಕುವ ವ್ಯವಸ್ಥೆಗೆ ನಾಂದಿ ಹಾಡಬೇಕಿದೆ ಎಂದು ಆಗ್ರಹಿಸಿದರು. ಸನ್ಮಾನ ಮಾಡುವಾಗ ರಾಜಕೀಯ ಮುಖಂಡರು ಮುಂದೆ ಇರುತ್ತಾರೆ. ಹಿಂದು ಕಾರ್ಯಕರ್ತರು ಹತ್ಯೆಯಾದಾಗ ಅವರು ಹಿಂದೆ ಇರುತ್ತಾರೆ. ಹಿಂದು ಸಮಾಜ ಯಾವ ರಾಜಕಾರಣಿಗೂ ಮಣೆ ಹಾಕುವುದಿಲ್ಲ. ಕೇಂದ್ರ ಹಾಗೂ ರಾಜ್ಯಸಚಿವರ ವಿರುದ್ಧ ನಮ್ಮ ಆಕ್ರೋಶವಿದೆ. ಜಿಹಾದಿಗಳು, ನಕಲಿ ಗ್ರಾಮ ವಂಶಸ್ಥರು ಮಾಡಿದ ಕುತಂತ್ರವನ್ನು ಹಿಂದು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಹರಿಹಾಯ್ದರು. ಹರ್ಷ, ಪ್ರವೀಣ್ ನೆಟ್ಟಾರು ಅಂಥ ಹಿಂದು ಕಾರ್ಯಕರ್ತರನ್ನು ಹತ್ಯೆಮಾಡಬಹುದು. ಆದರೆ ಹಿಂದುಗಳ ವಿಚಾರಧಾರೆಯನ್ನು ಎಂದಿಗೂ ಹತ್ಯೆ ಮಾಡಲು ಸಾಧ್ಯವಿಲ್ಲ ಎಂದರು. ವಿಎಚ್​ಪಿ ಮುಖಂಡ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, ರಾಜ್ಯಸರ್ಕಾರಕ್ಕೆ ನಮ್ಮ ಹೋರಾಟದಿಂದ ಬಿಸಿ ಮುಟ್ಟಿದೆ. ಹಿಂದು ಕಾರ್ಯಕರ್ತರ ಹತ್ಯೆ ಮಾಡುವವರ ವಿರುದ್ಧ ಸರ್ಕಾರ ಕಠಿಣವಾದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶ್ರೀರಾಮಸೇನೆ ಮುಖಂಡ ಅರ್ಜುನ್ ಮಾತನಾಡಿ, ನಮ್ಮ ದೇಶದ ಅನ್ನ ತಿನ್ನುವ ಜಿಹಾದಿಗಳು ಬೇರೆ ದೇಶಕ್ಕೆ ಪೋ›ತ್ಸಾಹ ನೀಡುತ್ತಿದ್ದಾರೆ. ಪಿಎಫ್​ಐ ಹಾಗೂ ಎಸ್​ಡಿಪಿಐಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.  ಪ್ರಮುಖರಾದ ಹರೀಶ್ ವಿ.ಶೆಟ್ಟಿ, ಎಂ.ಎಲ್.ಪ್ರಕಾಶ್, ಅಂಬ್ಲೂರು ರಾಮಕೃಷ್ಣ, ಉಮೇಶ್ ತಲಗಾರು, ರತ್ನಾಕರ್, ರಾಜೇಶ್ ಮೇಗಳಬೈಲು, ನೂತನ್​ಕುಮಾರ್, ಚೇತನ್ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts