More

    ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ

    ಹಾವೇರಿ: ಜಿಲ್ಲೆಯ ಹಲವೆಡೆ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ತೊಡಕುಂಟಾಗಿದೆ. ರಾಣೆಬೆನ್ನೂರ, ಬ್ಯಾಡಗಿ, ಹಾನಗಲ್ಲ, ರಟ್ಟಿಹಳ್ಳಿ, ಸವಣೂರ, ಶಿಗ್ಗಾಂವಿ, ಹಾವೇರಿ ತಾಲೂಕಿನಾದ್ಯಂತ ಮಳೆಯಾಗಿರುವ ವರದಿಗಾಗಿದೆ. ಸವಣೂರ ತಾಲೂಕಿನಲ್ಲಿ ಬಿರುಸಿನಿಂದ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ರೈತರ ಹೊಲದಲ್ಲಿದ್ದ ಹತ್ತಿ, ಭತ್ತ, ಮೆಣಸು, ಟೊಮ್ಯಾಟೊ ಸೇರಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಭತ್ತದ ಕೊಯ್ಲು ನಡೆಯುತ್ತಿರುವ ಈ ಸಂದರ್ಭದಲ್ಲಿ ಮಳೆಯಿಂದ ರೈತರು ಪರದಾಡುವಂತಾಗಿದೆ. ಕೆಲ ರೈತರು ಈಗ ಮೆಕ್ಕೆಜೋಳದ ಕಾಳುಗಳನ್ನು ಒಣಗಿಸುತ್ತಿದ್ದು ಮಳೆಗೆ ನೆನೆಯುವಂತಾಗಿದೆ. ಶುಕ್ರವಾರ ಬೆಳಗ್ಗಿನಿಂದಲೇ ಮೊಡ ಮುಸುಕಿದ ವಾತಾವರಣ ಕಂಡು ಬಂದಿತ್ತು. ಸಂಜೆಯ ವೇಳೆಗೆ ಮಳೆ ಸುರಿಯಿತು.

    ಹಿರೇಕೆರೂರ ವರದಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಅರ್ಧ ಗಂಟೆಗೂ ಹೆಚ್ಚಿನ ಸಮಯ ಮಳೆ ಸುರಿಯಿತು. ಶುಕ್ರವಾರ ಸಂಜೆ 4.15ಕ್ಕೆ ಆರಂಭಗೊಂಡ ಮಳೆ ಸತತವಾಗಿ ಅರ್ಧ ಗಂಟೆಗೂ ಹೆಚ್ಚಿನ ಕಾಲ ಸುರಿಯಿತು. ಬೆಳಗ್ಗೆಯಿಂದ ವಾತಾವರಣದಲ್ಲಿ ಉಷ್ಣಾಂಶವಿದ್ದು, ಸಂಜೆ ಏಕಾಏಕಿ ಮಳೆಯಾಯಿತು. ರೈತರು ಕಣದಲ್ಲಿ, ಜಮೀನಿನಲ್ಲಿ ಇರಿಸಿದ್ದ ಮೆಕ್ಕೆಜೋಳ, ಜೋಳ, ಭತ್ತ ಬೆಳೆಗಳಿಗೆ ಹಾನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts