More

    ಜಿಲ್ಲೆಯಾದ್ಯಂತ ಮೊಳಗಿದ ರಾಮನಾಮ ಜಪ

    ಹಾವೇರಿ: ಅಯೋಧ್ಯೆಯಲ್ಲಿ ಬುಧವಾರ ಶ್ರೀರಾಮ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಜೆಪಿ ಹಾಗೂ ಹಿಂದುಪರ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿಹಂಚಿ ಸಂಭ್ರಮಿಸಿದರು.

    ಬೆಳಗ್ಗೆ ನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

    ನಂತರ ಮಾತನಾಡಿದ ಅವರು, ನೂರಾರು ವರ್ಷಗಳ ಸಂಘರ್ಷದ ನಂತರ ಹಾಗೂ ಸಾವಿರಾರು ಹಿಂದುಗಳ ಬಲಿದಾನದ ಬಳಿಕ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ವಣದ ಭೂಮಿ ಪೂಜಾ ಕಾರ್ಯಕ್ರಮ ನೆರವೇರುತ್ತಿರುವುದು ಸಂತಸ ತಂದಿದೆ ಎಂದರು.

    ಪೂಜೆಯ ಬಳಿಕ ಸಿಹಿಹಂಚಿ ಸಂಭ್ರಮಿಸಿ ಶ್ರೀರಾಮನಿಗೆ ಜಯಘೊಷ ಮೊಳಗಿಸಲಾಯಿತು. ಈ ಸಮಯದಲ್ಲಿ ಬಿಜೆಪಿ ಪದಾಧಿಕಾರಿಗಳಾದ ಸಿದ್ದರಾಜ ಕಲಕೋಟಿ, ಪ್ರದೀಪ ಮುಳ್ಳೂರ, ಸೌಭಾಗ್ಯಮ್ಮ ಹಿರೇಮಠ, ಶಿವಯೋಗಿ ಹುಲಿಕಂತಿಮಠ, ಪ್ರಭು ಹಿಟ್ನಳ್ಳಿ, ಎಸ್.ಆರ್. ಹೆಗಡೆ, ರಮೇಶ ಪಾಲನಕರ, ಹನಮಂತನಾಯಕ ಬದಾಮಿ, ವೇದವಾಸ ಕಟ್ಟಿ, ಮಂಜುಳಾ ಕರಬಸಮ್ಮನವರ, ಸಂತೋಷ ಆಲದಕಟ್ಟಿ, ಜಗದೀಶ ಮಲಗೋಡ, ವಿವೇಕಾನಂದ ಇಂಗಳಗಿ, ಗುಡ್ಡಪ್ಪ ಭರಡಿ, ನಾಗರಾಜ ಹುರಳಿಕುಪ್ಪಿ ಇತರರಿದ್ದರು.

    ಎಂದಿನಂತೆ ಜನಜೀವನ…

    ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ, ಎಲ್ಲಿಯೂ ಅಹಿತಕರ ಘಟನೆಗಳು ನಡೆಯಲಿಲ್ಲ. ಬದಲಾಗಿ ಎಂದಿನಂತೆ ಜನಜೀವನ ಸಾಗಿತ್ತು. ಬಸ್, ಆಟೋ, ಟೆಂಪೋ, ಮದ್ಯ ಹಾಗೂ ಪಟಾಕಿ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ವ್ಯಾಪಾರದ ಅಂಗಡಿಗಳು ಎಂದಿನಂತೆಯೇ ತೆರೆದಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts