More

    ಜಿಲ್ಲೆಯಲ್ಲಿ 65 ಜನರಿಗೆ ಸೋಂಕು ದೃಢ

    ಹಾವೇರಿ: ಜಿಲ್ಲೆಯಲ್ಲಿ ಸೋಮವಾರ ವಕೀಲ, ಶುಶ್ರೂಷಕಿ, ಆಹಾರ, ಆರೋಗ್ಯ, ಶಿಕ್ಷಣ ಇಲಾಖೆ ಉದ್ಯೋಗಿ ಸೇರಿ 65 ಜನರಿಗೆ ಕರೊನಾ ದೃಢಪಟ್ಟಿದೆ. 103 ಜನರು ಗುಣವಾಗಿದ್ದು, 5 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 4,324 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 2,981 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 109 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,234 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 857 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 377ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ತಾಲೂಕುವಾರು ವಿವರ: ಹಾವೇರಿ ತಾಲೂಕಿನಲ್ಲಿ 32, ಹಿರೇಕೆರೂರ 12, ಬ್ಯಾಡಗಿ 7, ರಾಣೆಬೆನ್ನೂರ, ಹಾಗನಲ್ಲ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ತಲಾ 4, ಸವಣೂರ ತಾಲೂಕಿನಲ್ಲಿ 2 ಜನರಿಗೆ ಸೋಮವಾರ ಸೋಂಕು ದೃಢಪಟ್ಟಿದೆ.

    ಹಾವೇರಿ ತಾಲೂಕಿನ 42, ಸವಣೂರ 28, ಬ್ಯಾಡಗಿ 24, ಹಾನಗಲ್ಲ ತಾಲೂಕಿನ 9 ಜನರು ಸೇರಿ ಸೋಮವಾರ 103 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

    ಐವರ ಸಾವು: ಹಾವೇರಿ ತಾಲೂಕಿನ ಗುತ್ತಲದ ನಿವಾಸಿ 52 ವರ್ಷದ ಪುರುಷ, ಹಾವೇರಿ ವಿದ್ಯಾನಗರದ 62 ವರ್ಷದ ಮಹಿಳೆ, ಕರ್ಜಗಿ ಗ್ರಾಮದ 69 ವರ್ಷದ ಪುರುಷ, ಹಾವೇರಿ ಅಂಬೇಡ್ಕರ್ ನಗರದ ನಿವಾಸಿ 73 ವರ್ಷದ ಪುರುಷ, ರಾಣೆಬೆನ್ನೂರ ಶ್ರೀನಗರದ ನಿವಾಸಿ 54 ವರ್ಷದ ಪುರುಷ ಸೇರಿ ಐದು ಜನರು ಕೋವಿಡ್​ನಿಂದ ಮೃತಪಟ್ಟಿರುವುದನ್ನು ಸೋಮವಾರ ದೃಢೀಕರಿಸಲಾಗಿದೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts