More

    ಜಿಲ್ಲೆಯಲ್ಲಿ 495ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಸೋಮವಾರ ರಾಣೆಬೆನ್ನೂರ ತಹಸೀಲ್ದಾರ್, ಜಿಲ್ಲಾಸ್ಪತ್ರೆ ನರ್ಸ್, ಕೆನರಾ ಬ್ಯಾಂಕ್ ಉದ್ಯೋಗಿ, ಕೆಎಸ್​ಆರ್​ಟಿಸಿ ನಿರ್ವಾಹಕ ಸೇರಿ ಒಂದೇ ದಿನ 36 ಜನರಲ್ಲಿ ಸೋಂಕು ದೃಢಪಟ್ಟಿದೆ. ಓರ್ವ ವೃದ್ಧ ಮೃತಪಟ್ಟಿದ್ದು, 55 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 495ಕ್ಕೇರಿದೆ. 136 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಸೋಮವಾರ ಶಿಗ್ಗಾಂವಿ ತಾಲೂಕಿನಲ್ಲಿ 13, ಹಾವೇರಿ 6, ಸವಣೂರ ಹಾಗೂ ಹಾನಗಲ್ಲ ತಾಲೂಕಿನ ತಲಾ 5 ಜನರಿಗೆ, ಬ್ಯಾಡಗಿ 4, ರಾಣೆಬೆನ್ನೂರ ತಾಲೂಕಿನ 3 ಜನರಿಗೆ ಸೋಂಕು ದೃಢಪಟ್ಟಿದೆ.

    ಶಿಗ್ಗಾಂವಿ ಪಟ್ಟಣದ ಗಾಂಧಿನಗರದ ನಿವಾಸಿ ಗದಗ ಜಿಲ್ಲೆ ಲಕ್ಷೆ್ಮೕಶ್ವರ ಡಿಪೋದ ನಿರ್ವಾಹಕನಾಗಿದ್ದ 52 ವರ್ಷದ ಪುರುಷ, ಮಲ್ಲಿಕಾರ್ಜುನ ನಗರದ 20 ವರ್ಷದ ಯುವತಿ, 45 ವರ್ಷದ ಮಹಿಳೆ, 60 ವರ್ಷದ ಮಹಿಳೆ, 13 ವರ್ಷದ ಬಾಲಕ, 36 ವರ್ಷದ ಮಹಿಳೆ, 52 ವರ್ಷದ ಪುರುಷ, ಆಜಾದ್​ನಗರದ 33 ವರ್ಷದ ಪುರುಷ, ತೋಟಗೇರಿ ಆಸ್ಪತ್ರೆ ಸಮೀಪದ 32 ವರ್ಷದ ಮಹಿಳೆ, ಕೆಂಗಾಪುರ ಪ್ಲಾಟ್​ನ 22 ವರ್ಷದ ಯುವಕ, ಬಂಕಾಪುರ ಸಿಂಪಿಗಲ್ಲಿಯ 62 ವರ್ಷದ ಮಹಿಳೆ, ಶಾ ಬಜಾರ್ ಓಣಿಯ 50 ವರ್ಷದ ಪುರುಷ, 20 ವರ್ಷದ ಯುವತಿಗೆ ಸೋಂಕು ತಗುಲಿದೆ.

    ಹಾವೇರಿ ಶಿವಾಜಿನಗರ 3ನೇ ಕ್ರಾಸ್​ನ 24 ವರ್ಷದ ಯುವತಿ, ದೇವಿಹೊಸೂರ ಗ್ರಾಮದ 24 ವರ್ಷದ ಯುವತಿ, ಕನವಳ್ಳಿ ಗ್ರಾಮದ 32 ವರ್ಷದ ಮಹಿಳೆ, 40 ವರ್ಷದ ಮಹಿಳೆ, 66 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಸವಣೂರ ಅಗ್ನಿಶಾಮಕ ಠಾಣೆ ಕ್ವಾರ್ಟರ್ಸ್ ನಿವಾಸಿ 59 ವರ್ಷದ ಪುರುಷ, ಮಾದಾಪುರ ಗ್ರಾಮದ 26 ವರ್ಷದ ಪುರುಷ, 37 ವರ್ಷದ ಪುರುಷ, 21 ವರ್ಷದ ಯುವಕ, ಚವಡಾಳ ಗ್ರಾಮದ 55 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

    ಹಾನಗಲ್ಲ ಕುಮಾರೇಶ್ವರ ನಗರದ ನಿವಾಸಿ ಮುಂಡಗೋಡ ಪಾಳದ ಕೆನರಾ ಬ್ಯಾಂಕ್​ನ ಉದ್ಯೋಗಿಯಾಗಿದ್ದ 28 ವರ್ಷದ ಯುವಕ, ಕಲ್ಲಹಕ್ಕಲ ಓಣಿಯ 33 ವರ್ಷದ ಪುರುಷ, 20, 18 ವರ್ಷದ ಯುವಕ, ಕಂಚಿನೆಗಳೂರ ಗ್ರಾಮದ 38 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಬ್ಯಾಡಗಿ ಪಟ್ಟಣದ ಇಸ್ಲಾಂಪುರ ಓಣಿಯ 70 ವರ್ಷದ ವೃದ್ಧೆ, ತಾಲೂಕಿನ ತಿಪ್ಪಲಾಪುರ ಗ್ರಾಮದ ನಿವಾಸಿ ಹಾವೇರಿ ಜಿಲ್ಲಾಸ್ಪತ್ರೆಯ ಸ್ಟಾಪ್ ನರ್ಸ್ ಆಗಿದ್ದ 30 ವರ್ಷದ ಮಹಿಳೆ, ಚಿಕ್ಕಬಾಸೂರನ 21 ವರ್ಷದ ಯುವತಿ, ಹಿರೇಹಳ್ಳಿ 26 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

    ರಾಣೆಬೆನ್ನೂರ ತಹಸೀಲ್ದಾರ್ ಆಗಿದ್ದ ವಿದ್ಯಾನಗರದ ನಿವಾಸಿ 33 ವರ್ಷದ ಪುರುಷ, ಬೀರೇಶ್ವರ ನಗರದ 62 ವರ್ಷದ ಪುರುಷ, ಪಟ್ಟಣಶೆಟ್ಟಿ ಓಣಿಯ 27 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

    ಸೋಮವಾರ ರಾಣೆಬೆನ್ನೂರ ತಾಲೂಕಿನ 33, ಶಿಗ್ಗಾಂವಿ ತಾಲೂಕಿನ 13, ಹಾವೇರಿ ತಾಲೂಕಿನ 9ಜನ ಸೇರಿ ಒಟ್ಟು 55ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.

    ವೃದ್ಧ ಸಾವು: ಹಾವೇರಿ ದಾನೇಶ್ವರಿ ನಗರದ 70 ವರ್ಷದ ವೃದ್ಧ ಜು. 14ರಂದು ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ. ಅಂದೇ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಜು. 17ರಂದು ಮೃತಪಟ್ಟಿದ್ದಾರೆ. ಜು. 19ರಂದು ಪಾಸಿಟಿವ್ ವರದಿ ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ನೆರವೇರಿಸಲಾಗಿದೆ.

    ಮಿನಿ ವಿಧಾನಸೌಧ ಸೀಲ್​ಡೌನ್: ರಾಣೆಬೆನ್ನೂರ ಇಲ್ಲಿಯ ತಹಸೀಲ್ದಾರ್​ಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧವನ್ನು ಸೋಮವಾರ ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

    ಸುತ್ತಲಿನ ಮಾರುತಿ ನಗರ, ಸಿದ್ದೇಶ್ವರ ನಗರ ಸೇರಿ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಹಾಗೂ 200 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಣೆ ಮಾಡಲಾಗಿದೆ. ತಹಸೀಲ್ದಾರ್​ಗೆ ಸೋಂಕು ದೃಢಪಟ್ಟಿದ್ದರಿಂದ ಮಿನಿ ವಿಧಾನಸೌಧ ಕಟ್ಟಡದಲ್ಲಿದ್ದ ಕಂದಾಯ, ಆಹಾರ, ಚುನಾವಣೆ ವಿಭಾಗ, ಉಪ ನೋಂದಣಿ ಕಚೇರಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ನಗರಸಭೆ ಸಿಬ್ಬಂದಿ ಮಿನಿ ವಿಧಾನಸೌಧದ ಎಲ್ಲ ಕೊಠಡಿಗಳಿಗೆ ಸ್ಯಾನಿಟೈಸರ್ ಸಂಪಡಿಸಲಾಗಿದೆ. ಕಟ್ಟಡದ ಮೂರು ಗೇಟ್​ಗಳನ್ನು ಬಂದ್ ಮಾಡಿ ಬೀಗ ಹಾಕಲಾಗಿದ್ದು, ಎಲ್ಲ ಕಚೇರಿಗಳ ಸಾರ್ವಜನಿಕರ ಸೇವೆ ಸ್ಥಗಿತಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts