More

    ಜಿಲ್ಲೆಯಲ್ಲಿ 10 ಜನರಿಗೆ ವೈರಸ್

    ಗದಗ: ಜಿಲ್ಲೆಯಲ್ಲಿ ಗುರುವಾರ ಮತ್ತೆ 10 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಭಾನುವಾರ 18, ಸೋಮವಾರ 1, ಮಂಗಳವಾರ 9 ಮತ್ತು ಬುಧವಾರ 6, ಗುರುವಾರ 10 ಸೇರಿ ಕೇವಲ ಐದು ದಿನಗಳಲ್ಲಿ 44 ಕೇಸ್​ಗಳು ದೃಢಪಟ್ಟಂತಾಗಿದೆ.

    ನೀರಾವರಿ ಇಲಾಖೆ ನೌಕರ, ರೋಣ ತಾಲೂಕಿನ ಇಟಗಿ ಗ್ರಾಮದ ಸೋಂಕಿತ 38 ವರ್ಷದ ಪುರುಷನ (ಪಿ-9407) ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದ 8 ಜನಕ್ಕೆ ಸೋಂಕು ತಗುಲಿದೆ. ಇಟಗಿ ಗ್ರಾಮದ 3 ವರ್ಷದ ಬಾಲಕಿ ಹಾಗೂ 37 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ. ಗದಗ ನಗರದ ಸಿದ್ಧರಾಮೇಶ್ವರ ನಗರದ 30 ವರ್ಷದ ಪುರುಷ ಹಾಗೂ ಲಕ್ಷ್ಮಣಸಾ ನಗರದ 31 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

    ಇನ್ನು ವಿಜಯಪುರ ಜಿಲ್ಲಾ ಪ್ರವಾಸದಿಂದ ಲಕ್ಷೆ್ಮೕಶ್ವರದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ 9 ವರ್ಷದ ಬಾಲಕಿಗೆ ಸೋಂಕು ಇರುವುದು ದೃಢವಾಗಿದೆ. ಇವರೆಲ್ಲರಿಗೂ ಗದಗ ನಿಗದಿತ ಜಿಮ್್ಸ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ 104 ಜನರಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 47 ಜನ ಗುಣವಾಗಿದ್ದು. 55 ಸಕ್ರಿಯ ಪ್ರಕರಣಗಳಿವೆ.

    3 ವರ್ಷದ ಮಗುವಿಗೆ ಕರೊನಾ

    ಗಜೇಂದ್ರಗಡ: ಸಮೀಪದ ಇಟಗಿ ಗ್ರಾಮದಲ್ಲಿ ಮೂರು ವರ್ಷದ ಹೆಣ್ಣು ಮಗು ಹಾಗೂ ವ್ಯಕ್ತಿಯೋರ್ವನಿಗೆ ಸೋಂಕು ತಗುಲಿದ್ದು, ಗ್ರಾಮಸ್ಥರು ಮತ್ತಷ್ಟು ಆತಂಕಿತರಾಗಿದ್ದಾರೆ. ಮಂಗಳವಾರವಷ್ಟೇ ಒಂದೇ ಕುಟುಂಬದ ಮೂವರಿಗೆ ಸೊಂಕು ಕಾಣಿಸಿಕೊಂಡಿತ್ತು. ನೀರಾವರಿ ಇಲಾಕೆ ನೌಕರ (ಪಿ-9407) ಅಂತರ್ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ಕಾಣಿಸಿಕೊಂಡಿದ್ದು, ಇವರ ಸಹೋದರನ ಪುತ್ರಿ ಹಾಗೂ ಸ್ನೇಹಿತ 37 ವರ್ಷದ ಪುರುಷನಿಗೆ ಗುರುವಾರ ಕೊವಿಡ್-19 ಸೋಂಕು ದೃಢಪಟ್ಟಿದೆ.

    ಪಿ-9407 ಪ್ರಾಥಮಿಕ ಸಂಪರ್ಕದಲ್ಲಿದ್ದ 18 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅದರಲ್ಲಿ ಇಬ್ಬರಿಗೆ ಸೋಂಕು ದೃಡಪಟ್ಟಿದ್ದು, 16 ಜನರ ವರದಿ ಬರಬೇಕಿದೆ.

    ಆತಂಕ ಹೆಚ್ಚಿಸಿದ ನೀರಾವರಿ ಇಲಾಖೆ ನೌಕರ

    ಮುಂಡರಗಿ: ಪಟ್ಟಣದ ಸಿಂಗಟಾಲೂರ ಏತ ನೀರಾವರಿ ಇಲಾಖೆಯ ಕರೊನಾ ಸೋಂಕಿತ ಸಿಬ್ಬಂದಿಯೊರ್ವನ ಸಂಪರ್ಕದಲ್ಲಿದ್ದ 6 ಜನ ನೌಕರರಿಗೆ ಗುರುವಾರ ಕರೊನಾ ಸೋಂಕು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ನೀರಾವರಿ ಇಲಾಖೆ ಕಚೇರಿ ಮತ್ತು ಅವರು ವಾಸಿಸುತ್ತಿದ್ದ ಪ್ರದೇಶವನ್ನು ತಾಲೂಕು ಆಡಳಿತ ಸೀಲ್​ಡೌನ್ ಮಾಡಿದೆ. ನೀರಾವರಿ ಇಲಾಖೆ ಪ್ರಕರಣದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

    ಪಟ್ಟಣದ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೋಣ ತಾಲೂಕಿನ ಇಟಗಿ ಗ್ರಾಮದ ಸಿಬ್ಬಂದಿಯೊಬ್ಬರಿಗೆ ಕರೊನಾ ದೃಢಪಟ್ಟಿದ್ದು, ಅವರ ಸಂಪರ್ಕಕ್ಕೆ ಬಂದಿದ್ದ ಪಟ್ಟಣದ ವಿದ್ಯಾನಗರದ ಓರ್ವ ವ್ಯಕ್ತಿ, ಹುಡ್ಕೋ ಕಾಲನಿಯ ಮೂವರು ಹಾಗೂ ಗದಗ ನಗರದಲ್ಲಿ ವಾಸವಿದ್ದ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ಕೆ ತಿಳಿಸಿದ್ದಾರೆ. ಪಟ್ಟಣದ ವಿದ್ಯಾನಗರ ಹಾಗೂ ಹುಡ್ಕೋ ಕಾಲನಿ ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ತಿಳಿಸಿದರು.

    ಜಾಗೃತಿ ಮೂಡಿಸಲು ಆಗ್ರಹ

    ಮುಂಡರಗಿ: ಕರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಟ್ಟಣದ ಸರ್ವ ವ್ಯಾಪಾರಸ್ಥರ ಸಂಘದಿಂದ ಗುರುವಾರ ಪ್ರಭಾರಿ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಕೆ, ಪರಸ್ಪರ ಅಂತರ ಕಡ್ಡಾಯವಾಗಿ ಪಾಲನೆ ಆಗಬೇಕು. ಶಂಕಿತರನ್ನು ನಿರ್ದಾಕ್ಷಿಣ್ಯವಾಗಿ ಕ್ವಾರಂಟೈನ್ ಮಾಡಬೇಕು ಎಂದು ಒತ್ತಾಯಿಸಿದರು.

    ಅಲ್ಲದೆ, ಹಣ್ಣು, ತರಕಾರಿ, ಹಾಲು, ಔಷಧ ಅಂಗಡಿ ಹೊರತುಪಡಿಸಿ ಇನ್ನುಳಿದ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಪ್ರತಿದಿನ ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ತೆರೆಯಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಎಸ್.ಎಸ್.ಬಿಚ್ಚಾಲಿ ಮನವಿ ಸ್ವೀಕರಿಸಿದರು. ಸರ್ವ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಕಾಶ ಕಾಲವಾಡ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ಅಶೋಕ ಶಿದ್ಲಿಂಗ್, ದತ್ತಣ್ಣ ಹೆಗ್ಗಡಾಳ, ಅಶೋಕ ಅಂಗಡಿ, ಬಿ.ಬಾಬು, ದೇವು ಹಡಪದ, ಬಾಬಣ್ಣ ಜೈನ, ಜಗದೀಶಬಾಯಿ ಸೋನಿ, ವೆಂಕಟೇಶ ಹೆಗ್ಗಡಾಳ, ಪವನ ಚೋಪ್ರಾ, ಪ್ರಶಾಂತ ತಾವರಗೇರಿ, ಬದ್ರಿನಾಥ ಅಳವಂಡಿ, ಸಾಯಿಕುಮಾರ ಅಳವಂಡಿ, ಫಣಿರಾಜ ಅಳವಂಡಿ, ಗುರುರಾಜ ಅಳವಂಡಿ, ಫರೀದ್ ಲೈನದ್, ವಿಜಯ ಅಕ್ಕಿ, ವೀರಣ್ಣ ಬೇವಿನಮರದ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts