More

    ಜಿಲ್ಲಾ ಕಾಂಗ್ರೆಸ್ ಒಗ್ಗಟ್ಟಿನ ಜಪ

    ತುಮಕೂರು; ಶಿರಾ ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಲು ಆರಂಭಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಿರಾ ಅಭ್ಯರ್ಥಿ ಟಿ.ಬಿ.ಜಯಚಂದ್ರ ಸೇರಿ ಪ್ರಮುಖ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಜನರಿಗೆ ಸಂದೇಶ ರವಾನಿಸಿದರು.

    ಡಿಸಿಸಿ ಕಾರ್ಯಾಧ್ಯಕ್ಷರಾಗಿ ಡಾ.ಸಾಸಲು ಸತೀಶ್ ಅಧಿಕಾರ ಸ್ವೀಕಾರ ಹಾಗೂ ಮಹಾತ್ಮಗಾಂಧಿ, ಲಾಲ್ ಬಹಾದೂರ್ ಶಾಸಿ ಜಯಂತಿ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮುಖಂಡರು ನಾವೆಲ್ಲಾ ಒಗ್ಗಟ್ಟಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಇನ್ನೂ ಶಕ್ತಿಯುತವಾಗಿದೆ ಎಂದು ಸಾರುವ ಪ್ರಯತ್ನ ನಡೆಸಿದರು.

    ಡಾ.ಜಿ.ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ರೇಪಿಸ್ಟ್ ಸರ್ಕಾರ ಆಡಳಿತ ನಡೆಸುತ್ತಿದ್ದು ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದರು. ಶಿರಾ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಎ್ಲರೂ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ ಭ್ರಷ್ಟರ ಆಡಳಿತ ನಡೆಯುತ್ತಿದೆ, ಸ್ಯಾನಿಟೈಸರ್, ಮಾಸ್ಕ್ ಖರೀದಿಯಲ್ಲಿಯೂ ಹಣ ತಿಂದು ಜೀರ್ಣಿಸಿಕೊಳ್ಳುತ್ತಿದ್ದಾರೆ, ಅದೇ ಹಣದಲ್ಲಿ ಚುನಾವಣೆ ಎದುರಿಸಲು ಬರುತ್ತಾರೆ, ಎ್ಲರೂ ಎಚ್ಚರವಾಗಿರಬೇಕು ಎಂದರು.

    ಭಾರತಕ್ಕೆ ಮಾತ್ರ ಕರೊನಾ ಬಂದಿದ್ದರೆ ಅದಕ್ಕೂ ಕಾಂಗ್ರೆಸ್ 60 ವರ್ಷದ ಆಡಳಿತ ಕಾರಣ ಎನ್ನುತ್ತಿದ್ದರು. ಆದರೆ, ಇಂದು ಎಲ್ಲೆಡೆಯೂ ಬಂದಿದ್ದು ಅದನ್ನು ನಿಯಂತ್ರಿಸಲು ಸರ್ಕಾರಗಳ ಕೈಲಾಗಿಲ್ಲ, ಸಾಮಾನ್ಯ ಜನರು ತತ್ತರಿಸುವಂತಾಗಿದೆ ಎಂದು ಪರಮೇಶ್ವರ್ ಟೀಕಿಸಿದರು.
    ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ ಎಂದು ಬೀಗುವ ಬಿಜೆಪಿ ರಾಜ್ಯದ ಪಾಲಿನ ಜಿಎಸ್‌ಟಿ ತರಲಾಗದೆ ಸಾಲ ಮಾಡುತ್ತಿದೆ, ನೆರೆ ಪರಿಹಾರಕ್ಕೆ ಹಣ ನೀಡ್ಲಿ. ಈ ಎ್ಲ ವಿಚಾರಗಳನ್ನು ಶಿರಾ ಚುನಾವಣೆಯಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

    ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಡಾ.ರಫೀಕ್‌ಅಹ್ಮದ್, ಷಫಿಅಹ್ಮದ್, ಆರ್.ನಾರಾಯಣ, ಮೇಯರ್ ರಿದಾಬೇಗಂ, ಮುಖಂಡರಾದ ರಾಯಸಂದ್ರ ರವಿಕುಮಾರ್, ಸಿ.ಬಿ.ಶಶಿಧರ್, ಚೌದ್ರಿ ರಂಗಪ್ಪ ಇದ್ದರು.

    ಅಪರೂಪದ ಸನ್ನಿವೇಶಕ್ಕೆ ಕಾಂಗ್ರೆಸ್ ಕಚೇರಿ ಸಾಕ್ಷಿ: ಕಾಂಗ್ರೆಸ್ ಮುಖಂಡರೆಲ್ಲ ಸ್ನೇಹಿತರಾಗಿ ಒಂದೇ ತಲೆಮಾರಿನವರಾದರೂ ಇತ್ತೀಚಿನ ದಿನಗಳಲ್ಲಿ ಸಂಬಂಧ ಕೆಟ್ಟಿತ್ತು. ಪರಮೇಶ್ವರ್ ಹಾಗೂ ರಾಜಣ್ಣ ಬಾಲ್ಯ ಸ್ನೇಹಿತರಾಗಿದ್ದರೂ ಪರಸ್ಪರ ಬೈದಾಡಿಕೊಂಡು ಮುನಿಸಿಕೊಂಡಿದ್ದರು. ರಾಜಣ್ಣ ಅವರು ಡಾ.ಜಿ.ಪರಮೇಶ್ವರ್ ಕುರಿತು ಪ್ರಯೋಗಿಸಿದ್ದ ‘ಝೀರೊ ಟ್ರಾಫಿಕ್’ ಪದ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಹಾಗೆಯೇ ಟಿ.ಬಿ.ಜಯಚಂದ್ರ, ರಾಜಣ್ಣ ಸಂಬಂಧ ಕೂಡ ಹಳಸಿತ್ತು. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೈತಪ್ಪಿಸಿದ್ದು ಜಿಲ್ಲೆಯ ಮುಖಂಡರು ಎಂಬ ಮಾತು ಜನಜನಿತ, ಇಷ್ಟೆಲ್ಲ ಕಾರಣದಿಂದ ಮುಖಂಡರೆಲ್ಲ ದೂರಾಗಿದ್ದರು. ಡಾ.ಸಾಸಲು ಸತೀಶ್ ಅಧಿಕಾರ ಸ್ವೀಕಾರ ಸಮಾರಂಭದ ನೆಪದಲ್ಲಿ ಎಲ್ಲ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿರುವುದು ಕಾಂಗ್ರೆಸ್ ಪಾಲಿಗೆ ಶುಭಸೂಚನೆ ಎನಿಸಿದೆ.

    ಜೆಡಿಎಸ್‌ಗೆ ಕೃತಜ್ಞತಾ ಭಾವ ಇಲ್ಲ: ಲೋಕಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡರು ಕಣಕ್ಕಿಳಿದಿದ್ದರೆ ತುಮಕೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದೆವು, ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು ನಮ್ಮ ಹೈಕಮಾಂಡ್ ಮಾಡಿದ ತಪ್ಪು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆತ್ಮಾವಲೋಕನ ಮಾಡಿಕೊಂಡರು. ಜೆಡಿಎಸ್ ತಮಗೆ ಬೇಕಾದಾಗ ಕಾಂಗ್ರೆಸ್ ಒಪ್ಪಿಕೊಳ್ಳುತ್ತದೆ, ಬೇಡವಾದಾಗ ಬೈಯುವುದು ಸಾಮಾನ್ಯ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬೇಕೆಂದು ನಾವು ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದು ನಿಜ ಇದಕ್ಕಾದರೂ ಅವರಿಗೆ ಕೃತಜ್ಞತೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ಗೆ ತನ್ನದೇ ಇತಿಹಾಸವಿದೆ, ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮ್ಯಾಚ್ ಫಿಕ್ಸಿಂಗ್ ಬಗ್ಗೆಯೂ ನಮಗೆ ಅರಿವಿದೆ. ದೇವೇಗೌಡರನ್ನು ಪ್ರಧಾನಿ ಹಾಗೂ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಯಾರು? ಸಿಎಂ ಆಗಿದ್ದಾಗ ಚೆನ್ನಾಗಿ ಕಂಡ ಕಾಂಗ್ರೆಸ್ ಕುಮಾರಸ್ವಾಮಿ ಕಣ್ಣಿಗೆ ಈಗ ಕೆಟ್ಟದಾಗಿ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts