More

    ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಸ್ಥಳದಲ್ಲಿಯೇ ಕುಂದುಕೊರತೆ ಪರಿಹಾರ: ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್

    ಸಾಗರ: ಇಡೀ ತಾಲೂಕ ಆಡಳಿತ ನಿಮ್ಮ ಬಳಿ ಬಂದಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಇಲ್ಲಿ ಮುಕ್ತವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಹೇಳಿದರು.
    ಶರಾವತಿ ಹಿನ್ನೀರಿನ ಪ್ರದೇಶವಾದ ಬೆಳೆಣ್ಣೆಯ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ರೂಪಿಸಿರುವ ಯೋಜನೆಗಳು ಫಲಾನುಭವಿಗಳಿಗೆ ತಲುಪಿದೆಯೋ ಇಲ್ಲವೋ ಎನ್ನುವ, ಸತ್ಯದ ಅರಿವು ಇಲ್ಲಿ ತಿಳಿಯುತ್ತದೆ. ಒಂದು ಇಡೀ ದಿನ ಎಲ್ಲ ಇಲಾಖೆ ಅಧಿಕಾರಿಗಳು ನಿಮ್ಮೊಂದಿಗೆ ಚಿಂತನ ಮಂಥನ ನಡೆಸುತ್ತಾರೆ. ನಿಮ್ಮ ಆಹ್ವಾನನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಇದನ್ನು ಪರಿಹರಿಸುವ ಕೆಲಸ ಮಾಡುತ್ತೇವೆ. ಈಗಾಗಲೇ 11 ಕಡೆಗಳಲ್ಲಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಸಾರ್ವಜನಿಕರಿಗೆ ವಿವಿಧ ಇಲಾಖೆಯ ಮಾಹಿತಿಯನ್ನು ನೀಡುವ ಕೆಲಸವೂ ಇಲ್ಲಿ ನಡೆಸುತ್ತೇವೆ. ಶರಾವತಿ ನೀರಿನ ಪ್ರದೇಶವಾದ ಇಲ್ಲಿ ಭೂಮಿ ಕುರಿತ ಸಾಕಷ್ಟು ಸಮಸ್ಯೆಗಳಿವೆ. ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಇಂದು ಸ್ಥಳ ಪರಿಶೀಲನೆ ಮಾಡಿ ಪ್ರಕರಣಗಳ ಸತ್ಯಾಂಶವನ್ನು ವಿವಿಧ ಇಲಾಖೆ ಅಧಿಕಾರಿಗಳಿಗೂ ಮನವರಿಕೆ ಮಾಡಿಕೊಡಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು
    ನೂರಾರು ವರ್ಷಗಳಿಂದ ಈ ಪ್ರದೇಶದಲ್ಲಿ ಜನವಸತಿ ಇದೆ. ಹಿನ್ನೀರು ನೀರು ಆವರಿಸದ ಉಳುಮೆ ಮಾಡುತ್ತಿರುವ ಭೂಮಿಗಳಿವೆ. ಅವರು ಗ್ರಾಮ ಪಂಚಾಯಿತಿಯಿಂದ ಖಾತೆ ಮಾಡಿ ಡಿಮಾಂಡ್ ಏರಿಸಿಕೊಡಿ ಎಂದು ಕೇಳುತ್ತಿದ್ದಾರೆ. ಇನ್ನು ಪರಿಶಿಷ್ಟ ಸಮುದಾಯದ 30 ಕುಟುಂಬಗಳು 3 ಎಕರೆ ಜಾಗದಲ್ಲಿ ನಿವೇಶನ ಮಂಜೂರಾತಿಗೆ ಕೋರಿದ್ದಾರೆ. ಬಹಳ ಜನರು ಪಹಣಿಯಲ್ಲಿ ಬೆಳೆ ನಮ್ಮದು ಆಗುತ್ತಿಲ್ಲ. ಇದರಿಂದಾಗಿ ಸರ್ಕಾರದ ವಿಮೆಯ ಹಣ ನಮಗೆ ಬರುತ್ತಿಲ್ಲ ಎಂದು ಪಹಣಿ ಸಹಿತವಾಗಿ ನಮ್ಮ ಗಮನಕ್ಕೆ ತಂದಿದ್ದಾರೆ ಎಂದರು.
    ಈ ಪ್ರದೇಶದಲ್ಲಿ ವಿಪರೀತ ಮಂಗಗಳ ಕಾಟದಿಂದ ಬೆಳೆ ನಾಶವಾಗುತ್ತಿದೆ. ಅವುಗಳನ್ನು ಸ್ಥಳಾಂತರಗೊಳಿಸುವ ಕೆಲಸವಾಗಬೇಕು ಎಂದು ಜನತೆ ಒತ್ತಾಯಿಸಿದರು. ಎಲ್ಲವನ್ನು ಆಲಿಸಿದ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts