More

    ಜಿಲ್ಲಾದ್ಯಂತ ಹೋಳಿ ಸಂಭ್ರಮ

    ಕಲಬುರಗಿ: ಜಿಲ್ಲಾದ್ಯಂತ ಹೋಳಿ ಹಬ್ಬದ ನಿಮಿತ್ತ ಸೋಮವಾರ ಕಾಮದಹನ ಮಾಡಿದರೆ, ಮಂಗಳವಾರ ಬಣ್ಣದೋಕುಳಿ ಸಂಭ್ರಮ ಕಾಣಲಿದೆ. ನಗರದ ಮಾರುಕಟ್ಟೆಯಲ್ಲಿ ಮಕ್ಕಳು ಬಣ್ಣದಾಟ ಆಡುವ ಪಿಚಕರಿ, ಬಂದೂಕು, ವಿವಿಧ ರೀತಿಯ ಬಣ್ಣಗಳ ಮಾರಾಟ ಜೋರಾಗಿ ನಡೆಯಿತು.
    ಗ್ರಾಮೀಣ ಭಾಗದಲ್ಲಿ ಚಿಕ್ಕ ಮಕ್ಕಳಿಗೆ ಪರಸ್ಪರ ಸಕ್ಕರೆ ಸರ ವಿನಿಮಯ ಮಾಡುವ ಪದ್ಧತಿ ಜಾರಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಸಕ್ಕರೆ ಸರಗಳ ಮಾರಾಟ ಕೂಡ ಜೋರಾಗಿತ್ತು.
    ಸೋಮವಾರ ರಾತ್ರಿ ವಿವಿಧ ಬಡಾವಣೆಗಳಲ್ಲಿ ಕಾಮದಹನ ಮಾಡಲಾಯಿತು. ಮಕ್ಕಳು, ಪುರುಷರು ಬೊಬ್ಬೆ ಹಾಕುತ್ತ ಕಾಮನನ್ನು ಸುಟ್ಟರು. ದುಷ್ಟಶಕ್ತಿ ದಮನ ಮಾಡುವ ಸಂಕೇತವೇ ಹೋಳಿ ಹಬ್ಬ. ಒಂದೊಂದು ಕಡೆ ರಾವಣನ ಪ್ರತಿಮೆ ಮಾಡಿ ಸುಡುವ ಪದ್ಧ್ದತಿ ಇದೆ.
    ಗ್ರಾಮೀಣ ಪ್ರದೇಶದಲ್ಲಿ ಶವಯಾತ್ರೆ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಒಬ್ಬರು ಸತ್ತಂತೆ ನಟನೆ ಮಾಡುತ್ತಾರೆ. ಉಳಿದವರು ಅಳುತ್ತ, ಬೊಬ್ಬೆ ಹಾಕುತ್ತ ಮುಂದೆ ಸಾಗುತ್ತಾರೆ. ಬ್ರಹ್ಮಪುರ, ಶಹಬಜಾರ, ನ್ಯೂ ರಾಘವೇಂದ್ರ ಕಾಲನಿ, ಜೇವರ್ಗಿ ಕಾಲನಿ, ಬಿದ್ದಾಪುರ ಕಾಲನಿ, ಸುಪರ್ ಮಾರ್ಕೆಟ್, ನೆಹರು ಗಂಜ್ ಸೇರಿ ಬಹುತೇಕ ಕಡೆ ಸೋಮವಾರ ರಾತ್ರಿ ಕಾಮದಹನ ಮಾಡಲಾಯಿತು. ಸಂಪ್ರದಾಯದ ಪ್ರಕಾರ ಕಾಮದಹನ ದಿನದಿಂದ ಚಳಿ ಸಂಪೂರ್ಣ ಕಡಿಮೆಯಾಗಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.

    ಬಣ್ಣದೋಕುಳಿಗೂ ಕರೊನಾ ಭೀತಿ
    ಬಣ್ಣದೋಕುಳಿಗೂ ಕರೊನಾ ಭೀತಿ ಎದುರಾಗಿದೆ. ನಗರದಲ್ಲಿ ಮೂರು ದಿನ ಬಣ್ಣದೋಕುಳಿ ನಡೆಯುತಿತ್ತು. ಈ ಸಲ ಹುಣ್ಣಿಮೆ ದಿನ ಬಣ್ಣವಾಡಿದ್ದು ಕಂಡು ಬಂದಿಲ್ಲ. ಧುಳಂಡಿ ದಿನವೂ ಬಣ್ಣದ ರಂಗು ಕಾಣಿಸದಂತಿದೆ. ಚೀನಾದಿಂದ ಬಣ್ಣ ಬರುತ್ತದೆ. ಕರೊನಾ ರೋಗ ಹರಡುತ್ತದೆ ಎಂಬ ವದಂತಿ ಜನರಲ್ಲಿ ಭಯ ಹುಟ್ಟಿಸಿದೆ. ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ನೈಸಗರ್ಿಕ ಬಣ್ಣ ತಯಾರಿಸಲಾಗುತ್ತಿದೆ. ಪ್ರತಿವರ್ಷ ಯೋಗ ಸಾಧಕರು ನೈಸರ್ಗಿಕ ಬಣ್ಣದಿಂದಲೇ ಬಣ್ಣದೋಕುಳಿ ಆಡುತ್ತಾರೆ. ರಾಸಾಯನಿಕ ಬಳಕೆ ಇಲ್ಲದ ಗಿಡ ಮೂಲಿಕೆಯಿಂದ ತಯಾರಿಸಿದ ಬಣ್ಣ ಚರ್ಮಕ್ಕೆ ಹಾನಿಕಾರವಲ್ಲ. ಮಕ್ಕಳು ಕೂಡ ನೈಸರ್ಗಿಕ ಬಣ್ಣ ಬಳಸಿದರೆ ಒಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts