More

    ಜಿಲ್ಲಾದ್ಯಂತ ಸ್ವರ್ಣಗೌರಿ ಹಬ್ಬದ ಸಂಭ್ರಮ

    ಚಿತ್ರದುರ್ಗ
    ಜಿಲ್ಲಾದ್ಯಂತ ಸ್ವರ್ಣ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಗಳೊಂದಿಗೆ ಆಚರಿಸಲಾಯಿತು. ನಗರದ ಪಿ ಆ್ಯಂಡ್ ಟಿ ಕಾಲನಿ ಗಣೇಶ ದೇವಾಲ ಯದಲ್ಲಿ ಶ್ರೀ ಗೌರಿಯನ್ನು ಪ್ರತಿಷ್ಠಾಪಿಸಿದ್ದು,ದರ್ಶನಕ್ಕೆ ಬರುವ ಎಲ್ಲ ಮಹಿಳೆಯರಿಗೆ ಕಾಯಿ,ಕಣ ವಿತರಿಸಲಾಗುತ್ತಿದೆ. ಶನಿವಾರ ಚಂದ್ರ ವಳ್ಳಿಯಲ್ಲಿ ಅನ್ನ ಸಂತರ್ಪಣೆ ಬಳಿಕ ಗೌರಿಯನ್ನು ವಿಸರ್ಜಿಸಲಾಗುವುದು.
    ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆಯ ವೇಳೆ ಗಣೇಶ ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಗುರುಮೂರ್ತಿ,ನಿರ್ದೇಶಕರಾದ ಲತಾ, ಮಂಜುಳಾ,ರತ್ನಮ್ಮ,ರಾಜೇಶ್ವರಿ,ಗಿರಿಜಾ,ಮುನಿಯಪ್ಪ,ವಿರುಪಾಕ್ಷ ಪ್ಪ,ಮೋಹನ್ ಮತ್ತಿತರರು ಇದ್ದರು.
    ಶ್ರೀ ನೀಲಕಂಠೇಶ್ವರ ದೇವಸ್ಥಾನ,ಜೆಸಿಆರ್ ಬಡಾವಣೆ ಗಣೇಶ ಮತ್ತಿತರ ದೇವಾಲಯ ಹಾಗೂ ದೊಡ್ಡಪೇಟೆ ಗೌರಿ ಮನೆ ಹಾಗೂ ನ ಗರದ ವಿವಿಧೆಡೆ ನಾಗರಿಕರು ಮನೆಗಳಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸ್ವರ್ಣಗೌರಿ ಕೂರಿಸಿ ವಿಶೇಷ ಅಲಂಕಾರದೊಂದಿಗೆ ಪೂಜಿ ಸುವುದು,ಮುಂಜಾನೆಯಿಂದಲೇ ಭಕ್ತರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೃಶ್ಯ ಸಾಮಾನ್ಯವಾಗಿತ್ತು.
    ನಗರದ ಹೊಳಲ್ಕೆರೆ ರಸ್ತೆ ಬರಗೇರಮ್ಮ ದೇವಸ್ಥಾನದಲ್ಲಿ ಲಕ್ಷ ಬಳೆಗಳಿಂದ ಹಾಗೂ 51 ಕೆ.ಜಿ.ಅರಿಶಿಣದೊಂದಿಗೆ ದೇವಿಗೆ ಗೌರಮ್ಮನ ಅಲಂಕಾರ ಮಾಡಲಾಗಿತ್ತು. ಬಳೆ ಅಲಂಕಾರವನ್ನು ನೋಡಲು ಸೆ.2ರವರೆಗೆ ಹಾಗೂ 3ರ ನಂತರ ಮಹಿಳೆಯರಿಗೆ ಬಳೆ ವಿತರಿಸ ಲಾ ಗುವುದು. ಮೇಲುದುರ್ಗದ ಶ್ರೀ ಏಕನಾಥೇಶ್ವರಿ ದೇವಸ್ಥಾನ ಏಳು ಹೆಡೆ ಸರ್ಪ ಹಾಗೂ ಕೆಳಗೋಟೆ ಕೊಲ್ಲಾ ಪುರದ ಶ್ರೀ ಮಹಾಲಕ್ಷ್ಮೀ ದೇವಿ ಕೈಯಲ್ಲಿ ಮೊರದ ಬಾಗಿನ ಹಿಡಿದಿರುವ ಮಾದರಿಯೊಂದಿಗೆ ಅಲಂಕರಿಸಲಾಗಿತ್ತು.
    ಕೋಟೆ ರಸ್ತೆ ಶ್ರೀ ರಾಜಉತ್ಸವಾಂಬ ಉಚ್ಚಂಗಿ ಯಲ್ಲಮ್ಮ,ಗೌರಸಂದ್ರ ಮಾರಮ್ಮ,ಕುಂಚಿಗನಾಳ್ ಕಣಿವೆ ಮಾರಮ್ಮ ಹಾಗೂ ನಗರಠಾ ಣೆ ಕಣಿವೆ ಮಾರಮ್ಮ,ನೀಲಕಂಠೇಶ್ವರ ದೇವಾಲಯದಲ್ಲಿ ಪಾರ್ವತಿ ದೇವಿ,ಅಂಬಾಭವಾನಿ,ವಾಸವಿ ಮಹಲ್ ರಸ್ತೆ ಕನ್ಯಕಾ ಪರಮೇಶ್ವರಿ, ಗಾಯತ್ರಿ ಕಲ್ಯಾಣ ಮಂಟಪದ ಗಾಯತ್ರಿ ಹಾಗೂ ಶಾರದ ದೇವಿಯರ ದೇವಸ್ಥಾನ,ಬುರುಜನಹಟ್ಟಿ ಮಲೆನಾಡ ಚೌಡೇಶ್ವರಿ,ಹಟ್ಟಿ ಮಾ ರಮ್ಮ,ಕಾಮನಬಾವಿ ಬಡಾವಣೆಯ ಕಾಳಿಕಾ ಮಠೇಶ್ವರಿ,ಸಂತೆ ಹೊಂಡ ಬಳಿಯ ಬನ್ನಿ ಮಹಾಕಾಳಿ ಸೇರಿದಂತೆ ಮತ್ತಿತರ ದೇವಾಲಯ ಗಳಲ್ಲಿ ವಿಶೇಷ ಪೂಜೆ ನೆರವೇರಿತು. ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಉಡಿ ತುಂಬುವುದು,ಬಾಗಿನ ಕೊಡಲಾಯಿತು. ಸ್ವರ್ಣಗೌರಿ ಹಬ್ಬ ದಂದು ಕೆಲವರು ನಾಗರ ಕಲ್ಲಿಗೆ ಹಾಲೆರೆದು ಪೂಜಿಸಿದರು. ನಗರದಲ್ಲಿ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದ ದಶ್ಯವೂ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts