More

    ಜಿಲ್ಲಾದ್ಯಂತ ಜಿಟಿಜಿಟಿ ಮಳೆ

    ಹಾವೇರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ಶನಿವಾರ ಬೆಳಗ್ಗೆಯಿಂದಲೇ ದಿನವಿಡೀ ಸುರಿದಿದೆ. ಇದರಿಂದ ಜನಜೀವನಕ್ಕೆ ವ್ಯತ್ಯಯವಾಗಿ, ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ನಸುಕಿನಿಂದಲೇ ಮಳೆ ಬೀಳುತ್ತಿದ್ದರಿಂದ ಪತ್ರಿಕೆ, ಹಾಲು ವಿತರಣೆಗೂ ಅಡ್ಡಿಯಾಯಿತು. ಸವಣೂರು, ಶಿಗ್ಗಾಂವಿ ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಜಿಟಿಜಿಟಿ ಮಳೆಯಿಂದ ರಸ್ತೆಗಳೆಲ್ಲ ಕೆಸರುಮಯವಾಗಿದ್ದು, ಹಳ್ಳಗಳಲ್ಲಿ ಹದಗೆಟ್ಟ ರಸ್ತೆಗಳು ಕೊಚ್ಚೆಯಂತಾಗಿವೆ. ನಾಲ್ಕನೇ ಶನಿವಾರವಾದರೂ ಅಧಿವೇಶನ ನಡೆಯುತ್ತಿರುವುದರಿಂದ ಸಾರ್ವತ್ರಿಕ ರಜೆ ರದ್ದು ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಕಚೇರಿಗೆ ಆಗಮಿಸುವಾಗ ಜಿಟಿಜಿಟಿ ಮಳೆಯಿಂದ ತೊಂದರೆ ಅನುಭವಿಸಿದರು.

    ನಗರದ ಕೆಲವು ಅಂಗಡಿಗಳು ಬಂದ್ ಆಗಿದ್ದವು. ಮಾರುಕಟ್ಟೆಯಲ್ಲಿ ವಹಿವಾಟು ಕಡಿಮೆಯಾಗಿತ್ತು. ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಆಟೋ, ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿತ್ತು. ಕಳೆದ ತಿಂಗಳು ಪ್ರವಾಹ ಸ್ಥಿತಿ ಎದುರಾಗಿದ್ದ ಜಿಲ್ಲೆಯಲ್ಲಿ ಮತ್ತೆ ಮಳೆ ಸುರಿಯುತ್ತಿರುವುದರಿಂದ ನದಿತೀರದ ಜನರು ಆತಂಕಗೊಂಡಿದ್ದಾರೆ. ಹಾವೇರಿಯಲ್ಲಿ 4 ಮಿಮೀ, ರಾಣೆಬೆನ್ನೂರ 1.8, ಬ್ಯಾಡಗಿ 3.2, ಸವಣೂರ 22.3, ಶಿಗ್ಗಾಂವಿ 18.8 ಮಿಮೀ, ಹಾನಗಲ್ಲ ತಾಲೂಕಿನಲ್ಲಿ 3 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts