More

    ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ

    ಧಾರವಾಡ: ಕರೊನಾ ಹಾವಳಿ ಹಾಗೂ ಆತಂಕದ ವಾತಾವರಣದ ಮಧ್ಯೆಯೂ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಗಮವಾಗಿ ನಡೆದವು. ಶುಕ್ರವಾರ ಜರುಗಿದ ತೃತೀಯ ಭಾಷೆ ಹಿಂದಿ ಪರೀಕ್ಷೆಯೊಂದಿಗೆ ಕೊನೆಗೊಂಡವು.

    ಜಿಲ್ಲಾದ್ಯಂತ ಹಿಂದಿ ಭಾಷಾ ಪರೀಕ್ಷೆಗೆ 26,360 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 25,445 ಮಕ್ಕಳು ಹಾಜರಾಗಿ 315 ಜನ ಗೈರಾಗಿದ್ದರು. ಕರೊನಾ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಕಂಟೇನ್ಮೆಂಟ್ ಪ್ರದೇಶಗಳಿಂದ 240 ವಿದ್ಯಾರ್ಥಿಗಳು ತೆರಳಿ ಪರೀಕ್ಷೆಗೆ ಹಾಜರಾದರು. ಪರೀಕ್ಷೆ ಸಂದರ್ಭದಲ್ಲಿ 35 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೀಸಲಿದ್ದ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಾದ್ಯಂತ ಶುಕ್ರವಾರ ಪರೀಕ್ಷಾ ಅಕ್ರಮಗಳು ವರದಿಯಾಗಿಲ್ಲ.

    ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕವಿತ್ತು. ಆದಾಗ್ಯೂ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿತ್ತು. ಪರೀಕ್ಷೆ ಯಶಸ್ವಿಯಾಗಿ ಜರುಗಲು ಶಿಕ್ಷಣ, ಆರೋಗ್ಯ, ಪೊಲೀಸ್, ಸಾರಿಗೆ ಸಂಸ್ಥೆ ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಕಾರ ಉತ್ತಮವಾಗಿತ್ತು. ಅದೇರೀತಿ ಪತ್ರಿಕೆಗಳು ವಿದ್ಯಾರ್ಥಿ- ಪಾಲಕರಲ್ಲಿನ ಆತಂಕ ದೂರ ಮಾಡಲು ಉತ್ತಮ ವರದಿ ಪ್ರಕಟಿಸಿ ಸಹಕರಿಸಿವೆ ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಧನ್ಯವಾದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts