More

    ಜಿತೊ ಸಂಸ್ಥೆಯ ಕಾರ್ಯ ಶ್ಲಾಘನೀಯ

    ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜಿತೊ) ಸಂಸ್ಥೆಯು ಕೈಗೊಂಡಿರುವ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿ ವಿಭಾಗ ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರೌನಕ್ ಶಿಂಘವಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಇಲ್ಲಿನ ಉದ್ಯಮ ಬಾಗದಲ್ಲಿರುವ ಶಗುನ್ ಗಾರ್ಡನ್‌ನಲ್ಲಿ ಭಾನುವಾರ ಜಿತೊ ಸಂಸ್ಥೆಯ 16ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು. ಜಿತೊ ಸಂಸ್ಥೆಯು ವ್ಯಾಪಾರ-ವಹಿವಾಟು ಜತೆಗೆ ಸಾಮಾಜಿಕ ಕಾರ್ಯ ಕೈಗೊಂಡು ಇನ್ನಿತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

    ಸಮಾರಂಭದಲ್ಲಿ ಅತ್ಯುತ್ತಮ ಯುವ ಐಕಾನ್ ಪ್ರಶಸ್ತಿಯನ್ನು ಮಂದಾರ ಕೊಲ್ಲಾಪುರೆ, ಅತ್ಯುತ್ತಮ ಉದ್ಯಮ ಆರಂಭ ಪ್ರಶಸ್ತಿಯನ್ನು ಸುಜಿತ ಹುಕ್ಕೇರಿಕರ, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ರಾಜೇಶ್ವರಿ ಸೈಬಣ್ಣವರ, ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿಯನ್ನು ಅಭಿನಂದನ ಅವಲಕ್ಕಿ, ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಆಶಾ ಪತ್ರಾವಳಿ ಹಾಗೂ ಅತ್ಯುತ್ತಮ ವ್ಯಾಪಾರ ಪ್ರಶಸ್ತಿಯನ್ನು ಶಾಂತಿನಾಥ ಟೆಕ್ಸಟೈಲ್ ಕೊಣ್ಣೂರ ಅವರಿಗೆ ವಿತರಿಸಿ ಗೌರವಿಸಲಾಯಿತು.

    ಜಿತೊ ಅಪೆಕ್ಸ್ ನಿರ್ದೇಶಕ ಸತೀಶ ಮೆಹತಾ, ಜಿತೊ ಕೆಕೆಜಿ ವಲಯದ ಕಾರ್ಯದರ್ಶಿ ವಿಕ್ರಮ ಜೈನ, ಭಾರತಿ ಹರದಿ, ರಜತ ಹರದಿ, ನರೇಂದ್ರ ಗಾದಿಯಾ, ಸಂತೋಷ ಪೊರವಾಲ, ಮನೋಜ ಸಂಚೇತಿ, ಸುನಿಲ ಕಟಾರಿಯಾ, ರೂಪಾಲಿ ಜನಾಜ, ಇದ್ದರು. ಜಿತೊ ಅಧ್ಯಕ್ಷ ಪುಷ್ಪಕ ಹನುಮಣ್ಣವರ ಸ್ವಾಗತಿಸಿದರು. ಆಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಖುಷಿ ಕಟಾರಿಯಾ ಪರಿಚಯಿಸಿದರು. ಅಂಕಿತ ಖೊಡಾ ನಿರೂಪಿಸಿದರು. ಅಮಿತ ದೋಷಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts