More

    ಜಾವಳಿಗೆ ದಾಸೋಹ ಜ್ಞಾನ ರತ್ನ ಪ್ರಶಸ್ತಿ

    ಕಲಬುರಗಿ: ಇಲ್ಲಿನ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಶನಿವಾರ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಹಿರಿಯ ಜೀವಿ ಶರಣಬಸಪ್ಪ ಪಾಟೀಲ್ ಜಾವಳಿ ಅವರಿಗೆ ಪ್ರತಿಷ್ಠಿತ ದಾಸೋಹ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಮಾಜ ಮತ್ತು ಸಂಸ್ಥಾನಕ್ಕೆ ನೀಡಿದ ಅಪಾರ ಕೊಡುಗೆ ಮನ್ನಿಸಿ ನೀಡುವ ಈ ಪ್ರಶಸ್ತಿಯು 51 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಹೊಂದಿದೆ. ಮಹಾದಾಸೋಹಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

    ಶರಣಬಸವೇಶ್ವರ 200ನೇ ಜಾತ್ರೆ ಸ್ಮರಣಾರ್ಥ ಸಂಸ್ಥಾನದ ದಾಸೋಹ ಜ್ಞಾನ ರತ್ನ ಪತ್ರಿಕೆಯ ವಿಶೇಷ ಸಂಪುಟ ಬಿಡುಗಡೆಗೊಳಿಸಿದ ಜಗದ್ಗುರು ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಪೂಜ್ಯ ಡಾ.ಅಪ್ಪಾಜಿ ಮತ್ತು ಮಾತೋಶ್ರೀ ಡಾ.ದಾಕ್ಷಾಯಣಿ ಅವರು 90 ವರ್ಷದ ಹಿರಿಯ ಜೀವಿ, ಪರೋಪಕಾರಿ ಹಾಗೂ ಶರಣಬಸವೇಶ್ವರರ ಅಪ್ಪಟ ಭಕ್ತ ಶರಣಬಸಪ್ಪ ಪಾಟೀಲ್ ಜಾವಳಿಗೆ ದಾಸೋಹ ಜ್ಞಾನ ರತ್ನ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ ಎಂದರು.

    ಡಾ.ಅಪ್ಪಾಜಿ ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವತರ್ಿಸಿದ್ದಾರೆ. ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ ಲಿಂಗೈಕ್ಯ ಬಳಿಕ ಡಾ. ಅಪ್ಪಾಜಿ ಸಂಸ್ಥಾನದ ಅಧಿಕಾರ ವಹಿಸಿಕೊಂಡಾಗ 40,000 ರೂ. ಸಾಲದ ಹೊರೆ ಇತ್ತು. ಆದರೂ ಡಾ.ಅಪ್ಪಾಜಿ ಈ ಎಲ್ಲ ಹಣಕಾಸಿನ ತೊಂದರೆ ನಿವಾರಿಸಿ ಶಿಕ್ಷಣ ಸಂಸ್ಥೆಗಳ ಸರಣಿ ಸ್ಥಾಪಿಸಿದರು. 35,000 ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಮಾರ್ಗ ಒದಗಿಸಲು ಶರಣಬಸವ ವಿವಿಯೇ ಕಟ್ಟಿದರು. ಇದು ಸಾಧಿಸಲು ದೂರದೃಷ್ಟಿ ಮತ್ತು ದಾರ್ಶನಿಕ ವಿಧಾನ ಹೊಂದಿದ ವ್ಯಕ್ತಿಯಿಂದ ಮಾತ್ರ ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts