More

    ಜಾಬ್ ಕಾರ್ಡ್​ನಲ್ಲಿ ಕಲಬುರಗಿ ಫಸ್ಟ್

    ಬಾಬುರಾವ ಯಡ್ರಾಮಿ ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಹೊಸ ಜಾಬ್ ಕಾರ್ಡ್​ ವಿತರಿಸುವಲ್ಲಿ ರಾಜ್ಯದಲ್ಲೇ ಕಲಬುರಗಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಬೆಳಗಾವಿ ಮತ್ತು ಬೀದರ್ ಪಡೆದಿವೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗೋವಾ ಇತರ ರಾಜ್ಯಗಳಿಂದ ತವರಿಗೆ ಮರಳಿದವರಿಗೆ ನರೇಗಾ ವರವಾಗಿದೆ.
    ತಮ್ಮ ಊರುಗಳಿಗೆ ಬಂದು ಕೆಲಸವಿಲ್ಲದೆ ಮುಂದಿನ ಜೀವನ ಹೇಗಪ್ಪ ಎಂಬ ಚಿಂತೆಯಲ್ಲಿದ್ದ ವಲಸೆ ಕಾರ್ಮಿಕರಿಗೆ ಜಾಬ್ ಕಾರ್ಡ್​ ನೀಡುವ ಮೂಲಕ ಉದ್ಯೋಗ ಖಾತ್ರಿಯಡಿ ಅವರವರ ಊರುಗಳಲ್ಲೇ ಕೆಲಸ ನೀಡಲಾಗಿದೆ.
    ಜಿಲ್ಲೆಯಲ್ಲಿ ಏಪ್ರಿಲ್ನಿಂದ ಈವರೆಗೆ ಅರ್ಜಿ ಸಲ್ಲಿಸಿದ 44,383 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್​ ವಿತರಿಸಲಾಗಿದೆ. ಈಗಾಗಲೇ 38 ಲಕ್ಷ ಮಾನವ ದಿನಗಳಲ್ಲಿ ಕೆಲಸ ಮಾಡಿದ್ದಾರೆ. ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ 32,876 ಜಾಬ್ ಕಾರ್ಡ್​ ವಿತರಿಸಿ ದ್ವಿತೀಯ, ಬೀದರ್ನಲ್ಲಿ 16,536 ಜನರಿಗೆ ಉದ್ಯೋಗ ಚೀಟಿ ನೀಡುವ ಮೂಲಕ ತೃತೀಯ ಸ್ಥಾನದಲ್ಲಿದೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿವೆ. ಖಾತ್ರಿ ಅನುದಾನ ಬಳಸಿಕೊಳ್ಳುವಲ್ಲಿ ರಾಮನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳು ಮುಂಚೂಣಿಯಲ್ಲಿವೆ.
    ಕಲಬುರಗಿ ಜಿಲ್ಲೆಯಲ್ಲಿ ವಲಸಿಗರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಬೇಡಿಕೆ ಪತ್ರ ಸಲ್ಲಿಸಿದ ಕೆಲವೇ ದಿನಗಳಲ್ಲಿ ಜಾಬ್ ಕಾರ್ಡ್​ ನೀಡಿ 100 ದಿನಗಳ ಕೂಲಿ ಕೆಲಸ ಕೊಡಲಾಗುತ್ತಿದೆ. ಕರೊನಾ ಸುರಕ್ಷಾ ಕ್ರಮಗಳನ್ನು ಪಾಲಿಸಿ ವೈಯಕ್ತಿಕ ಜತೆಗೆ ಸಮುದಾಯ ಕೆಲಸಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆಲಸ ನಡೆದಿರುವುದರಿಂದ ಗೋಕಟ್ಟಾ, ಕೆರೆ ಇತರ ಸರ್ಕಾರ್ ಆಸ್ತಿಗಳು ಸೃಷ್ಟಿಯಾಗುತ್ತಿವೆ. ಸಂಸದ ಡಾ.ಉಮೇಶ ಜಾಧವ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ದಿಶಾ ಸಭೆಯಲ್ಲೂ ನರೇಗಾ ಕೆಲಸದಲ್ಲಿ ಜಿಲ್ಲೆ ಸಾಧನೆ ಮೆರೆದಿದ್ದಕ್ಕೆ ಚಪ್ಪಾಳೆ ತಟ್ಟಿ ಅಭಿನಂದಿಸಲಾಗಿದೆ.
    ಕರೊನಾ ಅಬ್ಬರದಲ್ಲಿ ಮಹಾನಗರಗಳಿಂದ ಹಳ್ಳಿಗಳಿಗೆ ಹಿಂದಿರುಗಿರುವ ಕಾರ್ಮಿ ಕರು ಕೆಲಸವಿಲ್ಲದೆ ಹೈರಾಣಕ್ಕೆ ಸಿಲುಕಿದವರಿಗೆ ಉದ್ಯೋಗ ಖಾತ್ರಿ ಕೈ ಹಿಡಿದಿದೆ. ಅದರೊಂದಿಗೆ ಈಗ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿರುವುದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿದೆ. ಇದರಿಂದಾಗಿ ಮುಂಬಯಿ, ಪುಣೆ, ಹೈದರಾಬಾದ್, ಪಣಜಿ, ಬೆಂಗಳೂರು ಮೊದಲಾದ ನಗರಗಳಿಂದ ವಾಪಸ್ ಬಂದವರ ಬದುಕಿನಲ್ಲಿ ನೆಮ್ಮದಿ ನೆಲೆಸುವಂತಾಗಿದೆ.

    ಉದ್ಯೋಗ ಖಾತ್ರಿ ಅಡಿ ರಾಜ್ಯದ ಇತರ ಜಿಲ್ಲೆಗಳಿಗಿಂತ ಕಲಬುರಗಿಯಲ್ಲಿ ಹೆಚ್ಚಿನ ಜನರಿಗೆ ಜಾಬ್ ಕಾಡರ್್ ವಿತರಿಸಲಾಗಿದೆ. 65 ಲಕ್ಷ ಮಾನವ ದಿನಗಳಲ್ಲಿ ಈಗಾಗಲೇ 38 ಲಕ್ಷ ಮಾನವ ದಿನ ಕೆಲಸ ಮಾಡಲಾಗಿದೆ. ಇದರಿಂದಾಗಿ ಕರೊನಾ ಲಾಕ್ಡೌನ್ ವೇಳೆ ಜಿಲ್ಲೆಗೆ ಮರಳಿರುವ ವಲಸಿಗರಿಗೆ ಕೆಲಸ ಸಿಗುತ್ತಿದೆ. ಈಗ ಬೇಡಿಕೆಯಂತೆ ಮಾನವ ದಿನ ಸೃಷ್ಟಿಸಿ ಎಲ್ಲರಿಗೂ ಕೆಲಸ ನೀಡಲಾಗುತ್ತಿದೆ. ಎಲ್ಲರ ಸಹಕಾರದೊಂದಿಗೆ ನರೇಗಾದಲ್ಲಿ ಉತ್ತಮ ಪ್ರಗತಿ ಕಾಣಲು ಸಾಧ್ಯವಾಗಿದೆ.
    | ಡಾ.ರಾಜಾ ಪಿ. ಜಿಪಂ ಸಿಇಒ

    ರಾಜ್ಯದಲ್ಲೇ ಅತಿ ಹೆಚ್ಚು 44 ಸಾವಿರ ಜಾಬ್ ಕಾಡರ್್ ವಿತರಿಸುವ ಮೂಲಕ ಕಲಬುರಗಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ, ಬೀದರ್ ಜಿಲ್ಲೆಗಳಿವೆ. ಕರೊನಾ ಹಾವಳಿಯಿಂದ ಲಾಕ್ಡೌನ್ ಆಗಿದ್ದರಿಂದ ಲಕ್ಷಾಂತರ ಕಾಮರ್ಿಕರು ತಮ್ಮೂರಿಗೆ ಮರಳಿದ್ದಾರೆ. ಅವರ ಬೇಡಿಕೆಯಂತೆ ಕೆಲಸ ನೀಡಲು ಎಲ್ಲ ಜಿಪಂ ಸಿಇಒಗಳಿಗೆ ಸೂಚಿಸಲಾಗಿದೆ. ತುತರ್ು ಕೆಲಸ ಬೇಕು ಎಂದವರಿಗೆ ತಾತ್ಕಾಲಿಕ ಜಾಬ್ ಕಾಡರ್್ ಸಹ ಕೊಡಲಾಗುತ್ತಿದೆ.
    | ಅನಿರುದ್ಧ ಶ್ರವಣ್
    ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts