More

    ಜಾತ್ರೆ, ಧಾರ್ವಿುಕ ಸಮಾರಂಭ ಸ್ಥಗಿತ

    ಕಾರವಾರ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಇಂದಿನಿಂದಲೇ ಧಾರ್ವಿುಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಿದೆ. ಜಾತ್ರೆ, ಧಾರ್ವಿುಕ ಸಮಾರಂಭಗಳನ್ನು ಬಂದ್ ಮಾಡಿದೆ. ಮದುವೆ ಸಮಾರಂಭಗಳ ಜನರಿಗೆ ಮಿತಿ ಹೇರಿದೆ. ಆದರೆ, ಇಂಥ ಕಾರ್ಯಕ್ರಮಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಹಲವರಿಗೆ ಇದು ನುಂಗಲಾರದ ತುತ್ತಾಗಿದೆ.

    ಕರಾವಳಿಯಲ್ಲಿ ಏಪ್ರಿಲ್​ನಿಂದ ಮೇ ಅಂತ್ಯದವರೆಗೆ ಸಾಲು ಸಾಲಾಗಿ ಬಂಡಿ ಹಬ್ಬಗಳು ನಡೆಯುತ್ತಿದ್ದವು. ಜಾತ್ರೆ, ಧಾರ್ವಿುಕ ಕಾರ್ಯಕ್ರಮಳಿಗೆ ದಿನಾಂಕ ನಿಗದಿಯಾಗಿತ್ತು. ಭಟ್ಕಳದಲ್ಲಿ ರಂಜಾನ್ ಸಲುವಾಗಿ ದೊಡ್ಡ ಮಾರುಕಟ್ಟೆ ಸೇರುತ್ತಿತ್ತು. ಜಾತ್ರೆ ಎಂದರೆ ಬರೀ ಧಾರ್ವಿುಕ ಕಾರ್ಯಕ್ರಮವಲ್ಲ. ಒಂದಿಷ್ಟು ಅಂಗಡಿಗಳೂ ಬರುತ್ತಿದ್ದವು. ಬೆಂಡು, ಬತ್ತಾಸು, ಜಿಲೇಬಿ ಮಾರುವ ಸಿಹಿ ತಿಂಡಿ ಅಂಗಡಿಯವರು. ಆಟಿಕೆ ಸಾಮಗ್ರಿ ಅಂಗಡಿಗಳು, ಹೂವು, ಹಣ್ಣು, ಕಾಯಿ ಮಾರಾಟ ಮಾಡುವರಿಗೆ ಈ ಸಮಾರಂಭಗಳಿಂದ ಉದ್ಯೋಗ ದೊರೆಯುತ್ತಿತ್ತು. ಬೇಸಿಗೆಯಲ್ಲೇ ಈ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ವರ್ಷ ಬೇಸಿಗೆಯಲ್ಲಿ ಲಾಕ್​ಡೌನ್ ಆಗಿದ್ದರಿಂದ ಇಂಥ ವ್ಯಾಪಾರಸ್ಥರು ದುಡಿಮೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಈ ವರ್ಷ ಇನ್ನೇನು ಜಾತ್ರೆಗಳು ಪ್ರಾರಂಭವಾದವು ಎನ್ನುವ ಹೊತ್ತಿಗೆ ಮತ್ತೆ ಕರೊನಾ ಎರಡನೇ ಅಲೆ ಒಕ್ಕರಿಸಿದೆ. ಇದರಿಂದ ಈ ವ್ಯಾಪಾರಸ್ಥರು ದಿಕ್ಕು ತೋಚದಂತಾಗಿದ್ದಾರೆ.

    ಮದುವೆ ಗೊಂದಲ: ಸಾಲು ಸಾಲು ಮುಹೂರ್ತಗಳಿದ್ದು, ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಮದುವೆ ದಿನಾಂಕ ನಿಗದಿ ಮಾಡಿದ ಹಲವರಿದ್ದಾರೆ. ಆದರೆ, ಸರ್ಕಾರದ ನಿಯಮಾವಳಿಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವುದರಿಂದ ಜನ ಗೊಂದಲದಲ್ಲಿದ್ದಾರೆ. ಕಲ್ಯಾಣ ಮಂಟಪಗಳು ಈಗಾಗಲೇ ಬುಕ್ ಆಗಿದ್ದು ಅವರಿಗೂ ಸಮಸ್ಯೆ ಉಂಟಾಗಿದೆ. ಮದುವೆ ಸಮಾರಂಭ ನಂಬಿಕೊಂಡಿದ್ದ ಛಾಯಾಗ್ರಾಹಕರು, ಅಡುಗೆಯವರು, ಶಾಮಿಯಾನ, ಲೈಟಿಂಗ್ ವ್ಯವಸ್ಥೆ ಮಾಡುವವರು ಸೇರಿ ಹಲವರು ದುಡಿಮೆ ನಿಲ್ಲುವ ಆತಂಕದಲ್ಲಿದ್ದಾರೆ.

    ಸರ್ಕಾರದ ಮಾರ್ಗಸೂಚಿ ಜಾರಿ: ಸರ್ಕಾರದ ಮಾರ್ಗಸೂಚಿಯಂತೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ನಿಯಮಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಉಲ್ಲಂಘಿಸುವವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರತಿ ದಿನ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಕರ್ಫ್ಯೂ ಇರಲಿದೆ. ಅಗತ್ಯ ವಸ್ತುಗಳ ಪೂರೈಕೆದಾರರಿಗೆ ಓಡಾಟಕ್ಕೆ ವಿನಾಯಿತಿ ಇರಲಿದೆ. ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ರವರೆಗೆ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಆ ಸಂದರ್ಭದಲ್ಲೂ ಅಗತ್ಯ ಸಾಮಗ್ರಿ ಪೂರೈಕೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಭಾನುವಾರದ ಸಂತೆ ರದ್ದು: ಸರ್ಕಾರ ಮೇ 4 ರವರೆಗೆ ವಾರಾಂತ್ಯದ ಕರ್ಫ್ಯೂ ಘೊಷಿಸಿದ ಹಿನ್ನೆಲೆಯಲ್ಲಿ ಏ.25 ಹಾಗೂ ಮೇ 2 ರಂದು ನಡೆಯಲಿರುವ ಕಾರವಾರದ ಭಾನುವಾರದ ಸಂತೆಯನ್ನು ರದ್ದು ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಹೇಳಿದರು. ನಗರಸಭೆ ಸಭಾಭವನದಲ್ಲಿ ನಗರದ ವ್ಯಾಪಾರಸ್ಥರು, ಧಾರ್ವಿುಕ ಸಂಸ್ಥೆಗಳ ಮುಖಂಡರು, ಬೀದಿ ವ್ಯಾಪಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಪ್ರತಿ ದಿನ ವ್ಯಾಪಾರ ನಡೆಸುವ ಅಗತ್ಯ ವಸ್ತುಗಳ ಅಂಗಡಿಗಳಿಗೆ ಯಾವುದೇ ನಿರ್ಬಂಧವಿಲ್ಲ. ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ತಹಸೀಲ್ದಾರ್ ರಾಮಚಂದ್ರ ಕಟ್ಟಿ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡಕರ್, ತಾಪಂ ಇಒ ಆನಂದಕುಮಾರ್, ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ಇದ್ದರು.

    ಜಿಲ್ಲಾಧೀಕಾರಿ ಹೇಳಿದ್ದೇನು?

    • ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ. 60 ವರ್ಷ ಮೇಲ್ಪಟ್ಟವರು, ಗಂಭೀರ ಕಾಯಿಲೆ ಇರುವವರು ಶೀಘ್ರ ಲಸಿಕೆ ಪಡೆಯಿರಿ.
    • ಮನೆಯಲ್ಲಿರುವ 60 ವರ್ಷದ ವೃದ್ಧರು, ಮಕ್ಕಳ ಬಗ್ಗೆ ಸ್ವಯಂ ನಿಗಾ ವಹಿಸಿ, ಹೊರ ಊರಿನಿಂದ ಮರಳಿದವರನ್ನು ಸ್ವಯಂಪ್ರೇರಿತವಾಗಿ ಐಸೋಲೇಶನ್ ಮಾಡಿ
    • ಜಿಲ್ಲೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ ಇಲ್ಲ. 300 ರಷ್ಟು ದೊಡ್ಡ ಹಾಗೂ 108 ಸಣ್ಣ ಆಮ್ಲಜನಕ ಸಿಲಿಂಡರ್​ಗಳು ಸಂಗ್ರಹವಿದೆ.
    • ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 1785, ಖಾಸಗಿ ಆಸ್ಪತ್ರೆಗಳಲ್ಲಿ 325 ಹಾಸಿಗೆಗಳು ಕೋವಿಡ್ ರೋಗಿಗಳಿಗಾಗಿ ಮೀಸಲಿವೆ. ಸದ್ಯ ಆಸ್ಪತ್ರೆಗಳಲ್ಲಿ 65 ರೋಗಿಗಳು ಮಾತ್ರ ಇದ್ದಾರೆ.
    • ವೀಕೆಂಡ್ ಲಾಕ್​ಡೌನ್ ಅವಧಿಯಲ್ಲಿ ತಹಸೀಲ್ದಾರರಿಂದ ಪಾಸ್ ಪಡೆದು ಮದುವೆ ಸಮಾರಂಭ ಮಾಡಬಹುದು. ಆದರೆ, ನಿಯಮಾವಳಿಯಂತೆ 50 ಕ್ಕಿಂತ ಜಾಸ್ತಿ ಜನ ಸೇರುವಂತಿಲ್ಲ. ನಿಯಮ ಮೀರಿದಲ್ಲಿ ಕಲ್ಯಾಣ ಮಂಟಪದ ಟ್ರೇಡ್ ಲೈಸನ್ಸ್ ರದ್ದು ಮಾಡಿ, ಐಪಿಸಿ 188 ಅಡಿ ಪ್ರಕರಣ ದಾಖಲಿಸಲಾಗುವುದು.
    • ಮಹಾರಾಷ್ಟ್ರ, ಕೇರಳ, ಪಂಜಾಬ್​ನಿಂದ ಬರುವವರಿಗೆ 72 ಗಂಟೆಯ ಮೊದಲಿನ ಆರ್​ಟಿಪಿಸಿಆರ್ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಬೇಕು. ಉಳಿದ ರಾಜ್ಯದವರಿಗೆ ಈ ನಿಯಮ ಅನ್ವಯವಿಲ್ಲ.

    169 ಜನರಿಗೆ ಕೋವಿಡ್: ಜಿಲ್ಲೆಯ 169 ಜನರಿಗೆ ಬುಧವಾರ ಕೋವಿಡ್ ಕಾಣಿಸಿಕೊಂಡಿದೆ. ಒಂದು ಸಾವು ಸಂಭವಿಸಿದೆ. ಕಾರವಾರದಲ್ಲಿ 35, ಯಲ್ಲಾಪುರ-19, ಮುಂಡಗೋಡ- 20, ಹಳಿಯಾಳ, ದಾಂಡೇಲಿ ಸೇರಿ 38, ಶಿರಸಿ-22, ಅಂಕೋಲಾ- 6, ಕುಮಟಾ- 8, ಹೊನ್ನಾವರ-5, ಭಟ್ಕಳ- 4, ಸಿದ್ದಾಪುರ-3, ಜೊಯಿಡಾದಲ್ಲಿ 9 ಕರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಶಿರಸಿಯಲ್ಲಿ 1 ಸಾವು ಸಂಭವಿಸಿದೆ. ಜಿಲ್ಲೆಯ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 653 ಕ್ಕೆ ಏರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts