More

    ಜಾತ್ರೆಯ ಕುರಿ ವ್ಯಾಪಾರ ಜೋರು

     ಕಡೂರು: ತಾಲೂಕಿನ ಅಧಿದೇವತೆ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ನಡೆಯುವ ದೇವಿಯ ಅಮ್ಮನಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಕುರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

    ಈ ಬಾರಿ ತಾಲೂಕಿನ ಬಿಳುವಾಲ, ಬಾಸೂರು, ಗೌಡನಕಟ್ಟೆಹಳ್ಳಿ ಭಾಗದ ಕುರಿಗಳು ಹೆಚ್ಚಾಗಿ ವ್ಯಾಪಾರವಾದವು. ಹೊಸದುರ್ಗ, ಹೊನ್ನಾಳಿ, ಚಿತ್ರದುರ್ಗ, ರಾಣೆಬೆನ್ನೂರು ಭಾಗಗಳ ಕಡೆಗಳಿಂದ ವಿಶೇಷ ತಳಿಗಳ ಟಗರು ಮರಿಗಳನ್ನು ಮಾರಾಟ ಮಾಡಲು ವ್ಯಾಪಾರಿಗಳು ಭಾನುವಾರ ತಡರಾತ್ರಿಯೇ ಬಿಡಾರ ಹೂಡಿದ್ದರು.

    ಒಂದು ಕುರಿಯ ಬೆಲೆ 18 ಸಾವಿರ ರೂ.ನಿಂದ ಪ್ರಾರಂಭವಾಗಿ 40 ಸಾವಿರ ರೂ.ವರೆಗೆ ಮಾರಾಟವಾದವು. ಪ್ರತಿ ಸೋಮವಾರದ ಸಂತೆಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಕುರಿ ವ್ಯಾಪಾರ ನಡೆಯುತ್ತಿತ್ತು. ಈ ಬಾರಿ ಹಬ್ಬದ ಅಂಗವಾಗಿ ಬೆಳಗ್ಗೆ 5 ಗಂಟೆಗೆ ಆರಂಭವಾದ ಕುರಿ ಸಂತೆ ಸಂಜೆಯವರೆಗೂ ಜೋರಾಗಿ ನಡೆಯಿತು. ಬಿಳುವಾಲ ಮತ್ತು ಬಾಸೂರು ಕುರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು 43 ಸಾವಿರ ರೂ.ವರೆಗೂ ಮಾರಾಟವಾಯಿತು.  ಕಡೂರು ಎಪಿಎಂಸಿಯಲ್ಲಿ ಸೋಮವಾರ ಸುಮಾರು 8 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟವಾದವು. ಪೈಪೋಟಿಯ ನಡುವೆ ಜಿದ್ದಿಗೆ ಬಿದ್ದು ಕುರಿಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಿತ್ತು. ಕುರಿ ಸಂತೆ ನೋಡಲು ಯುವಕರ ದಂಡೇ ನೆರದಿತ್ತು.

    ಕುರಿ ಸಂತೆ ನಡುವೆಯೇ ಕೋಳಿಗಳ ವ್ಯಾಪಾರ ಜೋರಾಗಿತ್ತು. ನಂತರ ಮಸಾಲೆ ಪದಾರ್ಥಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ಈರುಳ್ಳಿ, ಬೆಳ್ಳುಳ್ಳಿ ಖರೀದಿಸುವ ಗ್ರಾಹಕರು ಹೆಚ್ಚಿದ್ದರು. ಉತ್ತರ ಕರ್ನಾಟಕದ ನಾಟಿ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts