More

    ಜಾತಿ ಪ್ರಮಾಣಪತ್ರಕ್ಕಾಗಿ ಸಾಮೂಹಿಕ ಕೇಶಮುಂಡನ

    ಹುಮನಾಬಾದ್: ಬೇಡ ಜಂಗಮ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಹೋರಾಟ ಸಮಿತಿ ತಹಸಿಲ್ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯ 10ನೇ ದಿನವಾದ ಶುಕ್ರವಾರ ಸಾಮೂಹಿಕವಾಗಿ ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಸಕರ್ಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

    ಸ್ಥಳೀಯ ಹಿರೇಮಠದ ಶ್ರೀ ರೇಣುಕಗಂಗಾಧರ ಶಿವಾಚಾರ್ಯರು ಮಾತನಾಡಿ, ಬೇಡಜಂಗಮ ಪ್ರಮಾಣಪತ್ರಕ್ಕಾಗಿ ಸಮಾಜದ ಜನರು ಶಾಂತಿಯುತ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ಸರಿಯಲ್ಲ. ತಾಳ್ಮೆ ಪರೀಕ್ಷೆ ಮಾಡದೆ ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಸಮಾಜದ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

    ಪ್ರಮುಖರಾದ ಸಿದ್ದು ಚಕ್ಕಪಳ್ಳಿ, ರವಿ ಸ್ವಾಮಿ, ಸುಭಾಷ ಕೆನಾಡೆ ಮಾತನಾಡಿ, ಬೇಡಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಜಂಗಮ ಸಮಾಜ 10 ದಿನಗಳಿಂದ ಹಗಲೂ-ರಾತ್ರಿ ಎನ್ನದೆ ಧರಣಿ ನಡೆಸುತ್ತಿದ್ದರೂ ಸಕರ್ಾರ ಬೇಡಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಿರಂತರ ಮಳೆ ಸುರಿಯುತ್ತಿದ್ದರೂ ಸ್ಥಳದಿಂದ ಯಾರೊಬ್ಬರೂ ಕದಲಿಲ್ಲ. ಈ ಹಿಂದೆ ರಕ್ತದಲ್ಲಿ ಸಿಎಂಗೆ ಪತ್ರ ಬರೆದು ಮೀಸಲಾತಿ ಘೋಷಿಸುವಂತೆ ಒತ್ತಾಯಿಸಲಾಗಿತ್ತು. ಇದೀಗ ತಲೆ ಕೂದಲು ಬೋಳಿಸಿಕೊಂಡು ಬೇಡಿಕೆಗೆ ಸ್ಪಂದಿಸುವಂತೆ ಒತ್ತಡ ಹೇರಲಾಗಿದೆ ಎಂದು ಕಿಡಿಕಾರಿದರು.

    ಪ್ರಮುಖರಾದ ದಯಾನಂದ ಸ್ವಾಮಿ, ಬಸಯ್ಯ ಸ್ವಾಮಿ, ಸಿದ್ದು ಹಿರೇಮಠ, ಬಸವ ಹಿರೇಮಠ, ರಾಮಲಿಂಗಯ್ಯ ಸ್ವಾಮಿ ಇತರರಿದ್ದರು. ಸಾಮೂಹಿಕವಾಗಿ ಕೇಶಮುಂಡನ ಮಾಡಿಸಿಕೊಂಡ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts