More

    ಜಾತಿ ನಿಂದನೆ ಕೇಸ್ ದಾಖಲಿಸಲು ಆಗ್ರಹ

    ಮುದ್ದೇಬಿಹಾಳ: ಇದೇ ನ.6ರಂದು ನಡೆದ ಶಿಕ್ಷಕರ ನೇಮಕಾತಿ ಅರ್ಹತೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೌರಿಕ ವೃತ್ತಿ ಬಗ್ಗೆ ಅವಹೇಳನಕಾರಿ ಪದ ಬಳಸುವ ಮೂಲಕ ಅವಮಾನಿಸಲಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಹಡಪದ ಅಪ್ಪಣ್ಣ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

    ಪಟ್ಟಣದ ತಂಗಡಗಿ ರಸ್ತೆಯ ಹಡಪದ ಅಪ್ಪಣ್ಣ ವೃತ್ತದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

    ಸವಿತ ಸಮಾಜದ ಅಧ್ಯಕ್ಷ ಮಹೇಶ ತೇಲಂಗಿ, ಭಾರತೀಯ ಭೀಮ ಸೇನೆ ಮುಖಂಡ ಪ್ರದೀಪ ಕೊಂಡಗೂಳಿ ಮಾತನಾಡಿ, ಪದೇ ಪದೇ ಕ್ಷೌರಿಕ ವೃತ್ತಿಗೆ ಅಪಮಾನ ಮಾಡಲಾಗುತ್ತಿದೆ. ಸರ್ಕಾರ ಕ್ಷೌರಿಕ ವೃತ್ತಿಯನ್ನು ಅಪಮಾನ ಮಾಡುವವರ ಮೇಲೆ ಜಾತಿ ನಿಂದನೆ, ವೃತ್ತಿ ನಿಂದನೆ ಕಾಯ್ದೆ ಜಾರಿಗೆ ತರಬೇಕು. ಶಿಕ್ಷಣ ಇಲಾಖೆ ಮಾಡಿದ ಈ ಎಡವಟ್ಟಿಗೆ ಕಾರಣರಾದವರನ್ನು ಸೇವೆಯಿಂದ ವಜಾಗೂಳಿಸಬೇಕು. ಶಿಕ್ಷಣ ಇಲಾಖೆ ಇಂತಹ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕು. ಇಲಾಖೆ ಹಿರಿಯ ಅಧಿಕಾರಿಗಳು ರಾಜ್ಯದ ಕ್ಷೌರಿಕ ಸಮಾಜದವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ಶಂಕರಪ್ಪ ಹಡಪದ, ಸವಿತಾ ಸಮಾಜದ ಅಧ್ಯಕ್ಷ ರವಿ ತೇಲಂಗಿ, ಚಂದ್ರಪ್ಪ ಹಡಪದ, ದೇವೇಂದ್ರ ಶಹಾಪೂರ, ಅಡಿವೆಪ್ಪ ಹಡಪದ, ಈರಣ್ಣ ಈಡ್ಲೂರ, ಶಂಕರ ಹಡಪದ, ಕುಮಾರ ತೇಲಂಗಿ, ಶಿವಕುಮಾರ ಹಡಪದ, ಭೀಮಣ್ಣ ಹಡಪದ, ಶ್ರೀನಿವಾಸ ತೇಲಂಗಿ, ಭೀಮಣ್ಣ ಹಡಪದ, ಮಲ್ಲಣ್ಣ ತೇಲಂಗಿ, ಶರಣಪ್ಪ ಮಸಾಲಜಿ, ಮಹಾಂತೇಶ ಹಡಪದ, ಪ್ರಹ್ಲಾದ ಹಡಪದ, ಶಿವು ಬಳವಾಟ, ಶ್ರೀಕಾಂತ ಹಡಪದ, ಬಸವರಾಜ ಅಬ್ಬಿಹಾಳ, ಚಂದ್ರಶೇಖರ ಬೂದಿಹಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts