More

    ಜಾತಿ, ಧರ್ಮದಿಂದ ದೇಶ ಕಟ್ಟಲಾಗದು

    ಚಿತ್ರದುರ್ಗ: ಬಂಡಾಯವೇ ಪ್ರಮುಖವಾಗಿದ್ದ ಕಾಲಘಟ್ಟ ಸರಿದು, ಎಲ್ಲರೂ ಈಗ ತಮ್ಮನ್ನು ಜಾತಿ, ಧರ್ಮಗಳಿಂದ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸಾಹಿತಿ ಬಿ.ಎಲ್.ವೇಣು ವಿಷಾದಿಸಿದರು.
    ನಗರದ ಸೃಷ್ಟಿಸಾಗರ ಪ್ರಕಾಶನ, ಕೆಎಂವಿ ಅಭಿಮಾನಿಗಳ ಬಳಗ, ಬಾಪೂಜಿ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಹೋಟೆಲ್‌ವೊಂದರಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿವಿ ಗೌರವ ಡಾಕ್ಟರೇಟ್ ಪುರಸ್ಕೃತ ಕೆ.ಎಂ.ವೀರೇಶ್ ಅವರ ಸನ್ಮಾನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಾತಿ-ಧರ್ಮಗಳೆಂಬ ಮನೋಭಾವಕ್ಕಿಂತ ನಮ್ಮಗಳ ನಡುವೆ ಪ್ರೀತಿ, ವಿಶ್ವಾಸ ಮುಖ್ಯ. ಒಬ್ಬರ ಸಂತೋಷನ್ನು ಎಲ್ಲರೂ ಹಂಚಿಕೊಳ್ಳಬೇಕು. ಅಸೂಯೆ ಬೇಡ, ಧರ್ಮ-ಜಾತಿಯಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ ಎಂದರು.
    ಶಿಕ್ಷಣ ಜತೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಗಳಿಗೆ ವೀರೇಶ್ ಹಿಂದಿನಿಂದಲೂ ಕೈಜೋಡಿಸಿಕೊಂಡು ಬರುತ್ತಿದ್ದಾರೆ. ಅವರ ಪ್ರಾಮಾಣಿಕ ಪರಿಶ್ರಮಕ್ಕೆ ಪ್ರಶಸ್ತಿ ಅರಸಿಬಂದಿದೆ. ಕಲಾವಿದರೂ ಆಗಿರುವ ವೀರೇಶ್‌ಗೆ ಕಲಾವಿದರ ಕಷ್ಟ, ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
    ಕವಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಸಂತೋಷವನ್ನು ಹಂಚಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಬ್ಬ ವ್ಯಕ್ತಿತ್ವ ಪ್ರಶಸ್ತಿಗೆ ಕಾರಣವಾಗಿರುತ್ತದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರೊಂದಿಗೆ ಸಾಮಾಜಿಕ ಸೇವೆಯಲ್ಲೂ ವೀರೇಶ್ ತಮ್ಮನ್ನು ತೊಡಗಿ ಕೊಂಡಿದ್ದಾರೆ. ವೀರೇಶ್ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅಪಾರವಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ, ವೀರೇಶ್ ಮಾತನಾಡಿದರು. ಸೃಷ್ಠಿಸಾಗರ ಪ್ರಕಾಶನದ ಮುಖ್ಯಸ್ಥ ಮೇಘ ಗಂಗಾಧರನಾಯ್ಕ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯ ಎಂ.ಆರ್.ಜಯಲಕ್ಷ್ಮೀ, ನಿವೃತ್ತ ಡಿವೈಎಸ್ಪಿಗಳಾದ ಅಬ್ದುಲ್ ರೆಹಮಾನ್, ಮಹಾಂತರೆಡ್ಡಿ, ಸೈಯದ್ ಇಸಾಖ್ ಮತ್ತಿತರರು ಇದ್ದರು.
    ಗೌಸ್‌ಪೀರ್ ಪ್ರಾರ್ಥಿಸಿದರು. ಹುರುಳಿ ಬಸವರಾಜ್ ಸ್ವಾಗತಿಸಿದರು. ಆರ್.ಶೈಲಜಾಬಾಬು ವಂದಿಸಿದರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts