More

    ಜಾಗ್ವರ್ ಕಾರು ಮಾರಾಟ ಜಿಪಿಎಸ್ ಆಧರಿಸಿ ತನಿಖೆ

    ಮಂಗಳೂರು: ಸಿಸಿಬಿ ಪೊಲೀಸರು ನವೆಂಬರ್‌ನಲ್ಲಿ ಮಾರಾಟ ಮಾಡಿದ್ದಾರೆನ್ನಲಾದ ಜಾಗ್ವರ್ ಕಾರು ಆ ಬಳಿಕವೂ ಮಂಗಳೂರು ನಗರದಲ್ಲಿ ಸುತ್ತಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ಈ ಕಾರಿನ ಜಿಪಿಎಸ್(ಗ್ಲೋಬಲ್ ಪೊಜಿಷನಿಂಗ್ ಸಿಸ್ಟಂ) ಆಧಾರದಲ್ಲಿ ತನಿಖೆ ನಡೆಯಲಿದೆ.
    ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದರಲ್ಲಿಯೇ ನಗರದಲ್ಲಿ ಸುತ್ತಾಡಿದ್ದು, ತನ್ನ ನಿವಾಸಕ್ಕೂ ಕೊಂಡೊಯ್ಯುತ್ತಿದ್ದರು. ಇದಾದ ಬಳಿಕ ಹಲವು ಸಮಯದವರೆಗೆ ಪ್ರಕರಣದ ಮಧ್ಯವರ್ತಿಯ ಪಳ್ನೀರ್‌ನ ಮನೆಯಲ್ಲೂ ಈ ಕಾರು ನಿಂತಿರುವುದು ಮೂಲಗಳಿಂದ ತಿಳಿದು ಬಂದಿದೆ.
    ಕಾರು ಡೀಲ್ ಪ್ರಕರಣದ ಮಧ್ಯವರ್ತಿ ನಗರದಲ್ಲೇ ವಾಸ್ತವ್ಯವಿದ್ದು, ಹಿಂದಿನಿಂದಲೂ ನಗರಕ್ಕೆ ಬರುವ ಪೊಲೀಸ್ ಅಧಿಕಾರಿಗಳ ಜತೆ ಸಂಪರ್ಕವಿರಿಸಿಕೊಂಡಿದ್ದ. ಈ ಡೀಲ್‌ನಲ್ಲೂ ಆತನೇ ಪ್ರಮುಖ ಸೂತ್ರಧಾರಿ ಎಂದು ತನಿಖಾಧಿಕಾರಿಗಳಿಗೆ ದೃಢಪಟ್ಟಿದ್ದು, ಆತನನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಈಗಾಗಲೇ ನೋಟಿಸ್ ನೀಡಲಾದ ಎಲ್ಲರೂ ಬೆಂಗಳೂರಿನ ಸಿಐಡಿ ಕಚೇರಿಯಲ್ಲೇ ತನಿಖೆ ಎದುರಿಸಬೇಕಿದೆ.

    ಉದ್ಯಮಿಯ ಹಣ ನಾಪತ್ತೆ: ಸಿಸಿಬಿ ಪೊಲೀಸರು 2019 ಜೂನ್ 25ರಂದು ತನ್ನ ಕಚೇರಿಗೆ ದಾಳಿ ನಡೆಸಿ 66 ಲಕ್ಷ ರೂ.ವಶಕ್ಕೆ ಪಡೆದು, ದಾಖಲೆಯಲ್ಲಿ 57.74 ಲಕ್ಷ ರೂ.ಎಂದು ನಮೂದಿಸಿದ್ದಾರೆ. ಈ ಪ್ರಕರಣದಲ್ಲಿ 14.26ಲಕ್ಷ ರೂ. ನಾಪತ್ತೆಯಾಗಿದೆ ಎಂದು ಉದ್ಯಮಿ ಕರುಣಾಕರ ಭಂಡಾರಿ ಆರೋಪಿಸಿದ್ದರು. ಐಸ್ ಪ್ಲಾೃಂಟ್ ನಿರ್ಮಾಣಕ್ಕೆ ಬ್ಯಾಂಕ್‌ನಿಂದ ಸಾಲ ಪಡೆದು ಕಚೇರಿಯಲ್ಲಿಟ್ಟಿದ್ದೆ. ಆದರೆ ಸಿಸಿಬಿ ಅಧಿಕಾರಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ದಾಳಿ ನಡೆಸಿ ಹಣ ವಶಕ್ಕೆ ಪಡೆದಿದ್ದರು. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದೂರು ನೀಡಿದ ಬಳಿಕ ಮತ್ತೆ ಮತ್ತೆ ದಾಳಿ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಆಗಿನ ಸಿಸಿಬಿ ಎಸ್‌ಐ ಕಬ್ಬಾಳ್‌ರಾಜ್ ಮತ್ತು ಸಿಬ್ಬಂದಿ ಹಣ ಪಡೆದು ವಂಚನೆ ಮಾಡಿದ್ದಾರೆ. ನ್ಯಾಯಾಲಯಕ್ಕೂ ದಾಖಲೆ ನೀಡಿದ್ದೇನೆ ಎಂದು ಅವರು ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts