More

    ದೇಶದಲ್ಲಿ ಇರುವವರಿಗೆಲ್ಲ ಒಂದೇ ಕಾನೂನು

    ಧಾರವಾಡ: ರಾಜ್ಯದಲ್ಲಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಲೇ ಇವೆ. ಇದು ಪ್ರತಿಯೊಬ್ಬ ಹಿಂದು ಜಾಗರೂಕರಾಗಬೇಕಾದ ಸಮಯ. ನಾವು ಎಂದೂ ಮೈ ಮರೆಯದಿದ್ದರೆ ಮಾತ್ರ ಹಿಂದುತ್ವಕ್ಕಾಗಿ ಬಲಿದಾನಗೊಂಡ ಹರ್ಷ ಮತ್ತು ಇತರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ನಗರದ ಕಡಪಾ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹಿಂದು ಪರ ಸಂಘಟನೆಗಳ ಬೃಹತ್ ಪ್ರತಿಭಟನಾ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಜಾತ್ಯತೀತವಾಗಿ ಉಳಿಯಬೇಕಾದರೆ ಹಿಂದುಗಳು ಬಹುಸಂಖ್ಯಾತರಾಗಿ ಉಳಿಯಬೇಕು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಯಾವುದೇ ದೇವರನ್ನು ಪೂಜಿಸಲಿ; ಆದರೆ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಹೇಳಬೇಕಾದ ಅನಿವಾರ್ಯತೆ ಇದೆ. ದೇಶದಲ್ಲಿ ಇರುವವರಿಗೆಲ್ಲ ಒಂದೇ ಕಾನೂನು. ಹಿಂದುಗಳಿಗೆ ನಾವಿಬ್ಬರು ನಮಗಿಬ್ಬರು; ಆದರೆ, ಮುಸ್ಲಿಮರಿಗೆ ನಾವು ಐವರು, ನಮಗೆ ಇಪ್ಪತೆôದು ಎಂಬಂತಿದೆ ಎಂದರು.

    ಧಾರವಾಡದ ಶ್ರೀ ಕ್ಷೇತ್ರ ದ್ವಾರಪುರಂನ ಸ್ವಾಮಿ ಶ್ರೀ ಪರಮಾತ್ಮಾನಂದ ಮಹಾರಾಜರು ಮಾತನಾಡಿ, ಹಿಂದುತ್ವ ಮಾಯವಾದರೆ ಹಿಂದುಸ್ತಾನವು ಅಲ್ಲಾಸ್ತಾನ, ಮುಲ್ಲಾಸ್ತಾನ ಆಗಬಹುದು. ಹರ್ಷ ಹುತಾತ್ಮನಾಗಿದ್ದಾನೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ನಮಗೆ ಉಚಿತ ಗ್ಯಾಸ್ ಸಿಲಿಂಡರ್, ಇನ್ನೊಂದು ಮತ್ತೊಂದು ಸಣ್ಣ ಸೌಲಭ್ಯಗಳು ಬೇಡ. ನಮಗೆ ಬೇಕಿರುವುದು ಹಿಂದು ರಾಷ್ಟ್ರ. ಭಾರತ ವಿಭಜನೆಯಾಗಿ 18 ರಾಷ್ಟ್ರ ಆಗಿವೆ. ಮತ್ತೆ ವಿಭಜನೆ ಆಗಲು ಬಿಡುವುದಿಲ್ಲ. ಇದು ಹಿಂದುಗಳ ಸ್ವಾತಂತ್ರ್ಯ ಸಂಗ್ರಾಮ ಎಂದರು.

    ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಕುಂದಗೋಳದಲ್ಲಿ ಕುರಿಗಾಹಿ ಮಹಿಳೆಯ ಕೊಲೆಯಾದಾಗ ಸಿದ್ದರಾಮಯ್ಯ ಮಾತನಾಡಲಿಲ್ಲ. ಕಾಂಗ್ರೆಸ್​ನವರಿಂದ ರಾಷ್ಟ್ರಪ್ರೇಮದ ಪಾಠ ಕೇಳುವ ಅನಿವಾರ್ಯತೆ ನಮಗಿಲ್ಲ. ಗೋವು, ನಾಡಿನ ಸಂರಕ್ಷಣೆಗಾಗಿ ಹರ್ಷನ ರೀತಿ ಹೋರಾಡಲು ನಾವು ಸಿದ್ಧ ಎಂದರು.

    ಶಾಸಕ ಅಮೃತ ದೇಸಾಯಿ ಮಾತನಾಡಿ, ಹಿಂದು ರಾಷ್ಟ್ರ ನಿರ್ವಣಕ್ಕೆ ಪ್ರತಿಯೊಬ್ಬ ಹಿಂದು ಪಣ ತೊಡಬೇಕು ಎಂದರು. ಪ್ರಮುಖರಾದ ಮಲ್ಲಿಕಾರ್ಜುನ ಹೊರಕೇರಿ, ಸಂಜಯ ಕಪಟಕರ, ಶಿವು ಹಿರೇಮಠ, ಶಂಕರ ಮುಗದ, ಬಸವರಾಜ ಕುಂದಗೋಳಮಠ, ಈರೇಶ ಅಂಚಟಗೇರಿ, ಸೀಮಾ ಮಸೂತಿ, ವಿಜಯಾನಂದ ಶೆಟ್ಟಿ, ಸುರೇಶ ಬೇದರೆ, ಜ್ಯೋತಿ ಪಾಟೀಲ, ರಾಜೇಶ್ವರಿ ಸಾಲಗಟ್ಟಿ, ಸುನೀಲ ಮೋರೆ, ಟಿ.ಎಸ್. ಪಾಟೀಲ, ಈರಣ್ಣ ಹಪ್ಪಳಿ, ಇತರರು ಇದ್ದರು. ಶ್ರೀನಿವಾಸ ಕೋಟ್ಯಾನ್ ನಿರೂಪಿಸಿದರು.

    ಹಿಂದೆ ಅಸ್ತಿತ್ವದಲ್ಲಿದ್ದ ಸಿಮಿ ಸಂಘಟನೆಯೇ ಇಂದು ಪಿಎಫ್​ಐ, ಎಸ್​ಡಿಪಿಐ ಆಗಿ ಹಿಂದು ಕಾರ್ಯಕರ್ತರನ್ನು ಕೊಲ್ಲುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಹಿಜಾಬ್ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಕಾಂಗ್ರೆಸ್ ಮಾಡಿತು. ಆದ್ದರಿಂದ ಹಿಂದುಗಳು ಜಾಗೃತರಾಗಿ (ಕಾಂಗ್ರೆಸ್​ಗೆ) ಪ್ರತಿಪಕ್ಷ ಸ್ಥಾನವೂ ಸಿಗದಂತೆ ಮನೆಗೆ ಕಳಿಸಬೇಕು.
    | ಪ್ರಲ್ಹಾದ ಜೋಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts