More

    ಜಾಗತಿಕ ತಾಪಮಾನದಿಂದ ಪರಿಸರ ನಾಶ

    ಚಿಕ್ಕಮಗಳೂರು: ಸೌರ-ಪವನ-ಜಲಶಕ್ತಿಗಳಿಂದ ತಯಾರಾಗುವ ವಿದ್ಯುತ್ ಬಳಸುವುದರಿಂದ ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ತೈಲಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಜತೆ ಪರಿಸರ ಮಾಲಿನ್ಯ ತಪ್ಪಿಸಬಹುದು ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಹೇಳಿದರು.
    ಮೂಡಿಗೆರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ವಿಭಾಗದ ಸಹಯೋಗದಲ್ಲಿ ಪ್ರಗತಿಪರ ಕೃಷಿಕ ಕುಮಾರಸ್ವಾಮಿ ತೋಟದಲ್ಲಿ ಏರ್ಪಡಿಸಿದ್ದ ನೀರಿನ ಸಂರಕ್ಷಣೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜಾಗತಿಕ ತಾಪಮಾನ ನಿಯಂತ್ರಣ ನಮ್ಮೆಲ್ಲರ ಕರ್ತವ್ಯ. ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ತೈಲಗಳನ್ನು ಉರಿಸಿದಾಗ ಹೆಚ್ಚು ಶಾಖ ಬಿಡುಗಡೆಯಾಗುವುದರ ಜತೆಗೆ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಗೊಂಡು ಜಾಗತಿಕ ತಾಪಮಾನ ಹೆಚ್ಚಾಗಿ ಪರಿಸರ ನಾಶವಾಗುತ್ತದೆ ಎಂದರು.
    ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಸ್ತರಣಾ ನಿರ್ದೇಶಕ ಡಾ. ಶಿವಪ್ರಸಾದ್ ಮಾತನಾಡಿ, ಅಗತ್ಯವಿಲ್ಲದ ಸಂದರ್ಭ ವಿದ್ಯುತ್ ಪರಿಕರ ಆಫ್ ಮಾಡಬೇಕು. ಹಗಲಿನಲ್ಲಿ ವಿದ್ಯುತ್ ದೀಪಗಳ ಬಳಕೆ ನಿಯಂತ್ರಿಸಿ ನೈಸರ್ಗಿಕ ಬೆಳಕನ್ನು ಬಳಸುವುದರಿಂದ ವಿದ್ಯುತ್ ಉಳಿಸಬಹುದು. ಸಾರ್ವಜನಿಕ ಸಾರಿಗೆಗಳಾದ ಬಸ್, ರೈಲನ್ನು ಬಳಸುವುದರಿಂದ ಇಂಧನ ಉಳಿತಾಯ ಆಗುವುದಲ್ಲದೆ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದು ಎಂದು ತಿಳಿಸಿದರು.
    ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ ಎಸ್. ಮಾವರ್​ಕರ್ ಮಾತನಾಡಿ, ಹೆಚ್ಚು ವಿದ್ಯುತ್ ವ್ಯಯವಾಗುವ ಬುರುಡೆ ಬಲ್ಬ್, ಫ್ಲೋರೋಸೆಂಟ್ ಟ್ಯೂಬ್​ಲೈಟ್ ಬದಲು ಎಲ್​ಇಡಿ ಬಲ್ಬ್ ಉಪಯೋಗಿಸದರೆ ವಿದ್ಯುತ್ ಉಳಿತಾಯ ಸಾಧ್ಯ. ನೀರನ್ನು ಪೋಲು ಮಾಡಬಾರದು. ಕಾರಣ ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ನೀರನ್ನು ಮಿತವಾಗಿ ಬಳಸಿದರೆ ವಿದ್ಯುತ್ ಉಳಿತಾಯ ಸಾಧ್ಯ ಎಂದರು.
    ಕೃಷಿಕ ಸಮಾಜ ಅಧ್ಯಕ್ಷ ಕುಮಾರಸ್ವಾಮಿ, ವಿಜ್ಞಾನಿ ಡಾ. ಗಿರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts