More

    ಜನ-ವಾಹನ ಸಂಚಾರಕ್ಕೆ ಮುಕ್ತ ಅವಕಾಶ

    ಕಾರವಾರ: ಕರೊನಾ ಲಾಕ್​ಡೌನ್ ಕಾರಣಕ್ಕೆ ಕಳೆದ ಐದು ತಿಂಗಳಿಂದ ಬಂದ್ ಆಗಿದ್ದ ಗೋವಾ-ಕರ್ನಾಟಕ ಗಡಿಯಲ್ಲಿ ವಾಹನ, ಮಾನವ ಸಂಚಾರಕ್ಕೆ ಮಂಗಳವಾರ ಮುಕ್ತವಾಗಿದೆ.

    ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಮುಖಂಡರು ಗೋವಾ ಹಾಗೂ ಕಾರವಾರದ ಅಧಿಕಾರಿಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಹಾಗೂ ಕಾರವಾರ ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿದರು.

    ಗೋವಾದಲ್ಲಿ ಬಾರ್ ಹಾಗೂ ರೆಸ್ಟೋರೆಂಟ್​ಗಳೂ ತೆರೆದುಕೊಂಡಿದ್ದು, ಮೊದಲ ದಿನವೇ ಸಾಕಷ್ಟು ಕಾರವಾರಿಗರು ರಾಜ್ಯ ದಾಟಿ ಲಗ್ಗೆ ಇಟ್ಟಿದ್ದಾರೆ.

    ಸಂಭ್ರಮಾಚರಣೆ ಸಂದರ್ಭದಲ್ಲಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ಸತೀಶ ಕೊಳಂಬಕರ್, ಶ್ರೀಪಾದ ನಾಯ್ಕ, ನೂರ್ ಶೇಖ್, ನೀಲೇಶ, ಪ್ರಮೋದ ಹರಿಕಂತ್ರ ಇದ್ದರು.

    ಕಣ್ಣೀರು ಹಾಕಿದ ತಂದೆ ಮಗಳು: ಗೋವಾ-ಕಾರವಾರ ನಡುವೆ ವ್ಯಾವಹಾರಿಕ ಮಾತ್ರವಲ್ಲದೆ, ಕೌಟುಂಬಿಕ ಸಂಬಂಧವಿದೆ. ಅತಿ ಸಮೀಪದಲ್ಲೇ ಇದ್ದರೂ ಕರೊನಾ ಎರಡೂ ಊರುಗಳನ್ನು ಬೇರ್ಪಡಿಸಿತ್ತು. ಇದರಿಂದ ಎಷ್ಟೋ ಜನ ತಮ್ಮ ಆಪ್ತೇಷ್ಟರನ್ನು ಭೇಟಿಯಾಗಲು ಕಷ್ಟವಾಗಿತ್ತು.

    ಮಂಗಳವಾರ ಮುಕ್ತ ಸಂಚಾರಕ್ಕೆ ಅವಕಾಶ ದೊರೆತಿದ್ದರಿಂದ ಸಾಕಷ್ಟು ಜನ ತಮ್ಮ ಕುಟುಂಬಸ್ಥರು, ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದಾರೆ. ಐದು ತಿಂಗಳ ಬಳಿಕ ತಂದೆಯನ್ನು ಭೇಟಿಯಾದ ಯುವತಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ. ಕಾರವಾರದ ಚಿಕ್ಕಪ್ಪನ ಮನೆಯಲ್ಲಿದ್ದು, ಕಾಲೇಜ್ ಓದುತ್ತಿರುವ ಮಮ್ತಾಜ್​ಳನ್ನು ನೋಡಲು ಆಕೆಯ ತಂದೆ ಗೋವಾ ನಿವಾಸಿ ಜಾವೇದ್ ಮಂಗಳವಾರ ಕಾರವಾರಕ್ಕೆ ಬಂದಿದ್ದರು. ಗಡಿಯಲ್ಲಿಯೇ ತಂದೆ, ಮಗಳು ಪರಸ್ಪರ ಅಪ್ಪಿ ಕಣ್ಣೀರು ಹಾಕಿದ ದೃಶ್ಯ ಎಂಥವರ ಮನ ಕಲಕುವಂತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts