More

    ಜನ ವಸತಿ ಪ್ರದೇಶದಲ್ಲಿ ಕಸದ ರಾಶಿ

    ಮುಂಡರಗಿ: ಪಟ್ಟಣದ ಹೆಸ್ಕಾಂ ಕಚೇರಿ ಎದುರಿನ ಶುದ್ಧ ನೀರಿನ ಘಟಕದ ಬಳಿ ಪುರಸಭೆಯ ವಿವಿಧ ವಾರ್ಡ್​ನಿಂದ ಸಂಗ್ರಹಿಸಿದ ಕಸವನ್ನು ಹಾಕಲಾಗುತ್ತಿದೆ. ಇದರಿಂದ ಸುತ್ತಲೂ ದುರ್ನಾತ ಬೀರುತ್ತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಪುರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ನಿರ್ವಿುಸಿದ್ದರೂ ಕಸವನ್ನು ಹೆಸ್ಕಾಂ ಕಚೇರಿ ಹತ್ತಿರ ಸುರಿಯುತ್ತಿರುವುದರಿಂದ ಜನರಿಗೆ ಕಿರಿಕಿರಿಯಾಗಿದೆ. ಕಸ ಹಾಕುವ ಜಾಗದ ಸುತ್ತಲೂ ಮನೆಗಳಿವೆ. ಜನವಸತಿ ಪ್ರದೇಶದಲ್ಲಿ ಕಸವನ್ನು ಹಾಕುತ್ತಿರುವುದರಿಂದ ಅಲ್ಲಿ ಹಂದಿ, ಬೀದಿನಾಯಿ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿವೆ. ಇದರಿಂದಾಗಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ನಬೀಸಾಬ್ ಕೆಲೂರ ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಹೆಸ್ಕಾಂ ಕಚೇರಿ ಎದುರಿನ ಶುದ್ಧ ನೀರಿನ ಘಟಕದ ಬಳಿ ಇರುವ ಖಾಲಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ವಿುಸುತ್ತಿದ್ದರು. ಹೀಗಾಗಿ ಅದನ್ನು ತಪ್ಪಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಅಲ್ಲಿ ಒಣ ಕಸವನ್ನು ಮಾತ್ರ ಹಾಕಲಾಗುತ್ತಿದೆ. ಎರಡು ದಿನಕ್ಕೊಮ್ಮೆ ಕಸವನ್ನು ಘನತ್ಯಾಜ್ಯ ಘಟಕಕ್ಕೆ ಪೂರೈಸಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts