More

    ಜನಸೇವೆಗೆ ಅಣ್ಣಾಸಾಹೇಬ ಜೊಲ್ಲೆ ಸಿದ್ಧ

    ಚಿಕ್ಕೋಡಿ, ಬೆಳಗಾವಿ: ಸಮಾಜದ ವಿವಿಧ ರಂಗಗಳಲ್ಲಿ ತಮ್ಮ ಸೇವೆ ಸಲ್ಲಿಸುವ ಮೂಲಕ ಸಂಸದ ಅಣ್ಣಾಸಾಹೇಬ ಜೊಲ್ಲೆ ಜನಸೇವೆಗೆ ತಮ್ಮ ಜೀವನ ಮೀಸಲಾಗಿಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

    ನಿಪ್ಪಾಣಿ ನಗರದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 60ನೇ ಹುಟ್ಟು ಹಬ್ಬದ ನಿಮಿತ್ತ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಶನಿವಾರ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಸ್ಥೆ ಪ್ರಾರಂಭಿಸಿ ಕೃಷಿ, ಶಿಕ್ಷಣ, ಕೈಗಾರಿಕೆ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

    ಸಂಸದರಾಗಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವರಾಗಿ ಶಶಿಕಲಾ ಜೊಲ್ಲೆ ಸದಾ ಹೊಸತನದೊಂದಿಗೆ ಈ ಭಾಗದಲ್ಲಿ ಜನರ ಜೀವನಕ್ಕೆ ಅನುಕೂಲ ಒದಗಿಸಲು ಪ್ರಯತ್ನಶೀಲ ಕಾರ್ಯ ಮಾಡುತ್ತಿದ್ದಾರೆ ಎಂದರು. ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನದಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 75 ಲಕ್ಷ ರೂ. ಮೊತ್ತದ ಸಾಮಗ್ರಿಗಳು ಸುಮಾರು 2 ಸಾವಿರ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ದೊರೆತಿದ್ದು, ಪತಿಯಾಗಿ ನನ್ನ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅವರ ಪಾತ್ರ ಹಿರಿದಾಗಿದೆ ಎಂದರು. ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರದು ನನ್ನದು 20 ವರ್ಷದ ಸಂಬಂಧ. ಇವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ. ಹೀಗಾಗಿ ಜೊಲ್ಲೆ ಎಂದರೆ ಯಶಸ್ಸು ಎನ್ನುವ ಮಾತು ನನಗೆ ನೆನಪಿಗೆ ಬರುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರತಿಯೊಬ್ಬರೂ ತಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಹಾಗೂ ವಿಶ್ವಾಸ ಇಟ್ಟು ಗುರಿ ತಲುಪುವವರೆಗೂ ನಿರಂತರ ಪರಿಶ್ರಮಪಡಬೇಕು. ನಾವು ಮಾಡುವ ಕಾರ್ಯಗಳು ಸಮಾಜಮುಖಿಯಾಗಿದ್ದಾಗ ಆ ಪ್ರಯತ್ನಕ್ಕೆ ಎಲ್ಲರ ಬೆಂಬಲ ಸಿಗುತ್ತದೆ. ಇದಕ್ಕೆ ನಾನೇ ಉದಾಹರಣೆ ಎಂದರು. ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು.

    ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಅಂಗವಿಕಲರಿಗೆ ಸಲಕರಣೆ ವಿತರಿಸಲಾಯಿತು. ಜೊಲ್ಲೆ ಕುಟುಂಬ ನಡೆದು ಬಂದ ದಾರಿಯ ಕುರಿತು ಡಾಕ್ಯೂಮೆಂಟರಿ ಹಾಗೂ ಜೊಲ್ಲೆ ಗ್ರೂಪ್‌ನ ಸಹಕಾರಿ ಸಂಸ್ಥೆಯ ಆನ್‌ಲೈನ್ ಲೋನ್ ಆ್ಯಪ್ ಬಿಡುಗಡೆಗೊಳಿಸಲಾಯಿತು. ರಾಯಬಾಗ ಶಾಸಕ ಡಿ.ಎಂ.ಐಹೊಳೆ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ, ಉಪಾಧ್ಯಕ್ಷ ಎಂ.ಪಿ.ಪಾಟೀಲ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷ ನೀತಾ ಬಾಗಡೆ, ರಾಜು ಗುಂಡೆಶಾ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಜಗದೀಶ ಕವಟಗಿಮಠ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ಇತರರಿದ್ದರು. ವಿಜಯ ರಾಹುತ್, ರಮೇಶ ಪಾಟೀಲ ನಿರೂಪಿಸಿದರು. ಬಸವಜ್ಯೋತಿ ಯೂಥ್ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts