More

    ಜನಸಂದಣಿ ತಡೆಯಲು ಹರಸಾಹಸ

    ಲಕ್ಷ್ಮೇಶ್ವರ: ಕರೊನಾ ಹರಡದಂತೆ ತಾಲೂಕಾಡಳಿತ ದಿನಕ್ಕೊಂದು ಆದೇಶ, ಕಟ್ಟಿನಿಟ್ಟು ಮತ್ತು ಮುಂಜಾಗ್ರತೆ ಕ್ರಮ ಕೈಗೊಂಡರೂ ಜನಸಂದಣಿ ತಡೆಯಲು ಅಧಿಕಾರಿಗಳು ಹರಸಾಹಸ ಪಡಬೇಕಾದ ಸ್ಥಿತಿ ನಿರ್ವಣವಾಗಿದೆ.

    ಪಟ್ಟಣದಲ್ಲಿ ತರಕಾರಿ ಮತ್ತು ದಿನಸಿ ವ್ಯಾಪಾರ ಒಂದೇ ಪ್ರದೇಶದಲ್ಲಿ ನಡೆಯುತ್ತಿರುವುದನ್ನು ತಪ್ಪಿಸಿ ಬೇರೆ ಬೇರೆ ಕಡೆ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದರೂ ದಿನದಿಂದ ದಿನಕ್ಕೆ ವ್ಯಾಪಾರಕ್ಕೆ ಜಾತ್ರೆಯಂತೆ ಜನ ಸೇರುತ್ತಿದ್ದಾರೆ. ಆದ್ದರಿಂದ ಶುಕ್ರವಾರ ಮತ್ತೆ ವ್ಯಾಪಾರಸ್ಥರ ಸಭೆ ಕರೆದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಶನಿವಾರದಿಂದ ತಳ್ಳುವ ಗಾಡಿ ಮೂಲಕ ಬೆಳಗ್ಗೆ 6 ರಿಂದ 11ಗಂಟೆವರೆಗೆ ತರಕಾರಿ ವ್ಯಾಪಾರ ಮಾಡಲು ವ್ಯಾಪಾರಸ್ಥರಿಗೆ ಸೂಚಿಸಿದ್ದಾರೆ. ದಿನಸಿ ಅಂಗಡಿಗಳ ಮುಂದೆ ಹಾಕಿರುವ ಅಂತರದ ಚೌಕ್​ನಲ್ಲಿ ನಿಂತು ದಿನಸಿ ಖರೀದಿಸಬೇಕು. ಈ ವೇಳೆ ಪೊಲೀಸ್ ಮತ್ತು ಪುರಸಭೆ ಸಿಬ್ಬಂದಿ ಹಾಜರಿರಬೇಕು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಜೀವನಾವಶ್ಯಕ ವಸ್ತುಗಳನ್ನು ನಿಗದಿತ ವೇಳೆಯಲ್ಲಿ ಮಾರಾಟದ ವ್ಯವಸ್ಥೆ ಮಾಡಬೇಕು ಎಂದು ಎಲ್ಲ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಶನಿವಾರ ಶಿಗ್ಲಿ ಸಂತೆ ಇದ್ದು ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮಾತ್ರ ಸಂತೆ ನಡೆಯಲಿದ್ದು, ಎಲ್ಲರೂ ಸಹಕರಿಸಬೇಕು ಎಂದರು.

    ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಎಎಸ್​ಐ ಬೆಟಗೇರಿ, ತರಕಾರಿ ವ್ಯಾಪಾರಸ್ಥರಾದ ಮಂಜುನಾಥ ಹೊಗೆಸೊಪ್ಪಿನ, ಪುರಸಭೆ ಸಿಬ್ಬಂದಿ ಮಂಜುನಾಥ ಮುದಗಲ್ಲ, ಬಸವಣ್ಣೆಪ್ಪ ನಂದೆಣ್ಣವರ ಇತರರಿದ್ದರು.

    120 ಜನರ ಆರೋಗ್ಯ ತಪಾಸಣೆ

    ಬೇರೆಡೆಯಿಂದ ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ 120 ಜನರ ಆರೋಗ್ಯವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ತಪಾಸಿಸಲಾಯಿತು. ಆರೋಗ್ಯ ತಪಾಸಿಸಿಕೊಂಡ ಯಾರಲ್ಲೂ ಕರೊನಾ ಸೋಂಕು ಕಂಡು ಬಂದಿಲ್ಲ ಎಂದು ವೈದ್ಯಾಧಿಕಾರಿ ಡಾ. ಗಿರೀಶ ಮರಡ್ಡಿ ತಿಳಿಸಿದರು.

    ಆಹಾರ ವಿತರಣೆ: ಪಟ್ಟಣದಲ್ಲಿ ಅಲೆಯುತ್ತಿರುವ ಬುದ್ಧಿಮಾಂದ್ಯರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ ಪೊಲೀಸ್ ಠಾಣೆ ವತಿಯಿಂದ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts