More

    ಜನವಸತಿ, ಪ್ಲಾಂಟೇಷನ್ ಸೂಕ್ಷ್ಮ ಪ್ರದೇಶದಿಂದ ಹೊರಗಿಡಿ

    ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಿರುವ ಪ್ರದೇಶ ವ್ಯಾಪ್ತಿಯಿಂದ ಜನವಸತಿ, ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶವನ್ನು ಕೈಬಿಡಬೇಕೆಂದು ಒತ್ತಾಯಿಸಲು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಿಪಿಐ ತಾಲೂಕು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದ್ದಾರೆ.

    ಪಶ್ಚಿಮಘಟ್ಟದ ಪರಿಸರ ರಕ್ಷಣೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಕಸ್ತೂರಿರಂಗನ್ ವರದಿ ಮಲೆನಾಡು ಭಾಗದ ಬಹುತೇಕ ಕೃಷಿಕರಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಚಿಕ್ಕಮಗಳೂರು ತಾಲೂಕಿನ 27, ಕೊಪ್ಪ 32, ಮೂಡಿಗೆರೆ 27, ಎನ್.ಆರ್.ಪುರ 35 ಹಾಗೂ ಶೃಂಗೇರಿ ತಾಲೂಕಿನ 26 ಗ್ರಾಮಗಳು ವರದಿಯ ಪರಿಧಿಯಲ್ಲಿವೆ. ಆದರೆ ಗ್ರಾಮಗಳಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿದ್ದಾರೆ. ಕಸ್ತೂರಿರಂಗನ್ ಅವರು ಅವೈಜ್ಞಾನಿಕ ಸಮೀಕ್ಷೆ ನಡೆಸಿ ಪಶ್ಚಿಮಘಟ್ಟ ಹಾದುಹೋಗಿರುವ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೊಷಿಸಿದೆ. ಆದರೆ ಜನವಸತಿ, ಕೃಷಿ ಪ್ರದೇಶವನ್ನು ಅವರು ಗಣನೆಗೆ ತೆಗೆದುಕೊಂಡಿಲ್ಲ. ವರದಿ ಜಾರಿಯಾದರೆ ಈ ಪ್ರದೇಶದ ನಿವಾಸಿಗಳ ಬದುಕು ನಿರ್ನಾಮವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ತನ್ನ ವಶದಲ್ಲಿರುವ ಕಂದಾಯ ಮತ್ತು ಗೋಮಾಳ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಮುಂದಾಗಿದೆ. ಈ ನಿರ್ಣಯದಿಂದ ಬಂಡವಾಳಶಾಹಿ ಹಾಗೂ ವಿದೇಶಿ ಸಂಘ-ಸಂಸ್ಥೆಗಳಿಗೆ ಲಾಭವಾಗುತ್ತದೆ. ಆದರೆ ರೈತರು, ಬಡವರಿಗೆ ಸಿಗಬೇಕಾದ ಭೂಮಿ ಕೈತಪ್ಪಿಹೋಗುತ್ತದೆ. ಮಲೆನಾಡು ಪ್ರಾಂತ್ಯದಲ್ಲಿ ಕಾಫಿ ಬೆಳೆಗಾರರು ಒತ್ತುವರಿ ಮಾಡಿರುವ ಭೂಮಿಯನ್ನು ಅವರಿಗೇ ಗುತ್ತಿಗೆ ನೀಡುವುದು ಸರಿ. ಆದರೂ ಕೆಲವು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದ ನಂತರವೇ ಈ ಪ್ರಕ್ರಿಯೆಗೆ ಮುಂದಾಗಬೇಕೆಂದು ಒತ್ತ್ತಾಯಿಸಿದ್ದಾರೆ.

    ಮುಖಂಡರಾದ ಎಚ್.ಎಂ.ರೇಣುಕಾರಾಧ್ಯ, ರಾಧಾ ಸುಂದರೇಶ್, ಕೆ.ಗುಣಶೇಖರ್, ಎಸ್.ವಿಜಯ್ಕುಮಾರ್, ಜಿ.ರಘು, ಕುಮಾರ್, ತಾಲೂಕು ಸಿಪಿಐ ಸಹಕಾರ್ಯದರ್ಶಿ ಹೆಡದಾಳ್ ಕುಮಾರ್, ಗಾಳಿಗುಡ್ಡೆ ದೇಜು, ಖಜಾಂಚಿ ಎ.ಜಯಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts