More

    ಜನರ ಸಂಕಷ್ಟ ದೂರವಾಗಲೆಂದು ಧಾರ್ಮಿಕ ಕೈಂಕರ್ಯ; ಲೋಕ ಕಲ್ಯಾಣಾರ್ಥ ಹೊಳೆಕೊಪ್ಪದಲ್ಲಿ 6 ದಿನ ಹೋಮ-ಹವನ

    ಸೊರಬ: ನಾಡಿನಲ್ಲಿ ಅನೇಕ ರೀತಿಯ ರೋಗ, ಅಕಾಲಿಕ ಮಳೆಯಿಂದಾಗಿ ಜನಜೀವನ ಕಷ್ಟದಾಯಕವಾಗಿದೆ. ನಾನಾ ಸಮಸ್ಯೆಗಳಿಂದ ಜನರು ಹೊರಬಂದು ಶಾಂತಿ, ನೆಮ್ಮದಿ ಪಡೆಯಲೆಂದು ಸಂಕಲ್ಪ ಮಾಡಿ ಲೋಕಕಲ್ಯಾಣಾರ್ಥ 6 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ತಿಳಿಸಿದರು.
    ಲೋಕಕಲ್ಯಾಣಾರ್ಥ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ 1.13 ಲಕ್ಷ ರಾಮತಾರಕ ಮಂತ್ರ ಹೋಮದ ನೇತೃತ್ವ ವಹಿಸಿ ಮಾತನಾಡಿ, ಬೆಳೆಗಳಿಗೆ ಅನೇಕ ರೋಗಗಳು ಕಾಡುತ್ತಿವೆ. ಯೋಗ್ಯ ಬೆಲೆ ಇಲ್ಲದೆ ರೈತರು ಆಹಾರ ಬೆಳೆಗಳನ್ನು ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ. ಎಲೆಚುಕ್ಕೆ ರೋಗದಿಂದ ಅಡಕೆ ನಾಶದಂಚಿನಲ್ಲಿದ್ದು, ಬೆಳೆಗಾರರ ಪರಿಸ್ಥಿತಿ ಸಂಕಷ್ಟದಲ್ಲಿದೆ. ಜಾನುವಾರಗಳಿಗೆ ಚರ್ಮಗಂಟು ರೋಗ ಸೇರಿದಂತೆ ಇನ್ನಿತರ ಕಾಯಿಲೆಗಳು ಬಾಧಿಸುತ್ತಿವೆ. ಹಾಗಾಗಿ ಜನ, ಜಾನುವಾರು ಹಾಗೂ ಬೆಳೆಗಳು ವಿಪತ್ತುಗಳಿಂದ ಮುಕ್ತಿ ಪಡೆಯಲಿ ಎಂದು ಪ್ರಾರ್ಥಿಸಿ ಸೀತಾರಾಮಚಂದ್ರರ ಅನುಷ್ಠಾನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ದಿನವಾದ ಸೋಮವಾರ 1.13 ಲಕ್ಷ ರಾಮತಾರಕ ಮಂತ್ರ ಹೋಮ ಮಾಡಲಾಯಿತು ಎಂದರು.
    ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ರಾಮಪ್ಪ ಅವರು ಜನರು ಸಂಕಷ್ಟದಲ್ಲಿರುವುದನ್ನು ಮನಗಂಡು ಜನತೆಯ ಹಿತ ಕಾಯಲು ದೇವರ ಮೊರೆ ಹೋಗಿದ್ದಾರೆ. ಇವರ ಈ ಸತ್ಕಾರ್ಯಕ್ಕೆ ಜನತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
    ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದಿಂದ ಬಿಲ್ಲವ ಈಡಿಗ ನಾಮಧಾರಿ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಜ.6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ 658 ಕಿ.ಮೀ. ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.
    ಶ್ರೀಪಾದ ಭಟ್ಟ ಮಲ್ಲಕ್ಕಿ ರಾಮತಾರಕ ಮಂತ್ರ ಹೋಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts